ಶಿವಮೊಗ್ಗ ನಗರದ ಎಪಿಎಂಸಿ ಮಾರುಕಟ್ಟೆಯ ಅಡಿಕೆ ವರ್ತಕರ ಸಂಘದ ಸಭಾಂಗಣದಲ್ಲಿ ಅಡಿಕೆ ವರ್ತಕರ ಸಭೆ

ಶಿವಮೊಗ್ಗ:  ಈ ದಿನ ದಿನಾಂಕಃ- 29-11-2022  ರಂದು ಸಂಜೆ ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು *ಶಿವಮೊಗ್ಗ ನಗರದ ಎಪಿಎಂಸಿ ಮಾರುಕಟ್ಟೆಯ ಅಡಿಕೆ ವರ್ತಕರ ಸಂಘದ ಸಭಾಂಗಣದಲ್ಲಿ ಅಡಿಕೆ ವರ್ತಕರ ಸಭೆಯನ್ನು ನಡೆಸಿ,* ಈ ಕೆಳಕಂಡ ಸೂಚನೆಗಳನ್ನು ನೀಡಿದರು. 

1) ಅಡಿಕೆ ಮಂಡಿಗಳ ಮಾಲೀಕರು *ಮುಂಜಾಗೃತಾ ಕ್ರಮವಾಗಿ ತಮ್ಮ ತಮ್ಮ ಮಂಡಿಗಳಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು* ಅಳವಡಿಸಿಕೊಳ್ಳುವುದು. 

2)  ಅಡಿಕೆಯನ್ನು ಸಾಗಾಟ ಮಾಡುವಾಗ ಮುಂಚಿತವಾಗಿ *ವಾಹನಗಳ ಚಾಲಕರು ಮತ್ತು ಸಹಾಯಕರುಗಳ ಪೂರ್ವಾಪರವನ್ನು*  ಪರಿಶೀಲಿಸಿ ಅವರ ಮಾಹಿತಿಯನ್ನು ಖಚಿತ ಪಡಿಸಿಕೊಂಡ ನಂತರವೇ ಸಾಗಾಟ ಮಾಡುವುದು. 

3) ಅಡಿಕೆ ಮಂಡಿಗಳಲ್ಲಿ *ಸಂಗ್ರಹಿಸಿರುವ ಮತ್ತು ಸಾಗಾಟ ಮಾಡುವ ಅಡಿಕೆಗೆ ವಿಮೆಯನ್ನು* ಮಾಡಿಸುವುದು. 

4) ಅಡಿಕೆ ಸಾಗಾಟ ಮಾಡುವಾಗ *ಟ್ರಾನ್ಸ್ ಪೋರ್ಟ್ ಏಜನ್ಸಿ ಮತ್ತು ಮಾಲೀಕರ ಪೂರ್ವಾಪರವನ್ನು*  ಪರಿಶೀಲಿಸಿಕೊಳ್ಳುವುದು. 

5) ಅಡಿಕೆ ಸಾಗಾಟ ಮಾಡುವ ವಾಹನಗಳಿಗೆ *ಕಡ್ಡಾಯವಾಗಿ ಜಿಪಿಎಸ್ ಗಳನ್ನು* ಅಳವಡಿಸಿಕೊಳ್ಳುವುದು ಅಥವಾ ಜಿಪಿಎಸ್ ಅನ್ನು ಅಳವಡಿಸಿರುವ ವಾಹನಗಳಲ್ಲಿಯೇ ಅಡಿಕೆಯನ್ನು ಸಾಗಾಟ ಮಾಡುವುದು. 

6) ಯಾವುದೇ *ಸಂಶಯ ಕಂಡುಬಂದಲ್ಲಿ ಅಥವಾ ತುರ್ತು ಸಹಾಯಕ್ಕಾಗಿ* ಹತ್ತಿರದ ಪೊಲೀಸ್ ಠಾಣೆ / ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ - 9480803300 /  ತುರ್ತು ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡುವುದು.
  
    ಈ ಸಂದರ್ಭದಲ್ಲಿ *ಪೊಲೀಸ್‌ ಉಪಾಧೀಕ್ಷಕರು, ಶಿವಮೊಗ್ಗ ಉಪ ವಿಭಾಗ, ಪೊಲೀಸ್‌ ನಿರೀಕ್ಷಕರು, ವಿನೋಬನಗರ ಪೊಲೀಸ್ ಠಾಣೆ ಮತ್ತು ಪೊಲೀಸ್ ನಿರೀಕ್ಷಕರು  ಕೋಟೆ ಪೊಲೀಸ್ ಠಾಣೆ* ರವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.