ಸಾಧನೆಯಿಂದ ಮಾತ್ರ ಇತಿಹಾಸ ಸೃಷ್ಟಿಯಾಗಲು ಸಾಧ್ಯ: ಡಾ.ನಿರ್ಮಲಾನಂದನಾಥ ಸ್ವಾಮೀಜಿ

ಶಿವಮೊಗ್ಗ, ನ.೦೪:
ನಾವು ಗಳಿಸಿದ ಹಣ ಆಸ್ತಿ ಸಂಪತ್ತು ಯಾವುದು ಶಾಶ್ವತವಲ್ಲ. ಸಾವು ನಿತ್ಯವೂ ನಮ್ಮನ್ನು ಅಟ್ಟಿಸಿಕೊಂಡು ಬರುತ್ತಿದೆ. ನಾವು ಹುಟ್ಟಿದ ದಿನದಿಂದ ಅದು ನಮ್ಮನ್ನ ಹಿಂಬಾಲಿಸುತ್ತಲೇ ಬರುತ್ತಿದೆ. ಎಲ್ಲರಲ್ಲೂ ಒಂದೊದು ಗುರಿ ಇರುತ್ತದೆ. ಅದರಲ್ಲೂ ಅಂತಿಮ ಗುರಿ ಎಂದರೆ ಮೋಕ್ಷ. ಯಾವುದೇ ಸಾಧಕ ಸಾಧಕನಾಗಲು ಕಾರಣ ತನ್ನ ಹಿತವನ್ನು ಮರೆತು, ಬೇರೆಯವರ ಮೊಗದಲ್ಲಿ ಅವರ ನೋವನ್ನು ಅಡಗಿಸಿ ಸಂತೋಷವನ್ನು ತಂದು ಕೊಡುವಂತಹ ವ್ಯಕ್ತಿಯೇ ಸಾಧಕನಾಗಲು ಸಾಧ್ಯ ಎಂದು ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಅವರು ಆದಿಚುಂಚನಗಿರಿ ಶಾಖಾ ಮಠದ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ೩೨ನೇ ವಾರ್ಷಿಕೋತ್ಸವದಲ್ಲಿ ಉದ್ಘಾಟನೆಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಪ್ರತಿ ವರ್ಷ ಇಂತಹ ಸಾಧಕರನ್ನು ಗುರುತಿಸಿ ಗೌರವಿಸುವಂತಹ ಕೆಲಸವನ್ನು ನಮ್ಮ ಆದಿಚುಂಚನಗಿರಿ ಸಂಸ್ಥೆ ಮಾಡುತ್ತಿದೆ. ಈ ವರ್ಷ ಹತ್ತು ಸಾಧಕರನ್ನು ಗುರುತಿಸಿ ಗೌರವಿಸುತ್ತಿದೆ. ಸಾಧನೆಯ ಹಾದಿಯನ್ನು ಅವಲೋಕಿಸುವಾಗ ಕೆಲವೇ ಕೆಲವರು ಮಾತ್ರ ಇತಿಹಾಸವನ್ನು ಸೃಷ್ಟಿಸುತ್ತಾರೆ ಉಳಿದ ಎಲ್ಲರೂ ಅದನ್ನು ಓದುತ್ತಾರೆ. ಅಂದರೆ ಸಾಧನೆ ಇಲ್ಲಿ ಇತಿಹಾಸ ಎಂದಾಗುವುದಿಲ್ಲವೇ? ಅಂತಹ ಸಾಧಕ ನಿಜಕ್ಕೂ ಗೌರವಾನ್ವಿತರಾಗುತ್ತಾರೆ ಎಂದರು.

