ಕುಖ್ಯಾತ ಅಂತರರಾಜ್ಯ ಅಡಿಕೆ ಕಳ್ಳರ ಬಂಧನ: ಆರೋಪಿತರಿಂದ 1,42,60,000/-ರೂ ಮೌಲ್ಯದ ಮಾಲು ವಶಕ್ಕೆ: ಎಸ್.ಪಿ. ಮಿಥುನ್ ಕುಮಾರ್ ಮಾಹಿತಿ
ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಳಸಗೋಡು ಗ್ರಾಮದ ಮಧುಕರ್ ರವರ ಗೋಡಾನ್
ನಿಂದ ದೋಲರಾಮ್ ತಂದೆ ಹರಿಸಿಂಗ್ ರವರಿಗೆ ಸೇರಿದ 24,500 ಕೆಜಿ ತೂಕದ 350 ಚೀಲ ಕೆಂಪು ಅಡಿಕೆಯನ್ನು
ಗುಜರಾತ್ ರಾಜ್ಯದ ಅಹಮದಾಬಾದ್ ಗೆ ಲೋಡ್ ಕಳುಹಿಸಿದ್ದು, ಆರೋಪಿಗಳು ಲೋಡ್ ಅನ್ನು ಅಹಮದಾಬಾದ್ ಗೆ ತೆಗೆದುಕೊಂಡು ಹೋಗದೆ ಮೋಸ ಮಾಡಿದ ಬಗ್ಗೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಗುನ್ನೆ ಸಂಖ್ಯೆ 356/2022
ಪ್ರಕರಣದ ಆರೋಪಿಗಳ ಪತ್ತೆಗಾಗಿ ರೋಹನ್ ಜಗದೀಶ್ ಐ.ಪಿ.ಎಸ್ ಪೊಲೀಸ್ ಸಹಾಯಕ ಅಧಿಕ್ಷಕರು ಸಾಗರ
ಉಪವಿಭಾಗರವರ ಮೇಲುಸ್ತುವಾರಿಯಲ್ಲಿ ವಿ. ಪ್ರವೀಣ್ ಕುಮಾರ್, ಪೊಲೀಸ್ ನಿರೀಕ್ಷಕರು, ಸಾಗರ ಗ್ರಾಮಾಂತರ
ಪೊಲೀಸ್ ಠಾಣೆ ಮತ್ತು ತಿರುಮಲೇಶ್ ನಾಯ್ಕ, ಪೊಲೀಸ್ ಉಪ ನಿರೀಕ್ಷಕರು ಕಾರ್ಗಲ್ ಪೊಲೀಸ್ ಠಾಣೆ ರವವರ ನೇತೃತ್ವದಲ್ಲಿ ಸಿಬ್ಬಂಧಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಿದ್ದು, ಸದರಿ ತಂಡವು ಮಹಾರಾಷ್ಟ್ರದ ರಾಜ್ಯದ ಕೊಲ್ಲಾಪುರ,ಸೊಲ್ಲಾಪುರ, ಪುಣೆ, ಮುಂಬೈ, ದುಲೆ, ಗುಜರಾತ್ ರಾಜ್ಯದ ಸುರತ್, ಅಹಮದಾಬಾದ್, ವಡೋದರಾ, ಮಧ್ಯಪ್ರದೇಶ ರಾಜ್ಯದ ಇಂದೋರ, ಖಜ್ರಾನಾ, ಉಜ್ಜೆನಿ, ರಾಜಘಡ್ ಗಳಲ್ಲಿ ಸುಮಾರು 22 ದಿನಗಳ ಕಾಲ ವಿಚಾರಣೆ ನಡೆಸಿ, ದಿನಾಂಕ: 18-11-2022 ರಂದು ಆರೋಪಿಗಳಾದ ೧) ರಜಾಕ್ ಖಾನ್ @ ಸಲೀಂ ಖಾನ್ ತಂದೆ ಇಮಾಮ್
ಖಾನ್, 65 ವರ್ಷ, ಲಾರಿ ಚಾಲಕ ಕೆಲಸ, ವಾಸ ನ್ಯೂ ದಾವುದಿ ಎಸ್.ಆರ್.ಕೆ ಜಿಮ್ ಹತ್ತಿರ ಖಜ್ರಾನ್, ಇಂದೋರ್ ಜಿಲ್ಲೆ.
ಸ್ವಂತ ವಿಳಾಸ ಜ್ಯೂತಿ ನಗರ, ಸರ್ಜಾಪುರ ತಾಲ್ಲೂಕು, ಮತ್ತು ಜಿಲ್ಲೆ. ಮಧ್ಯಪ್ರದೇಶ ರಾಜ್ಯ.
