*ಮುಖದೃಢೀಕರಣದ ಮುಖಾಂತರ ಜೀವಂತ ಪ್ರಮಾಣ ಪತ್ರ*

ಶಿವಮೊಗ್ಗ ನವೆಂಬರ್ 22 : 
      ಕಾರ್ಮಿಕರ ಭವಿಷ್ಯನಿಧಿ ಸಂಸ್ಥೆ ಕಚೇರಿಯು ಮುಖದೃಢೀಕರಣ ತಂತ್ರಜ್ಞಾನದ ಮೂಲಕ ಡಿಜಿಟಲ್ ಜೀವಂತ ಪ್ರಮಾಣ ಪತ್ರವನ್ನು ಸ್ವೀಕರಿಸುವ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. 
     ಈ ತಂತ್ರಜ್ಞಾನವು ಪಿಂಚಣಿದಾರರ ಬಾಹ್ಯ ಬಯೋಮೆಟ್ರಿಕ್ ಸಾಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಪಿಂಚಣಿದಾರರು ಮನೆಯಲ್ಲಿಯೇ ಕುಳಿತು ತಮ್ಮ ಆಂಡ್ರಾಯ್ಡ್ ಮೊಬೈಲ್ ಫೋನ್‍ನಿಂದ ಡಿಜಿಟಲ್ ಲೈಫ್ ಸರ್ಟಿಫಿಕೇಟನ್ನು  ಫೇಸ್ ಅಥೆಂಟಿಕೇಶನ್ ಟೆಕ್ನಾಲಜಿ (ಎಫ್.ಎ.ಟಿ) ಮೂಲಕ ಸಲ್ಲಿಸಬಹುದಾಗಿದೆ. 
     ಈ ತಂತ್ರಜ್ಞಾನವು, ಹೆಬ್ಬೆಟ್ಟಿನ ಗುರುತು ಮತ್ತು ಅಕ್ಷಿಪಟಲದ ಮೂಲಕ ಡಿ.ಎಲ್.ಸಿ ಸಲ್ಲಿಸಲು ಸಾಧ್ಯವಾಗದೇ ಇರುವಂತಹ, ಆರೋಗ್ಯ ಸಮಸ್ಯೆಯಿಂದ ಹಾಸಿಗೆ ಹಿಡಿದಿರುವಂತಹ ಮತ್ತು ವಿದೇಶದಲ್ಲಿ ನೆಲೆಸಿರುವಂತಹ ಪಿಂಚಣಿದಾರರಿಗೆ ಅನುಕೂಲವಾಗಲಿದೆ. 
.      ಇದರಿಂದಾಗಿ ಅವರು ಕಚೇರಿಗೆ ಭೇಟಿ ಕೊಡುವುದಾಗಲೀ, ಪೋಸ್ಟ್ ಆಫೀಸ್ ಅಥವಾ ಕಾಮನ್ ಸರ್ವಿಸ್ ಸೆಂಟರ್‍ಗಳಿಗೆ ಹೋಗಿ ಸಮಯ ವ್ಯರ್ಥ ಹಾಗೂ ಹಣವನ್ನು ಖರ್ಚು ಮಾಡುವುದನ್ನು ಸಹ ನಿಲ್ಲಿಸಬಹುದಾಗಿದೆ.
     ಕ್ಲೈಂಟ್ ಇನ್‍ಸ್ಟಾಲೇಶನ್‍ಗಾಗಿ ಮತ್ತು ಆಂಡ್ರಾಯ್ಡ್ ಫೇಸ್ ಅಪ್ಲಿಕೇಶನ್ ಗಾಗಿ http://jeevanpramaan.gov.in/package/download ಈ ಲಿಂಕ್ ಅನ್ನು ಈ ಕೆಳಗೆ ನೀಡಲಾಗಿದೆ. ಈ ಪ್ರಕ್ರಿಯೆಯನ್ನು ವಿವರಿಸಲು ಯೂಟ್ಯೂಬ್ ವೀಡಿಯೋ ಲಿಂಕ್ http://youtube/iSvXBHPfOmk(https://www.youtube.com/watch?v=iSvXBHPfOmk) ಸಹ ಲಭ್ಯವಿದೆ ಎಂದು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.