ಶಿವಮೊಗ್ಗ ಆದಿಚುಂಚನಗಿರಿ ಶಾಖಾಮಠ ಕಳೆದ ೩೨ ವರ್ಷಗಳ ಹಿಂದೆ ಆದಿಚುಂಚನಗಿರಿ ಪೀಠಾಧೀಶರಾಗಿದ್ದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಆರಂಭಿಸಿದ್ದ ಸಂಸ್ಥೆ ಅದು ಇಂದು ಹೆಮ್ಮೆರವಾಗಿ ಬೆಳೆದಿದೆ. ವಿವಿಧ ಆಯಾಮಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿನ ಶಾಖೆಯ ಸಮಗ್ರ ಜವಾಬ್ದಾರಿ, ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿರುವ ಮಹಾ ಸಂಸ್ಥಾನದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಶ್ರಮ ಹಾಗೂ ಕರ್ತವ್ಯದಿಂದ ಶಿವಮೊಗ್ಗ ಶಾಖಾಮಠ ರಾಜ್ಯ ಅಷ್ಟೇ ಅಲ್ಲದೆ ದೇಶ ವಿದೇಶಗಳಲ್ಲಿ ತನ್ನದೇ ಆದ ವಿಶೇಷತೆಯನ್ನು ತೋರಿಸುವ ಮೂಲಕ ಗುರುತಿಸಿಕೊಂಡಿದೆ. ಇದು ಆದಿಚುಂಚನಗಿರಿ ಶಾಖಾ ಮಠದ ಹಿರಿಮೆಯ ಸಂಗತಿ ಎಂದರು.

ಆದಿಚುಂಚನಗಿರಿ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಶಿವಮೊಗ್ಗ ಜಿಲ್ಲೆಯಲ್ಲಿ ೩೨ ವರ್ಷಗಳ ಕಾಲ ಧಾರ್ಮಿಕ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ಅದೃಷ್ಠ. ಶ್ರೀಮಠದ ಕಾರ್ಯದಲ್ಲಿ ಆನೇಕರು ಕೈ ಜೋಡಿಸಿದ್ದರ ಪರಿಣಾಮವಾಗಿ ಇದು ಸಾದ್ಯವಾಯಿತು. ಮಠದ ಆರಂಭದ ದಿನದಿಂದಲೂ ಆನೇಕರು ಧಾರ್ಮಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಸಹಕಾರ ನೀಡಿದ್ದಾರೆ. ಅವರೆಲ್ಲರನ್ನು ಸ್ಮರಿಸುವುದು ಮಠದ ಕರ್ತವ್ಯ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡುತ್ತಾ, ಜಾತಿ, ಧರ್ಮ ಬೇಧವಿಲ್ಲದೇ ನಾವೆಲ್ಲ ಒಂದೇ ಎಂಬ ಭಾವನೆಯಿಂದ ವಿದ್ಯಾಬ್ಯಾಸ ಮಾಡುತ್ತಿರುವ ಇಲ್ಲಿನ ವಿದ್ಯಾರ್ಥಿಗಳು ರಾಷ್ಟç ಮತ್ತು ಅಂತರಾಷ್ಟಿçÃಯ ಮಟ್ಟದಲ್ಲಿ ಕ್ರೀಡೆ, ಆಧ್ಯಾತ್ಮಿಕ, ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದರು.

