ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಪ್ರಕರಣಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದ ಎಸ್ಪಿ ಜಿ.ಕೆ.ಮಿಥುನ್ ಕುಮಾರ್


ಶಿವಮೊಗ್ಗ:  ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಪ್ರಕರಣಗಳ ಬಗ್ಗೆ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು.
ಇಂದು ಬೆಳಿಗ್ಗೆ ಶಿವಮೊಗ್ಗ ನಗರದಲ್ಲಿನ ಎಸ್ಪಿ ಕಚೇರಿಯಲ್ಲಿ  ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.

 ದಿನಾಂಕಃ- 24-10-2022 ರಂದು ರಾತ್ರಿ ಶಿವಮೊಗ್ಗ ನಗರದ ಭರ್ಮಪ್ಪ ನಗರ ಮತ್ತು ಸೀಗೆಹಟ್ಟಿಯಲ್ಲಿ  ನಡೆದ ಘಟನೆಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಗುನ್ನೆ ಸಂಖ್ಯೆಃ- 418/2022 ಮತ್ತು 419/2022 ಪ್ರಕರಣಗಳು ವರದಿಯಾಗಿದೆ ಎಂದರು.

ಸದರಿ ಪ್ರಕರಣದಲ್ಲಿ ಮೂರು ಜನ ಆರೋಪಿತರನ್ನು ಬಂಧಿಸಲಾಗಿದೆ. 

1) ಮಾರ್ಕೇಟ್ ಫೌಜಾನ್, 22 ವರ್ಷ (ಈತನ ಮೇಲೆ ಈ ಹಿಂದೆ 05  ಪ್ರಕರಣಗಳು ವರದಿಯಾಗಿರುತ್ತವೆ)

2)ಅಜರ್ @ ಅಜ್ಜು, 24 ವರ್ಷ, (ಈತನ ಮೇಲೆ ಈ ಹಿಂದೆ 03  ಪ್ರಕರಣಗಳು ವರದಿಯಾಗಿರುತ್ತವೆ) 

 3)ಫರಾಜ್, 21 ವರ್ಷ (ಈತನ ಮೇಲೆ ಈ ಹಿಂದೆ 04  ಪ್ರಕರಣಗಳು ವರದಿಯಾಗಿರುತ್ತವೆ)  ದಸ್ತಗಿರಿ ಮಾಡಲಾಗಿರುತ್ತದೆ ಎಂದರು .

ಇವರೊಂದಿಗೆ ಇನ್ನೂ 2 ಜನ ಆರೋಪಿತರಿದ್ದು, ಸದರಿಯವರನ್ನು ವಶಕ್ಕೆ ಪಡೆದ ನಂತರ ಮಾಹಿತಿಯನ್ನು ನೀಡಲಾಗುವುದು ಎಂದರು.

ಸದರಿ ಆರೋಪಿತರು ದಿನಾಂಕಃ-24-10-2022 ರಂದು ರಾತ್ರಿ 11-00 ಗಂಟೆಗೆ 02 ಬೈಕ್ ಗಳಲ್ಲಿ ಸೀಗೆಹಟ್ಟಿಗೆ ಹೋಗಿ *ಪ್ರವೀಣ @ ಕುಲ್ಡಾ ಪ್ರವೀಣನಿಗೆ* ಅವಾಚ್ಯ ಶಬ್ದಗಳಿಂದ ಬೈದಿದ್ದು, ನಂತರ 4 ಮತ್ತು 5ನೇ ಆರೋಪಿತರನ್ನು ಕ್ಲಾರ್ಕ್ ಪೇಟೆಯಲ್ಲಿ  ಬಿಟ್ಟು, ಉಳಿದ ಮೂರು  ಜನರು  *ಭರ್ಮಪ್ಪ ನಗರಕ್ಕೆ ಬಂದು ಪ್ರಕಾಶನಿಗೆ ಅವಾಚ್ಯ ಶಬ್ದಗಳಿಂದ ಬೈದು, ಇಟ್ಟಿಗೆ ಕಲ್ಲಿನಿಂದ ಆತನಿಗೆ ಹಲ್ಲೆ* ಮಾಡಿರುತ್ತಾರೆ. ಈಗ್ಗೆ ಕೆಲವು ದಿನಗಳ ಹಿಂದೆ *ಪ್ರವೀಣ ಮತ್ತು ಪ್ರಕಾಶ್ ರವರು ಸೇರಿ ಮಾರ್ಕೇಟ್ ಫೌಜಾನ್ ನಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದ ದ್ವೇಶದ ಹಿನ್ನೆಲೆಯಲ್ಲಿ* ಈ ಘಟನೆಯು ನಡೆದಿರುತ್ತದೆ ಎಂದರು.

*ವೆಂಕಟೇಶ್ ನಗರದಲ್ಲಿನ ಕೊಲೆ ಪ್ರಕರಣ:* 
ಜಯನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಕೊಲೆ ಪ್ರಕರಣ ಮತ್ತು ದೊಡ್ಡಪೇಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಭರ್ಮಪ್ಪ ನಗರ ಮತ್ತು ಸೇಗೆಹಟ್ಟಿಯಲ್ಲಿ ನಡೆದ ಘಟನೆಗಳು ಪ್ರತ್ಯೇಕ ಘಟನೆಗಳಾಗಿದ್ದು, ಇವೆರಡಕ್ಕೂ ಯೌವುದೇ ಸಂಬಂಧವಿರುವುದಿಲ್ಲ. ಜಯನಗರದ ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಈಗಾಗಲೇ ಮೂರು ಜನ ಆರೋಪಿತರನ್ನು ಪೊಲೀಸ್‌ ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಿದ್ದು, ಆರೋಪಿತರು ಸುಲಿಗೆ ಮಾಡುವ ಸಂದರ್ಭದಲ್ಲಿ (ಲಾಭಕ್ಕಾಗಿ) ಕೊಲೆ ಮಾಡಿರುವುದು ತಿಳಿದುಬಂದಿರುತ್ತದೆ.

 ಸದರಿ ಮೂರು ಜನರ ವಿರುದ್ಧ ಈ ಹಿಂದೆಯೂ ಸಹಾ  ಸುಲಿಗೆ ಮತ್ತು ಡಕಾಯತಿ ಪ್ರಕರಣಗಳು ವರದಿಯಾಗಿದೆ ಎಂದರು. 

 ಜಯನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ವಿಜಯ್ ರವರ ಕೊಲೆ ಪ್ರಕರಣದಲ್ಲಿ ಭಾಗಿಯಾದ ನಾಲ್ಕು ಜನ ಆರೋಪಿತರಲ್ಲಿ ಮೂರು ಜನರನ್ನು ಬಂಧಿಸಲಾಗಿದೆ ಎಂದರು.

1)ಜಬಿ, 23 ವರ್ಷ,* (ಈತನ ಮೇಲೆ ಈ ಹಿಂದೆ ಸುಲಿಗೆ, ಡರೋಡೆ, ಕೊಲೆಯತ್ನ, ಗಾಂಜಾ ಮತ್ತು ಇತರೆ  ಪ್ರಕರಣಗಳು ಸೇರಿ ಒಟ್ಟು 11  ಪ್ರಕರಣಗಳು ದಾಖಲಾಗಿರುತ್ತವೆ), 

2)ದರ್ಶನ್, 21 ವರ್ಷ, (ಈತನ ಮೇಲೆ ಈ ಹಿಂದೆ ಸುಲಿಗೆ, ಡರೋಡೆ, ಮತ್ತು ಇತರೆ  ಪ್ರಕರಣಗಳು ಸೇರಿ ಒಟ್ಟು 7  ಪ್ರಕರಣಗಳು ದಾಖಲಾಗಿರುತ್ತವೆ),

 3)ಕಾರ್ತಿಕ್ @ ಕಟ್ಟೆ ಕಾರ್ತಿಕ್, 21 ವರ್ಷ, (ಈತನ ಮೇಲೆ ಈ ಹಿಂದೆ 3  ಪ್ರಕರಣಗಳು ದಾಖಲಾಗಿರುತ್ತವೆ), ರವರುಗಳನ್ನು ದಸ್ತಗಿರಿ ಮಾಡಲಾಗಿದೆ ಎಂದರು

ಮತ್ತೊಬ್ಬ ಆರೋಪಿಯನ್ನು ದಸ್ತಗಿರಿ ಮಾಡಲು ಬಾಕಿ ಇರುತ್ತದೆ. ಆತನನ್ನು ವಶಕ್ಕೆ ಪಡೆದ ನಂತರ ಮಾಹಿತಿಯನ್ನು ನೀಡಲಾಗುವುದು ಎಂದರು.
 
