ಸಾಗರ ಉಪವಿಭಾಗದಲ್ಲಿನ ಪೊಲೀಸ್ ಸಿಬ್ಬಂದಿಗಳ ಬ್ರೀಪಿಂಗ್ ಹಾಗೂ ಕುಂದುಕೊರತೆ ವಿಚಾರಣೆ

ಶಿವಮೊಗ್ಗ: ಸಾಗರದ ಉಪ್ಪಾರ ಕೇರಿ, ಇಕ್ಕೇರಿ, ಕಾರ್ಗಲ್ ನ ಚೈನಾ ಗೇಟ್, ಜೋಗಾದ ಗಾಂದಿ ಪಾರ್ಕ್  ಮತ್ತು ಶಿಕಾರಿಪುರದ ಹಳಿಯೂರು ಮಸೀದಿ, ಕಣಿವೆಮನೆ, ಶಿರಾಳಕೊಪ್ಪ ಬಸ್ ನಿಲ್ದಾಣ, ಸೊರಬದ ಚಿಕ್ಕಪೇಟೆ, ಆನವಟ್ಟಿಯ ತಿಮ್ಲಾಪುರ ಮತ್ತು ತೀರ್ಥಹಳ್ಳಿಯ ಮೇಲಿನ ಕುರುವಳ್ಳಿ, ಹಣ್ಗೆರೆ ಕಟ್ಟೆ, ಆಗುಂಬೆಯ ಮಲಂದೂರು ಸರ್ಕಲ್, 
ಹೊಸನಗರದ  ಜಾಮಿಯಾ ಮಸೀದಿ, ನಗರದ ಚಿಕ್ಕಪೇಟೆ, ರಿಪ್ಪನ್ ಪೇಟೆಯ ವಿನಾಯಕ ಸರ್ಕಲ್ ಗಳಲ್ಲಿ ಸಾಗರ, ಶಿಕಾರಿಪುರ ಮತ್ತು ತೀರ್ಥಹಳ್ಳಿ 
ಉಪ ವಿಭಾಗದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಆಯಾ ಠಾಣೆಗಳ ಠಾಣಾಧಿಕಾರಿಗಳು ಬ್ರೀಫಿಂಗ್ ಮಾಡಿದರು.
ನಿರ್ವಹಿಸಬೇಕಾದ ಕರ್ತವ್ಯ ಹಾಗೂ ಮೇಲಾಧಿಕಾರಿಗಳ ಸೂಚನೆಗಳ ಬಗ್ಗೆ  ತಿಳಿಸಿರುತ್ತಾರೆ. ಈ ವೇಳೆ ವೃತ್ತ ನಿರೀಕ್ಷಕರು ಹಾಗೂ ಉಪವಿಭಾಗಾಧಿಕಾರಿಗಳು ಉಪಸ್ಥಿತರಿದ್ದರು .
 ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳ ಕುಂದುಕೊರತೆಯನ್ನು ಆಲಿಸಲಾಗಿರುತ್ತದೆ.

ಗಾಂಜಾ ವಿರುದ್ದ ಸಮರ 31 ಪ್ರಕರಣ ದಾಖಲು; 41 ಜನರ ವಿರುದ್ದ ಕಾನೂನು ಕ್ರಮ

  ಶಿವಮೊಗ್ಗ: ಕಳೆದ 15 ದಿನಗಳಲ್ಲಿ ದಿನಾಂಕಃ-06-10-2022 ರಿಂದ 22-10-2022ರವರೆಗೆ ಶಿವಮೊಗ್ಗ ಜಿಲ್ಲೆಯಾದ್ಯಂತ *ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವ* ಬಗ್ಗೆ ಅನುಮಾನ ಬಂದ ವ್ಯಕ್ತಿಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ಮತ್ತು ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದವರ ವಿರುದ್ಧ  ಎನ್.ಡಿ.ಪಿ.ಎಸ್ ಕಾಯ್ದೆ ರೀತ್ಯಾ  *ಒಟ್ಟು 31 ಪ್ರಕರಣಗಳನ್ನು 41 ಜನರ ವಿರುದ್ಧ* ದಾಖಲಿಸಿ ಕಾನೂನು  ರೀತ್ಯಾ  ಕ್ರಮ ಜರುಗಿಸಲಾಗಿರುತ್ತದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಲಾಗಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.