ಶ್ರೀ ಆದಿಚುಂಚನಗಿರಿ ಮಠದ ಶಾಖೆಗಳು ರಾಜ್ಯದಲ್ಲಿ ಅಲ್ಲದೇ ಇಡೀ ದೇಶದಲ್ಲಿ ಶಾಖೆಗಳನ್ನು ಹೊಂದಿದ್ದು, ಶ್ರೀ ಆದಿಚುಂಚಗಿರಿ ಒಂದು ಮಾದರಿ ಮಠವಾಗಿದ್ದು, ಯಾವುದೇ ಕಪುö್ಪಚುಕ್ಕೆ ಇಲ್ಲದೇ ಹೆಸರು ಮಾಡುತ್ತಿದೆ. ರಾಜ್ಯ ಮತ್ತು ಅಂತರಾಷ್ಟಿçÃಯ ಮಟ್ಟದಲ್ಲಿ ಭಾರತೀಯ ಸಂಸ್ಕöÈತಿಯ ಪರಂಪರೆಯನ್ನು ಪರಿಚಯಿಸಿದ ಹಿರಿಮೆಯನ್ನು ಶ್ರೀಮಠವು ಹೊಂದಿದೆ ಎಂದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಶಾಖಾ ಮಠದ ವಿವಿಧ ಶಿಕ್ಷಣ ಸಂಸ್ಥೆಗಳು ಒಟ್ಟಾಗಿ ಸೇರಿ ಹೊರತಂದ ಜ್ಞಾನಚುಂಚಾದ್ರಿ, ಸಾಮಾನ್ಯ ಜ್ಞಾನ ಪುಸ್ತಕವನ್ನು ಪೂಜ್ಯರಿಂದ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪಾಲಿಕೆಯ ಮೇಯರ್ ಶಿವಕುಮಾರ್ ಎಸ್., ಕಾಂಗ್ರೆಸ್ ಮುಖಂಡ ಆರ್.ಎಂ.ಮAಜುನಾಥಗೌಡ, ಕಸಾಪ ಜಿಲ್ಲಾದ್ಯಕ್ಷ ಡಿ.ಮಂಜುನಾಥ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸಿರಿಬೈಲ್ ಧರ್ಮೇಶ್, ನಗರ ಪಾಲಿಕೆ ಸದಸ್ಯೆ ಸುವರ್ಣ ಶಂಕರ್, ಭದ್ರಾಕಾಡಾ ಅಧ್ಯಕ್ಷೆ ಕೆ.ಬಿ.ಪವಿತ್ರಾ ರಾಮಯ್ಯ ಸೇರಿದಂತೆ ಹಲವರಿದ್ದರು.
ಬಾಕ್ಸ್ : ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ
ಶ್ರೀ. ಆದಿಚುಂಚನಗಿರಿ ಶಾಖಾ ಮಠದ ೩೨ನೇ ವಾರ್ಷಿಕೋತ್ಸವದಲ್ಲಿ ಶಿಕ್ಷಣ, ಧಾರ್ಮಿಕ, ವೈದ್ಯಕೀಯ, ಸಂಗೀತ ಕ್ಷೇತ್ರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರನ್ನು ಗೌರವಿಸಲಾಯಿತು. ಶ್ರೀ.ರಾಮಕೃಷ್ಣ ವಿದ್ಯಾನಿಕೇತನದ ಡಿ.ಎಂ.ದೇವರಾಜ್, ವಾಸವಿ ವಿದ್ಯಾಲಯದ ಕಾರ್ಯದರ್ಶಿ ಎಸ್.ಕೆ.ಶೇಷಾಚಲ, ರಂವೀAದ್ರ ನಗರದ ಗಣಪತಿ ದೇವಾಲಯದ ಪ್ರಧಾನ ಅರ್ಚಕ ಅ.ಪ.ರಾಮಭಟ್ಟ, ಭದ್ರಾವತಿಯ ನೇತ್ರತಜ್ಞ ಡಾ.ನರೇಂದ್ರಭಟ್, ಜ್ಯೋತಿಷ್ಯಶಾಸ್ತçಜ್ಞ ಸಾಯಿ ನಾಗೇಶ್, ಗಾಯಕ ಭದ್ರಾವತಿಯ ಶಿವಲಿಂಗಪ್ಪ, ನಾಟ್ಯಗುರು ಗೀತಾ ದಾತಾರ್, ವೈದ್ಯ ಡಾ.ವಿಮಲ ಶೆಟ್ಟಿ, ಸಮಾಜ ಸೇವಕ ಎಡ್ವರ್ಡ್ ಪಿಂಟೋ, ದೇವಾಂಗ ಸಮಾಜದ ರಾಜ್ಯಾಧ್ಯಕ್ಷ ಪಿ.ಆರ್.ಗಿರಿಯಪ್ಪ ಅವರನ್ನು ಪೂಜ್ಯರು ಸನ್ಮಾನಿಸಿದರು

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.