**ಪೊಲೀಸ್ ಸಿಬ್ಬಂದಿ ಮೇಲೆ 
ಆರೋಪಿ ಜಭಿ ಹಲ್ಲೆ ಮಾಡಲು ಮುಂದಾದಾಗ ಜಭಿಗೆ ಕಾಲಿಗೆ ಗುಂಡೇಟು:** 

ಕೊಲೆಯು ಸುಲಿಗೆ ಮಾಡುವ ಸಮಯದಲ್ಲಿ ನಡೆದಿದ್ದು, ಆರೋಪಿತರು ವಿಜಯ್ ರವರಿಗೆ ಚುಚ್ಚಿ ಕೊಲೆ ಮಾಡಿ, ನಂತರ ಮೃತನ ಚಿನ್ನದ ಸರವನ್ನು ತೆಗೆದುಕೊಂಡು ಹೋಗಿರುತ್ತಾರೆ.
ಈ ದಿನ ಬೆಳಗ್ಗೆ ಕೊಲೆಗೆ ಉಪಯೋಗಿಸಿದ ಆಯುಧವನ್ನು ಅಮಾನತ್ತು ಪಡಿಸಿಕೊಳ್ಳಲು, ಆರೋಪಿಯು ಆಯುಧವನ್ನು ಬಚ್ಚಿಟ್ಟ ಸ್ಥಳವಾದ ಹರ್ಷ ಫರ್ನ್ ಹೋಟೆಲ್ ನ ಹಿಂಭಾಗದ ಚಾನೆಲ್ ಹತ್ತಿರ ಆರೋಪಿ ಜಬಿಯನ್ನು ಕರೆದುಕೊಂಡು ಹೋದಾಗ, ಜಬಿಯು ಕೃತ್ಯಕ್ಕೆ ಬಳಸಿದ ಆಯುಧವನ್ನು ತೆಗೆದುಕೊಂಡು, ಬೆಂಗಾವಲು ಕರ್ತವ್ಯದಲ್ಲಿದ್ದ ಸಿಬ್ಬಂಧಿ ರೋಷನ್ ರವರಿಗೆ ಹಲ್ಲೆ ಮಾಡಲು ಮುಂದಾದಾಗ ರೋಷನ್ ರವರು  ತಪ್ಪಿಸಿಕೊಂಡಿದ್ದು, ಅವರಿಗೆ ಈ ವೇಳೆ ಗಾಯವಾಗಿರುತ್ತದೆ. 

ಈ ಸಂದರ್ಭದಲ್ಲಿ ಹರೀಶ್ ಕೆ ಪಟೇಲ್, ಪಿಐ ಕುಂಸಿ ಠಾಣೆ ರವರು ತಮ್ಮ ಮತ್ತು ಸಿಬ್ಬಂಧಿಯವರ ರಕ್ಷಣೆಗಾಗಿ ಆರೋಪಿ ಜಬಿಯ ಕಾಲಿಗೆ ಗುಂಡು ಹಾರಿಸಿರುತ್ತಾರೆ. ನಂತರ ಗಾಯಗೊಂಡ ಸಿಬ್ಬಂಧಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿರುತ್ತದೆ ಎಂದರು.

   ಶಿವಮೊಗ್ಗದಲ್ಲಿ ಪುಡಿರೌಡಿಗಳ ಹಾವಳಿಗೆ ಸೂಕ್ತ ಕ್ರಮ:

ಶಿವಮೊಗ್ಗದಲ್ಲಿ ಪುಡಿರೌಡಿಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಮಾದ್ಯಮದವರು ಗಮನ ಸೆಳೆದಾಗ ಹೌದು ಇದು ನನ್ನ ಗಮನಕ್ಕೂ ಬಂದಿದೆ. ಶಿವಮೊಗ್ಗ ಹೊರವಲಯದಲ್ಲಿ ಮತ್ತು  ಶಿವಮೊಗ್ಗ ನಗರದ ಹಲವು ಏರಿಯಾಗಳಲ್ಲಿ ಪುಡಿರೌಡಿಗಳು ಸಾರ್ವಜನಿಕ ರಿಗೆ ಹೆದರಿಸುವುದು ಬೆದರಿಸುವುದನ್ನ  ಮಾಡಿದರೇ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಠಾಣಾಧಿಕಾರಿಗಳಿಗೆ ಮತ್ತು ಬೀಟ್ ಸಿಬ್ಬಂದಿಗಳಿಗೆ ಪುಡಿರೌಡಿಗಳನ್ನು ಮಟ್ಟ ಹಾಕಲು ಸೂಚನೆ ನೀಡಲಾಗಿದೆ ಎಂದರು.


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.