ಸಂವಿಧಾನ ಅರ್ಥಮಾಡಿಕೊಳ್ಳುವ ಮೊದಲು ವಿವಿಧತೆಯಲ್ಲಿ ಏಕತೆ ಇರುವ ಭಾರತ ದೇಶವನ್ನು ಅರ್ಥಮಾಡಿಕೊಳ್ಳಬೇಕು:ಖ್ಯಾತ ನ್ಯಾಯವಾದಿ ಕೆ.ಪಿ.ಶ್ರೀನಿವಾಸ್

ಶಿವಮೊಗ್ಗ.ನ.26: ಸಂವಿಧಾನ ಅರ್ಥಮಾಡಿಕೊಳ್ಳುವ ಮೊದಲು ವಿವಿಧತೆಯಲ್ಲಿ ಏಕತೆ ಇರುವ ಭಾರತ ದೇಶವನ್ನು ಅರ್ಥಮಾಡಿಕೊಳ್ಳಬೇಕು ಎಂದು ಖ್ಯಾತ ನ್ಯಾಯವಾದಿ ಕೆ.ಪಿ.ಶ್ರೀನಿವಾಸ್ ಹೇಳಿದ್ದಾರೆ. 
ಅವರು ಇಂದು ನಗರದ ಕಟೀಲು ಅಶೋಕ್‌ಪೈ ಸ್ಮಾರಕ ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ಮಾನಸ ಟ್ರಸ್ಟ್ ಮತ್ತು ಕಟೀಲು ಅಶೋಕ್ ಪೈ ಸ್ಮಾರಕ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆಯ ಐಕ್ಯೂಎಸಿ ವಿಭಾಗ ಆಯೋಜಿಸಿರುವ ಸಂವಿಧಾನ ದಿನಾಚರಣೆ 2022ರ ಅಂಗವಾಗಿ ಸಂವಿಧಾನದ ಮೂಲ ಆಶಯಗಳು ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. 
 ವಿವಿಧ ಸಂಪ್ರದಾಯಗಳು ಮತ್ತು ಆಚರಣೆಗಳು ಇರುವ ಈ ದೇಶದಲ್ಲಿ ಇಡೀ ದೇಶಕ್ಕಾಗಿ ಇರುವ ಏಕೈಕ ಗ್ರಂಥವೆAದರೆ ಅದು ಸಂವಿಧಾನ. ವಿವಿಧ ಧರ್ಮಗಳಿಗೆ ಅವರವರ ಪವಿತ್ರ ಧರ್ಮಗ್ರಂಥಗಳಿರಬಹುದು. ಆದರೆ ಇಡೀ ದೇಶದ ಜನರ ಹಕ್ಕುಗಳನ್ನು ರಕ್ಷಿಸುವ ಏಕೈಕ ಗ್ರಂಥ ಸಂವಿಧಾನವಾಗಿದೆ. 
 ವಿಶ್ವದಲ್ಲೆ ಭಾರತೀಯ ಸಂವಿಧಾನ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದ್ದು, ಇದರ ಮೂಲ ಆಶಯ ಎಲ್ಲರು ಸಮನಾಗಿ ಬದುಕಬೇಕು ಎಂಬುದು. ಆದರೆ ಕೆಲವು ವಿಚ್ಚಿದ್ರ ಶಕ್ತಿಗಳು ಸಂವಿಧಾನವನ್ನು ಮೀಸಲಾತಿ, ಅಂಬೇಡ್ಕರ್, ಜಾತಿಯತೆಯ ಅಪಪ್ರಚಾರ ಮಾಡುತ್ತ ಜನರ ಮನಸ್ಸಿಗೆ ಹುಳಿಹಿಂಡುವ ಕೆಲಸ ಮಾಡುತ್ತಿದ್ದಾರೆ. ಆದರೆ ಭಾರತೀಯ ಸಂವಿಧಾನದ ಅನುಚ್ಚೇದ 15ರಲ್ಲಿ ಧಾರ್ಮಿಕ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದವರಿಗಾಗಿ ಮೀಸಲಾತಿ ಜಾರಿಗೊಳಿಸಿದ್ದಾರೆ. 
 ಸಂವಿಧಾನ ಇಲ್ಲದಿದ್ದಲ್ಲಿ ಹಿಂದುಳಿದ ವರ್ಗದವರು ಮತ್ತು ಕಡು ಬಡವರು ಯಾರು ಕೂಡ ಉನ್ನತಸ್ಥಾನಕ್ಕೆ ಏರುತ್ತಿರಲಿಲ್ಲ. ದಲಿತ ಮಹಿಳೆಯೊಬ್ಬಳು ರಾಷ್ಟçಪತಿಯಾಗಲು ಸಂವಿಧಾನವೇ ಕಾರಣ. ಸಾಮಾಜಿಕ ನ್ಯಾಯ, ಹೆಣ್ಣು-ಗಂಡು ಎಲ್ಲರೂ ಸಮಾನರು ಎಂಬುದು ಸಂವಿಧಾನದ ತತ್ವವಾಗಿದ್ದು, ಜಾತಿಯ ಹೆಸರಿನಲ್ಲಿ ವರ್ಣಭೇದ, ವರ್ಗಭೇದ ಏನೇ ಇದ್ದರೂ ಸಂವಿಧಾನ ಎಲ್ಲರಿಗೂ ಸಮಾನ ಅವಕಾಶ ಕೊಟ್ಟಿದೆ. 
 ಈ ಸಂದರ್ಭದಲ್ಲಿ ಎಂಸಿಸಿಎಸ್ ನಿರ್ದೇಶಕರಾದ ಡಾ.ರಾಜೇಂದ್ರಚೆನ್ನಿ, ಮನಶಾಸ್ತç ವಿಭಾಗದ ಮುಖ್ಯಸ್ಥರಾದ ಡಾ.ಅರ್ಚನ ಕೆ. ಭಟ್, ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ ಅಧ್ಯಕ್ಷತೆ ವಹಿಸಿದ್ದರು

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.