ಶಿವಮೊಗ್ಗ ನೂತನ ಎಸ್ಪಿ ಕಾರ್ಯಗಳಿಗೆ ಸಾರ್ವಜನಿಕರ ಮೆಚ್ಚುಗೆ:ನೊಂದವರ ದಿನ ಅಂಗವಾಗಿ ಪೋಲೀಸ್ ಠಾಣೆಗಳಲ್ಲಿ ನೊಂದವರ ಸಭೆ

 ಶಿವಮೊಗ್ಗ:  ಶಿವಮೊಗ್ಗದಲ್ಲಿ ನೂತನ ಜಿಲ್ಲಾ ರಕ್ಷಣಾಧಿಕಾರಿಯಾಗಿ  ಎಸ್ಪಿ ಮಿಥುನ್ ಕುಮಾರ್ ಇವರು ಅಧಿಕಾರ ಸ್ವೀಕರಿಸಿದನಿಂದ ಹಲವು ವಿಶೇಷಗಳನ್ನು ಕಾಣುತ್ತಿದ್ದೆವೆ. ಅಧಿಕಾರ ಸ್ವೀಕರಿಸಿದ ಎರಡು ದಿನದಲ್ಲಿ ಶಿವಮೊಗ್ಗದಲ್ಲಿನ ಮಾಧ್ಯಮದವರ ಜೊತೆ ಪರಿಚಯ ಮಾಡಿಕೊಂಡ ಅವರು ಶಿವಮೊಗ್ಗದಲ್ಲಿನ ಪ್ರಮುಖ  ಸಮಸ್ಯೆಗಳು, ಕಾನೂನು ಸುವ್ಯವಸ್ಥೆ ಹಾಗೂ ಇತರೇ ಮಾಹಿತಿ ಪಡೆದು ಕೊಂಡರು.

 ಜಿಲ್ಲೆಯಲ್ಲಿ  ಗಾಂಜಾ ಹಾವಳಿ ಮತ್ತು  ರೌಡಿಗಳ ಹಾವಳಿ,ಟ್ರಾಫಿಕ್ ಸಮಸ್ಯೆಗಳು ಚರ್ಚೆಗೆ ಬಂದವು.ಇದೀಗ ಕಾರ್ಯಪ್ರವೃತ್ತರಾಗಿ ಗಾಂಜಾ ಹಾವಳಿ ಸೇವನೆ ಮಾಡುವರು ಗಳ ಬಗ್ಗೆ ಸಮರ ಸಾರಿದ್ದಾರೆ. ರೌಡಿಗಳು ಹಾಗೂ ಕಾನೂನು ಸುವ್ಯವಸ್ಥೆ ಗೆ ಅಡೆತಡೆಗಳು ಮಾಡುವರ ವಿರುದ್ದ ಸೂಕ್ತ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಸೂಚನೆ ನೀಡಿದ್ದಾರೆ. ಠಾಣೆ ಬಿಟ್ಟು ಬರದ ಅಧಿಕಾರಿಗಳು ಇದೀಗ ಬಿದಿಗಿಳಿದು ಕೆಲಸ ಮಾಡುತ್ತಿದ್ದಾರೆ. ಖಾಕಿಧಾರಿಗಳು ಆಕ್ಟಿವ್ ಆಗಿದ್ದಾರೆ ಅನಿಸುತ್ತಿದೆ.
   ಶಿವಮೊಗ್ಗದಲ್ಲಿ ನೂತನ ಎಸ್ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ ಗಳು ಮತ್ತು ಸಿಬ್ಬಂದಿ ದೀಡೀರ್ ಅಂತಾ ಜೈಲ್ ಮೇಲೆ ದಾಳಿ ನಡೆಸಿದ್ದಾರೆ. ಅಪಾರ ಪ್ರಮಾಣದಲ್ಲಿ ಜೈಲಿನೊಳಗಿದ್ದ ವಸ್ತುಗಳನ್ನು ವಶಪಡಿಸಿಕೊಂಡು ಕಿಡಿಗೇಡಿಗಳಿಗೆ ಕ್ರಿಮಿನಲ್ ಗಳಿಗೆ ನಡುಕ ಉಟ್ಟಿಸಿದ್ದಾರೆ. ಪೊಲೀಸ್ ಕೆಲಸ ಮಾಡುತ್ತಿದ್ದಾರೆ.   
ಠಾಣೆಯ ಏರಿಯಾದಲ್ಲಿ  ಪೋಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿ ಕ್ರಿಮಿನಲ್ ಗಳ ಬಗ್ಗೆ ಬ್ರೀಪೀಂಗ್ ಮಾಡುವಂತೆ ಸೂಚಿಸಿ.ಸಿಬ್ಬಂದಿಗಳ ಕುಂದುಕೊರತೆಗಳನ್ನು ಸಹ ಆಲಿಸುವಂತೆ ಸೂಚಿಸಿ ಉಪವಿಭಾಗದ ಮಟ್ಟದಲ್ಲಿ ಅದು ಸಹ ನಡೆಯುತ್ತಿದೆ.
 ಶಿವಮೊಗ್ಗ ನಗರದ ಬೀದಿಗಳಲ್ಲಿ ಎಲ್ಲಿ ನೋಡಿದರೂ ಖಾಕಿಗಳು ಕಾಣುತ್ತಿದ್ದಾರೆ.ಇದೀಗ ನೊಂದವರ ದಿನದ ಅಂಗವಾಗಿ  ನೊಂದವರ ಸಭೆ ನಡೆಸಲು ಸೂಚಿಸಿ ನೊಂದವರ ಪಾಲಿನ ಎಸ್ಪಿ ಅಧಿಕಾರಿಯಾಗಿದ್ದಾರೆ‌.