೨) ಥೇಜು ಸಿಂಗ್ ತಂದೆ ಕಚರು ಸಿಂಗ್, 42 ವರ್ಷ, ಲಾರಿ ಚಾಲಕ ಕೆಲಸ, ವಾಸ ಮಾಲತಿ ರೋಡ್ ಸರ್ಕಲ್,
ಘಾಟಬಿಲೋದ್, ಘಾಟಬಿಲೋದ್ ತಾಲ್ಲೂಕು ಮತು ್ತ ಜಿಲ್ಲೆ. ಮಧ್ಯಪ್ರದೇಶ ರಾಜ್ಯ. ಸ್ವಂತ ಊರು ವಡವ್ ಸರ್ಕಲ್, ವಡವ್
ಏರಿಯಾ, ಆಶ್ರಯ ಬಡಾವಣೆ, ಅಹಮದಾಬಾದ್.ಗುಜರಾತ ರಾಜ್ಯ. ೩) ಅನೀಸ್ ಅಬ್ಬಾಸಿ ತಂದೆ ಖಾಲೆಖಾ, 55 ವರ್ಷ,
ಚಾಲಕ ವೃತ್ತಿ, ವಾಸ ವಜೀದ್‌ಪುರ ಮೊಹಲ್ಲಾ, ದಾನಮಂಡಿ ಹತ್ತಿರ ಶಹಜಾಪುರ ತಾಲ್ಲೂಕು ಮತ್ತು ಜಿಲ್ಲೆ. ಮಧ್ಯಪ್ರದೇಶ.
ರವರುಗಳನ್ನು ಮದ್ಯಪ್ರದೇಶ ರಾಜ್ಯದ ಶಾಜಾಪುರ ಜಿಲ್ಲೆಯ ಶಾಜಾಪುರ ಟೌನ್ ಬೈಪಾಸ್ ರಸ್ತೆಯ ಪೆಟ್ರೋಲ್ ಬಂಕ್ ಹತ್ತಿರ ಬಾಲಾಜಿ ಡಾಬಾ ಎದುರು ವಶಕ್ಕೆ ಪಡೆದು ಕೊಂಡಿರುತ್ತದೆ ಎಂದರು
ಆರೋಪಿತರಿಂದ ಸದರಿ ಪ್ರಕರಣದಲ್ಲಿ ಪಿರ‍್ಯಾದುದಾರರಿಗೆ ಮೋಸ ಮಾಡಿ ವಂಚಿಸಿದ 350 ಚೀಲದಲ್ಲಿದ್ದ
ರೂ . 1,17,60,000/-ಮೌಲ್ಯದ 24,500 ಕೆಜಿ ತೂಕದ ಕೆಂಪು ಅಡಿಕೆಯನ್ನು ಹಾಗೂ ಕೃತ್ಯಕ್ಕೆ ಬಳಸಿದ 25 ಲಕ್ಷ ರೂ ಮೌಲ್ಯದ ಅಶೋಕ ಲೈಲ್ಯಾಂಡ್ ಲಾರಿ ಸೇರಿದಂತೆ ಒಟ್ಟು ರೂ ೧,೪೨,೬೦,೦೦೦/- 1,42,60,000/- ಮೌಲ್ಯದ ಮಾಲನ್ನ ಅಮಾನತ್ತುಪಡಿಸಿಕೊಳ್ಳಲಾಗಿರುತ್ತದೆ ಹಾಗೂ ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ
ಬಂಧನಕ್ಕೆ ಒಪ್ಪಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಆರೋಪಿಗಳು ಅಂತರ ರಾಜ್ಯ ಕಳ್ಳರಾಗಿದ್ದು, ಸದರಿಯವರ ವಿರುದ್ಧ ಮಧ್ಯಪ್ರದೇಶ
ಮಹಾರಾಷ್ಟ್ರ ಮತ್ತು ರಾಜ್ಯಸ್ಥಾನ ರಾಜ್ಯಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿರುತ್ತವೆ ಎಂದರು.
ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮಿಥುನ್ ಕುಮಾರ್ ರವರು ಸದರಿ ಕಾರ್ಯಾಚರಣೆಯ ವಿಶೇಷ ತಂಡದಲ್ಲಿದ್ದ ವಿ ಪ್ರವೀಣ್ ಕುಮಾರ್, ಪೊಲೀಸ್ ನಿರೀಕ್ಷಕರು, ಸಾಗರ ಗ್ರಾಮಾಂತರ ಪೊಲೀಸ್ ಠಾಣೆ, ತಿರುಮಲೇಶ್ ನಾಯ್ಕ, ಪೊಲೀಸ್ಉಪ ನಿರೀಕ್ಷಕರು ಕಾರ್ಗಲ್ ಪೊಲೀಸ್ ಠಾಣೆ ಸಾಗರ ಮತ್ತು ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂಧಿಗಳಾದ ಸನಾವುಲ್ಲಾ ಹೆಚ್,ಸಿ, ಶ್ರೀಧರ ಹೆಚ್.ಸಿ, ತಾರನಾಥ ಹೆಚ್,ಸಿ ಹಾಗೂ ರವಿಕುಮಾರ್ ಸಿಪಿಸಿ, ಹನುಮಂತಪ್ಪ ಜಂಬೂರ
ಸಿಪಿಸಿ, ಪ್ರವೀಣ್ ಕುಮಾರ್, ಸಿಪಿಸಿ ರವರುಗಳ ಉತ್ತಮ ಕಾರ್ಯವನ್ನು ಶ್ಲಾಘಿಸಿ ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರವನ್ನು ನೀಡಿ ಅಭಿನಂದಿಸಿದ್ದಾರೆ.
Leave a Comment