*ಹಿಂದೂ ಜಾಗರಣ ವೇದಿಕೆ ಶಿವಮೊಗ್ಗ*ಕಾರ್ಯಾಲಯ ಉದ್ಘಾಟನೆ: ಹಿಂದೂಗಳ ಸಂಘಟನೆಯ ಬೆಂಬಲ ಮತ್ತು ಆಶೀರ್ವಾದ ಪಡೆಯುವ ದೃಷ್ಟಿಯಿಂದ ಪ್ರಾಂತ ಸಮ್ಮೇಳನ : ದಕ್ಷಿಣ ಪ್ರಾಂತಸಂಚಾಲಕ ದೊ.ಕೇಶವಮೂರ್ತಿ
ಶಿವಮೊಗ್ಗ ನಗರದಲ್ಲಿ ದಿನಾಂಕ 25.12.22 ರ ಭಾನುವಾರ ರಂದು *ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ತ್ರೈ ವಾರ್ಷಿಕ ಸಮ್ಮೇಳನ* ನಡೆಯಲಿದ್ದು ಇದರ ಕಾರ್ಯಾಲಯವು ಇಂದು ಬೆಳಗ್ಗೆ ನಗರದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ *ಕಾರ್ಯಾಲಯ ಉದ್ಘಾಟನಾ ಕಾರ್ಯಕ್ರಮವು* ಹಿಂದೂ ಜಾಗರಣ ವೇದಿಕೆಯ ಪ್ರಾಂತ ಸಂಚಾಲಕರಾದ *ದೊ. ಕೇಶವಮೂರ್ತಿ* ಅವರ ಉಪಸ್ಥಿತಿಯಲ್ಲಿ ನಡೆಯಿತು.
ಶಿವಮೊಗ್ಗ: ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ವಿಭಾಗದ ತ್ರೈವಾರ್ಷಿಕ
ಪ್ರಾಂತ ಸಮ್ಮೇಳನ ಹಿಂದುಗಳ ಸಂಘಟನೆಯ ಬೆಂಬಲ ಮತ್ತು ಆಶೀರ್ವಾದ ಪಡೆಯುವ ದೃಷ್ಟಿಯಿಂದ
ಶಿವಮೊಗ್ಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹಿಂದು ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ
ಸಂಚಾಲಕರಾದ ದೊ.ಕೇಶವಮೂರ್ತಿ ಹೇಳಿದ್ದಾರೆ.
ಹಿಂದೂಗಳ ಸಂಘಟನೆಯ ಬೆಂಬಲ ಮತ್ತು ಆಶೀರ್ವಾದ ಪಡೆಯುವ ದೃಷ್ಟಿಯಿಂದ ಪ್ರಾಂತ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ: ದಕ್ಷಿಣ ಪ್ರಾಂತಸಂಚಾಲಕ ದೊ.ಕೇಶವಮೂರ್ತಿ
ಅವರು ಇಂದು ನಗರದ ಬಿಹೆಚ್ ರಸ್ತೆಯ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹಿಂದು
ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತದ ಕಾರ್ಯಾಲಯ ಉದ್ಘಾಟನೆಯನ್ನು ನೆರವೇರಿಸಿ
ಹಿಂದು ಜಾಗರಣ ವೇದಿಕೆಯಿಂದ ಹಲವಾರು ಹೋರಾಟಗಳನ್ನು ಸಂಘಟಿಸಿ ಹಿಂದು ಧರ್ಮದ ರಕ್ಷಣೆಗೆ
ಮುಂದಾಗಿದ್ದೇವೆ. ಲವ್ ಜಿಹಾದ್ ವಿರುದ್ದ ಮತ್ತು ದೇವಸ್ಥಾನಗಳನ್ನು ಉರುಳಿಸುವ ಷಡ್ಯಂತ್ರದ ವಿರುದ್ಧ ಕೋಮುಗಲಭೆ ಸೃಷ್ಟಿಸುವವರ ವಿರುದ್ಧ ಹಿಂದು ಜಾಗರಣ ವೇದಿಕೆ ನಿರಂತರ ಹೋರಾಟ ಮಾಡುತ್ತಾ ಬಂದಿದೆ. ಮೈಸೂರಿನಲ್ಲಿ ದೇವಸ್ಥಾನದ ಬೃಹತ್ ಗೋಪುರವನ್ನು ಕೆಡವಿದಾಗ ಹಿಂದು ಜಾಗರಣ ವೇದಿಕೆ ಹೋರಾಟದ ಮೂಲಕ ದೇವಾಲಯ ಒಡೆಯದಂತೆ ಕಾನೂನು ಮಾಡುವಲ್ಲಿ ಸಫಲವಾಯಿತು. ಪರಿಸರ ಪ್ರಕೃತಿದತ್ತ ಮಲೆನಾಡಿನ ಸೊಬಗನ್ನು ಸವಿಯುತಿದ್ದ ಕರ್ನಾಟಕದ ಜನರಿಗೆ ಕೆಲವು ರಾಷ್ಟ್ರ ದ್ರೋಹಿಗಳು ಶಿವಮೊಗ್ಗದಲ್ಲು ಭಯದ ವಾತಾವರಣ ನಿರ್ಮಿಸಿ ಸೂಕ್ಷ್ಮ ಪ್ರದೇಶವನ್ನಾಗಿ ಮಾಡಿದ್ದಾರೆ.
