ಶಿರಿಸಿ ಉದ್ಯಮಿಯನ್ನು ಹಿಂಬಾಲಿಸಿ 50 ಲಕ್ಷ ದೋಚಿದ ತೀರ್ಥಹಳ್ಳಿಯ ಮೂಲದ ಇಕ್ಬಾಲ್ ಅಬ್ದುಲ್ .ಕೆ. ವ್ಯಕ್ತಿಯೊಂದಿಗೆ 9ಮಂದಿ ದರೋಡೆಕೋರರ ಬಂಧನ.

 ಕಾರವಾರ ಶಿರಸಿ:--- ಕಳೆದ ಎಂಟು ದಿನಗಳ ಹಿಂದೆ ಕಾರವಾರ ಜಿಲ್ಲೆಯ ಶಿರಿಸಿ ತಾಲೂಕಿನ ಬನವಾಸಿ ಸಮೀಪದ ಅಂಡಗಿ ಸಮೀಪ ನಡೆದ 50 ಲಕ್ಷ ರೂ.ದರೋಡೆಗೆ ಸಂಬಂಧಿಸಿ 9 ಮಂದಿ ಅಂತರ್ ಜಿಲ್ಲಾ ದರೋಡೆಕೋರರನ್ನು ಕಾರವಾರ ಜಿಲ್ಲಾ ಲಕ್ಷಣಾಧಿಕಾರಿ ವಿಷ್ಣುವರ್ಧನ್ ರವರ ಮಾರ್ಗದರ್ಶನದಲ್ಲಿ ಶಿರಸಿ ಉಪ ವಿಭಾಗದ ಪೊಲೀಸರು ಬಂಧಿಸಿ 13.82 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ.ನ.19 ರ ಸಂಜೆ ಹಸನ್ ಜಾವೇದ್‌ಖಾನ್ ಎಂಬುವವರು ತನ್ನ ಇಬ್ಬರು ಸಂಬಂಧಿಕರೊಂದಿಗೆ 50 ಲಕ್ಷ ರೂ.ತೆಗೆದುಕೊಂಡು ಬೆಳಗಾವಿಯಲ್ಲಿ ನಿವೇಶನವನ್ನು ನೋಡಿಕೊಂಡು ಕಾರಿನಲ್ಲಿ ವಾಪಸ್ ಬರುತ್ತಿರುವಾಗ ಅಂಡಗಿ ಬಸ್ ನಿಲ್ದಾಣದ ಹತ್ತಿರ ಒಂದು ಕೆಂಪು ಬಣ್ಣದ ಕಾರಿನಲ್ಲಿ ಬಂದ ದರೋಡೆಕೋರರು ಅಡ್ಡ ಹಾಕಿದ್ದರು. ಹಿಂಬದಿ ಸೀಟಿನ ಮೇಲಿದ್ದ 50 ಲಕ್ಷ ರೂಪಾಯಿ ಹಣವಿದ್ದ ಪ್ಲಾಸ್ಟಿಕ್ ಚೀಲವನ್ನು ಕಸಿದುಕೊಂಡು ಪರಾರಿಯಾದ ಬಗ್ಗೆ ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ಸಿಪಿಐ ರಾಮಚಂದ್ರ ನಾಯಕ ನೇತೃತ್ವದಲ್ಲಿ ತಂಡ ರಚನೆ ಮಾಡಿ ಕಾರ್ಯಾಚರಣೆ ನಡೆಸಿ ಪ್ರಕರಣ ಪ್ರಕರಣದಲ್ಲಿ ದರೋಡೆಕೋರ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಆಸೀಫ್ ಅಬ್ದುಲ್ ಸತ್ತಾರ್ ಸಾಗರ, ಅಬ್ದುಲ್ ಹಮೀದ್ ಅಬ್ದುಲ್ ಸತ್ತಾರ್ ಸಿದ್ಧಾಪುರ,ಅಜಿಮುಲ್ಲಾ ಅಕ್ಷರಸಾಬ್ ಸಿದ್ಧಾಪುರ, ಮನ್ಸೂರ್ ಜಾಫರ್ ಖಾನ್ ಸಾಗರ, ಅಬ್ದುಲ್ ರೆಹಮಾನ್ ಶಟ್ಟರ್ ವಟರಾಗ ಭಟ್ಕಳ, ರಿಯಾಜ್ ಫಯಾಜ್ ಕೊಪ್ಪ,ವಿಶ್ವನಾಥ ವಾಸು ಶೆಟ್ಟಿ ಕೊಪ್ಪ, ಮನೋಹರ ಆನಂದ ಶೆಟ್ಟಿ ಕೊಪ್ಪ, ತೀರ್ಥಹಳ್ಳಿ  ದೊಡ್ಡಮನೆ ಕೇರಿ ಎಪಿಎಂಸಿ ಮುಖ್ಯ ಗೇಟ್ ಪಕ್ಕದಲ್ಲಿ ಫುಡ್ ಪಾಯಿಂಟ್ ಹೋಟೆಲ್ ಮಾಲೀಕ ಇಕ್ವಾಲ್ ಅಬ್ದುಲ್. ಕೆ. ತೀರ್ಥಹಳ್ಳಿ ಇವರುಗಳನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ತೀರ್ಥಹಳ್ಳಿಯ ಇನ್ನಿಬ್ಬರು ವ್ಯಕ್ತಿಗಳು ಭಾಗಿಯಾಗಿದ್ದಾರೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಅವರುಗಳು ಪರಾರಿಯಾಗಿದ್ದಾರೆಂದು, ತಲೆಮರೆಸಿಕೊಂಡಿದ್ದಾರೆ. ಇವರ ಪತ್ತೆಕಾರ್ಯಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ
ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸಿದ ಎರಡು ಕಾರು, 12 ಮೊಬೈಲ್ ಹಾಗೂ ದೂರುದಾರರ ಕಾರಿಗೆ ಅಳವಡಿಸಿದ ಜಿಪಿಎಸ್ ಟ್ರ‍್ಯಾಕರ್ ವಶಪಡಿಸಿಕೊಳ್ಳಲಾಗಿದೆ. ಇನ್ನೂ ಕೆಲ ಆರೋಪಿಗಳ ಪತ್ತೆ ಹಾಗೂ ನಗದು ಜಪ್ತು ಬಾಕಿ ಇದ್ದು ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜಾವೇದ್ ಹಣಕಾಸು ವ್ಯವಹಾರ ಅರಿತಿದ್ದ ಆಸಿಫ್, ಆಗಾಗ ಉದ್ಯಮಿಯ ಮನೆಗೆ ಭೇಟಿ ನೀಡುತ್ತಿದ್ದ. ಭೂಮಿ ಖರೀದಿಗೆ ಬೆಳಗಾವಿಗೆ ತೆರಳುವುದನ್ನು ಅರಿತಿದ್ದರಿಂದ ವಾಹನಕ್ಕೆ ಜಿ.ಪಿ.ಎಸ್.ಟ್ರ್ಯಾಕರ್ ಅಳವಡಿಸಿದ್ದ. ನಿರಂತರವಾಗಿ ಟ್ರ್ಯಾಕರ್ ಮೂಲಕ ಚಲನವಲನ ಗಮನಿಸುತ್ತಿದ್ದ ಈತ ಸಹಚರರ ಜತೆ ಸೇರಿ ನಿರ್ಜನ ಪ್ರದೇಶದಲ್ಲಿ ಅಡ್ಡಗಟ್ಟಿ ಕೃತ್ಯ ಎಸಗಿದ್ದ ಎಂದು ತನಿಖೆಯ ನೇತೃತ್ವ ವಹಿಸಿದ್ದ ಡಿಎಸ್ಪಿ ರವಿ ನಾಯ್ಕ ಪ್ರಕರಣದ ಸೂಕ್ಷ್ಮತೆಯನ್ನು ಗಮನಿಸಿ
ಈ ಪ್ರಕರಣದ ಪತ್ತೆಕಾರ್ಯದಲ್ಲಿ ಉಸ್ತುವಾರಿ ವಹಿಸಿದ ಡಿವೈಎಸ್‌ಪಿ ರವಿ ಡಿ. ನಾಯ್ಕ, ತನಿಖಾಧಿಕಾರಿಯಾದ ಸಿಪಿಐ ರಾಮಚಂದ್ರ ನಾಯಕ, ಪತ್ತೆ ತಂಡದ ಅಧಿಕಾರಿ ಪಿಎಸ್‌ಐಗಳಾದ ಹನುಮಂತ ಬಿರಾದಾರ, ಭೀಮಾ ಶಂಕರ ಸಿನೂರು, ಚಂದ್ರಕಲಾ ಪತ್ತಾರ, ಸಿಬಂದಿಗಳ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಎನ್ ಬಹುಮಾನ ಘೋಷಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆಯ ಕಾರ್ಯವನ್ನು ಸಾರ್ವಜನಿಕರು ಮುಕ್ತ ಕಂಡದಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.. 

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.