ಶಿವಮೊಗ್ಗ ಆಟೋ ಚಾಲಕರ ಸಭೆ: ಎಲ್ಲಾ ಆಟೋಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಿಕೊಳ್ಳಲು ಪೋಲೀಸ್ ಅಧಿಕಾರಿಗಳ ಸೂಚನೆ
ಶಿವಮೊಗ್ಗ: ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ ನ.1 ರಂದು ಮಧ್ಯಾಹ್ನ ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಆಟೋ ಚಾಲಕರ ಸಭೆಯನ್ನು ನಡೆಸಿ, ಅವರುಗಳ ಕುಂದುಕೊರತೆಯನ್ನು ಆಲಿಸಲಾಯಿತು ಮತ್ತು ಆಟೋ ಚಾಲಕರಿಗೆ ಈ ಕೆಳಕಂಡ ಸೂಚನೆಗಳನ್ನು ನೀಡಲಾಯಿತು.
*2) ಆಟೋ ಚಾಲಕರು ಸಾರ್ವಜನಿಕರೊಂದಿಗೆ ಸೌಜನ್ಯ ರೀತಿಯಲ್ಲಿ ವರ್ತಿಸುವುದು*
*3) ಶಿಸ್ತಿನ ಸಂಬಂಧ ಆಟೋ ಚಾಲಕರು, ಚಾಲನೆಯ ವೇಳೆಯಲ್ಲಿ ಕಡ್ಡಾಯವಾಗಿ ಸಮವಸ್ತ್ರವನ್ನು ಧರಿಸುವುದು.*
*4) ಎಲ್ಲಾ ಆಟೋಗಳಿಗೆ ಚಾಲಕರ ಮಾಹಿತಿ ಮತ್ತು ಕ್ಯೂ ಆರ್ ಕೋಡ್ ಹೊಂದಿರುವ ಡಿಸ್ ಪ್ಲೇ ಕಾರ್ಡ್ ಅನ್ನು ಇಲಾಖೆ ವತಿಯಿಂದ ಉಚಿತವಾಗಿ ನೀಡಲಿದ್ದು, ಸದರಿ ಡಿಸ್ ಪ್ಲೇ ಕಾರ್ಡ್ ಅನ್ನು ಎಲ್ಲಾ ಆಟೋ ಗಳಲ್ಲಿ ಅಳವಡಿಸಿಕೊಳ್ಳುವುದು.*
*5) ಆಟೋ ಚಾಲಕರು ನೀಡುವ ದಾಖಲಾತಿಗಳನ್ನು ಪರಿಶೀಲಿಸಿ ಪ್ರತೀ ಆಟೋಗಳಿಗೆ SMG ನಂಬರ್ ಅನ್ನು ನೀಡಲಾಗುವುದು, ನಂತರ SMG ನಂಬರ್ ಇರುವ ಸ್ಟಿಕ್ಕರ್ ಗಳನ್ನು ಪ್ರತೀ ಆಟೋ ಚಾಲಕರು ತಮ್ಮ ತಮ್ಮ ಆಟೋ ಗಳಲ್ಲಿ, ಕಾಣುವ ರೀತಿಯಲ್ಲಿ ಅಂಟಿಸಿಕೊಳ್ಳುವುದು.*
*6) KSRTC ಬಸ್ ನಿಲ್ದಾಣ ಮತ್ತು ರೈಲ್ವೇ ನಿಲ್ದಾಣದಿಂದ ಸಾರ್ವಜನಿಕರಿಂದ ಆಟೋ ಚಾಲಕರ ಮೇಲೆ ದೂರುಗಳು ಬರುತ್ತಿದ್ದು, ಇದೇ ರೀತಿ ದೂರುಗಳು ಪುನರಾವರ್ತಿತವಾದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು.*
*7) ಆಟೋ ಚಾಲಕರು ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲನೆ ಮಾಡವುದು.*
*8) ಆಟೋ ಗಳನ್ನು ಆಟೋ ನಿಲ್ದಾಣ ವಲ್ಲದೇ ಬೇರೆ ಸ್ಥಳಗಳಲ್ಲಿ ನಿಲುಗಡೆ ಮಾಡುವಂತಿಲ್ಲ, ತಪ್ಪಿದ್ದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಲಾಗುವುದು.*
ಸದರಿ ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ, ಪೊಲೀಸ್ ಉಪಾಧೀಕ್ಷಕರು ಶಿವಮೊಗ್ಗ ಉಪ ವಿಭಾಗ, ಸಾರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್ ನಿರೀಕ್ಷಕರುಗಳು ದೊಡ್ಡಪೇಟೆ, ಕೊಟೆ ಪೊಲೀಸ್ ಠಾಣೆ ಮತ್ತು ವೃತ್ತ ನಿರೀಕ್ಷಕರು ಶಿವಮೊಗ್ಗ ಸಂಚಾರ ವೃತ್ತ ರವರು ಹಾಗೂ ಶಿವಮೊಗ್ಗ ನಗರದ ಆಟೋ ಚಾಲಕರುಗಳು ಉಪಸ್ಥಿತರಿದ್ದರು.

Leave a Comment