ಹಿಂದುಪರ ಹೋರಾಟಗಾರನ ಕೊಲೆ ಮಾಡಿದ್ದಲ್ಲದೆ ಅವರ ಮನೆಯವರಿಗೆ ತಲವಾರ್ ತೋರಿಸಿ
ಬೆದರಿಕೆ ಹಾಕುವ ಮಟ್ಟಕ್ಕೆ ಕೆಲ ಶಕ್ತಿಗಳು ಹೋಗಿವೆ. ಆದ್ದರಿಂದ ಶಿವಮೊಗ್ಗದಲ್ಲೆ ಹಿಂದು ಜಾಗರಣ ವೇದಿಕೆಯ ಕಾರ್ಯಾಲಯವನ್ನು ಸ್ಥಾಪಿಸಿದ್ದೇವೆ. ಮೂರನೇ ಪ್ರಾಂತ ಸಮ್ಮೇಳನವನ್ನು ಕೂಡ ಇಲ್ಲೇ ಮಾಡಲಿದ್ದೇವೆ. ಅದಕ್ಕಾಗಿ ಸ್ವಾಗತ ಸಮಿತಿ ಕೂಡ ರಚನೆ ಮಾಡಿದ್ದೇವೆ. ಶಿವಮೊಗ್ಗ ಹಿಂದು ಜಾಗರಣ ವೇದಿಕೆಯ ಶಕ್ತಿ ಕೇಂದ್ರ ಆಗಬೇಕೆಂಬ ನಮ್ಮ ಅಪೇಕ್ಷೆಯಿದ್ದು, ಹಿಂದು ಭಾಂದವರು ಬೆಂಬಲ ನೀಡಿ ಆಶೀರ್ವದಿಸಬೇಕು ಎಂದರು.
ಈ ಸಂದರ್ಭದಲ್ಲಿ ಹಿಂದು ಜಾಗರಣ ವೇದಿಕೆಯ ಪ್ರಮುಖರಾದ ಡಾ.ತೇಜಸ್ವಿ, ಡಾ.ರವಿಕಿರಣ್, ಸುಭಾಷ್, ಚನ್ನಬಸಪ್ಪ, ಸುರೇಖಾ ಮುರುಳೀಧರ್, ಸುವರ್ಣಶಂಕರ್, ಪ್ರಭು, ಹರ್ಷಕಾಮತ್, ಮುರುಳೀಧರ್, ರಾಮು, ಉದಯ್‌ಕಡಂಬ, ಎನ್.ಡಿ. ಸತೀಶ್, ಶ್ರೀನಿವಾಸ್‌ಕಾಸರವಳ್ಳಿ, ಕಿಯೋನಿಕ್ಸ್ ನಿರ್ದೇಶಕ ಪ್ರಶಾಂತ್ ಪಂಡಿತ್, ಪ್ರಶಾಂತ್‌ಸಾಗರ್, ರವಿಕಿರಣ್ ಸ್ವಾಗತ ಸಮಿತಿ ಅಧ್ಯಕ್ಷರಾದ , ಸ್ವಾಗತ ಸಮಿತಿ ಉಪಾಧ್ಯಕ್ಷರಾದ *ಎನ್ ಜೆ ರಾಜಶೇಖರ್ (ಸುಭಾಷ್)*, ಸಮಿತಿ ಸದಸ್ಯರಾದ *ಪ್ರಶಾಂತ್ ಕಾಸರಗೋಡು, ಹರ್ಷ ಕಾಮತ್, ಶ್ರೀಮತಿ ಸುವರ್ಣ ಶಂಕರ್* ಉಪಸ್ಥಿತರಿದ್ದರು.
Leave a Comment