ಕಳೆದ 15 ದಿನಗಳಲ್ಲಿ ದಿನಾಂಕಃ-06-10-2022 ರಿಂದ 22-10-2022ರವರೆಗೆ ಶಿವಮೊಗ್ಗ ಜಿಲ್ಲೆಯಾದ್ಯಂತ *ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವ* ಬಗ್ಗೆ ಅನುಮಾನ ಬಂದ ವ್ಯಕ್ತಿಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ಮತ್ತು ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದವರ ವಿರುದ್ಧ  ಎನ್.ಡಿ.ಪಿ.ಎಸ್ ಕಾಯ್ದೆ ರೀತ್ಯಾ  *ಒಟ್ಟು 31 ಪ್ರಕರಣಗಳನ್ನು 41 ಜನರ ವಿರುದ್ಧ* ದಾಖಲಿಸಿ ಕಾನೂನು  ರೀತ್ಯಾ  ಕ್ರಮ ಜರುಗಿಸಲಾಗಿರುತ್ತದೆ.

 ನೂತನ ಎಸ್ಪಿ ಮಿಥುನ್ ಕುಮಾರ್ ಇವರು ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೈಗೊಂಡಿರುವ  ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೇ ರೀತಿಯಲ್ಲಿ ಒಳ್ಳೆಯ ಕೆಲಸ ಮಾಡುವತ್ತಾ ನೂತನ ಎಸ್ಪಿ ಸಾಗಲಿ ಎಂದು ಶುಭ ಹಾರೈಸುವ, 
ನಾಗರೀಕರ ರಕ್ಷಣೆಗೆ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಪಣತೊಟ್ಟಿರುವ  ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ  ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಶುಭಾಶಯಗಳು  
ಶಿವಮೊಗ್ಗ: ಈ ದಿನ ದಿನಾಂಕಃ-23-10-2022  ರಂದು ನೊಂದವರ ದಿನದ ಅಂಗವಾಗಿ, ಶಿವಮೊಗ್ಗ ಜಿಲ್ಲೆಯ ಎಲ್ಲಾ ಪೊಲೀಸ್‌ ಠಾಣೆಗಳಲ್ಲಿ ನೊಂದವರ ಸಭೆಯನ್ನು ನಡೆಸಲಾಯಿತು.

  ನೊಂದವರುಗಳ ಕುಂದುಕೊರತೆಯನ್ನು ಆಲಿಸಲಾಯಿತು
 ದೂರುದಾರರು / ನೊಂದವರಿಗೆ ಅವರ ಪ್ರಕರಣಗಳ ತನಿಖಾ ಪ್ರಗತಿಯ ಬಗ್ಗೆ* ಮಾಹಿತಿಯನ್ನು ನೀಡಲಾಯಿತು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.