ಸಾಗರ:ಮೊಬೈಲ್ ಮತ್ತು ಲ್ಯಾಪ್ ಟಾಪ್ ಕಳ್ಳತನ ಮಾಡಿದ್ದ ಆರೋಪಿ ಮಾಲು ಸಹಿತ ಬಂಧನ

*ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಸೊರಬ ರಸ್ತೆಯಲ್ಲಿರುವ ಮೊಬೈಲ್ ವರ್ಲ್ಡ್ ಹೆಸರಿನ ಮೊಬೈಲ್ ಶಾಪ್ ನಲ್ಲಿ* ದಿನಾಂಕಃ-29-11-2022 ರಂದು ಮೊಬೈಲ್ ಮತ್ತು ಲ್ಯಾಪ್ ಟಾಪ್ ಅನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪ್ರಕರಣವನ್ನು ದಾಖಲಿಸಲಾಗಿತ್ತು.ಶ್ರೀ ರೋಹನ್ ಜಗದೀಶ್ ಐಪಿಎಸ್, ಎಎಸ್.ಪಿ ಸಾಗರ ಉಪ ವಿಭಾಗ ಮತ್ತು ಶ್ರೀ ಸೀತಾರಂ, ಪಿಐ ಸಾಗರ ಟೌನ್ ರವರ ಮಾರ್ಗದರ್ಶನದಲ್ಲಿ ಶ್ರೀ ಡಿ. ಟಿ ಸಾಗರ್ ಕರ್ ರವರ ನೇತೃತ್ವದಲ್ಲಿ ಸಿಬ್ಬಂಧಿಗಳಾದ ರತ್ನಾಕರ್, ನಾಗರಾಜ್, ಶ್ರೀಧರ್ ಮತ್ತು ಶಿಲ್ಪಾ ರವರುಗಳನ್ನೊಳಗೊಂಡ ತಂಡ ನೇಮಕ ಮಾಡಲಾಯಿತು.
 *ಪ್ರಕರಣ ವರದಿಯಾದ ಒಂದು ದಿನದ* ಒಳಗೆ ಆರೋಪಿತನಾದ *ವಿನಯ್ ಎಸ್ ಎಂ, 24 ವರ್ಷ, ಜೆಪಿ ನಗರ ಸಾಗರ ಟೌನ್* ಈತನನ್ನು ದಸ್ತಗಿರಿ ಮಾಡಿ,  ಅಂದಾಜು *ಮೌಲ್ಯ 71,000/- ರೂಗಳ 1ಲ್ಯಾಪ್ ಟಾಪ್ ಮತ್ತು 8 ಮೊಬೈಲ್ ಫೋನ್* ಗಳನ್ನು ವಶಪಡಿಸಿಕೊಳ್ಳಲಾಯಿತು.
ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರ್ ಪಡಿಸಲಾಗಿರುತ್ತದೆ. ಸದರಿ ತಂಡ ಉತ್ತಮ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿರುತ್ತಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.