ಇದು ಶಿವಮೊಗ್ಗ ಸ್ಮಾರ್ಟ್ ಸಿಟಿನಾ? ಎಎ ಸರ್ಕಲ್ ಅಂಡರ್ ಪಾಸ್ ನೀರು ತುಂಬಿ ಕೊಳೆತು ನಾರುತ್ತಿದೆ ನೋಡಿ....

ಶಿವಮೊಗ್ಗ: ಶಿವಮೊಗ್ಗ ನಗರದ ಎಎ ಸರ್ಕಲ್ ಹತ್ತಿರ ಅಂಡರ್ ಪಾಸ್ ಗೇಟ್ ಬಳಿ ಇಂದು ಮಂಗಳವಾರ ಮದ್ಯಾಹ್ನ  ಸಮಯದಲ್ಲಿ ನಾನು ಖುದ್ದು ನೋಡಿದ ಘಟನೆ ಇದು.ಬೆಳಿಗ್ಗೆ 11-30 ಸಮಯದಿಂದ ಪೈಪ್ ನೀರು ಹೊರಹಾಕಲಾಗುತ್ತಿದೆ ಎಂದು ತಿಳಿದುಬಂದಿದೆ.ಜನರು ಎಎ ಸರ್ಕಲ್ ನಲ್ಲಿ ಓಡಾಡಲು ತೊಂದರೆಯಾಗುತ್ತಿದೆ ಎಂದು ಅಂಡರ್ ಪಾಸ್ ಕೆಲವು ವರ್ಷಗಳ ಹಿಂದೇ ನಿರ್ಮಾಣ ಮಾಡಲಾಗಿತ್ತು. ಇದೀಗ ಅಂಡರ್ ಪಾಸ್ ಕೊಳೆತು ನಾರುತ್ತಿದೆ.  
  ಅಂಡರ್ ಪಾಸ್ ಫುಲ್ ನೀರು ತುಂಬಿಕೊಂಡಿದೆ ಒಳಗಡೆ ನೋಡುವುದಕ್ಕೆ ಆಗುವುದಿಲ್ಲ .ಇದು ಶಿವಮೊಗ್ಗ ಸ್ಮಾರ್ಟ್ ಸಿಟಿನಾ? ಎಂದು ಜನರು ನೋಡಿಕೊಂಡು ಹೋಗುವ ಪರಿಸ್ಥಿತಿ ಬಂದೋದಗಿದೆ.
 ಪ್ರತಿಷ್ಟಿತ  ಬ್ಯಾರಿ ಮಾಲ್ ಎದುರುಗಡೆ ಎಎ ಸರ್ಕಲ್ ಅಂಡರ್ ಪಾಸ್ ನಲ್ಲಿ ತುಂಬಿಕೊಂಡಿರುವ ನೀರನ್ನು ಹೊರಹಾಕಲು ಜನರೇಟರ್ ಇಡಲಾಗಿದೆ. ನೀರಿನ ಪೈಪ್ ಪೈಪ್ ಮುಖಾಂತರ ಹೊರಹಾಕಲಾಗುತ್ತಿದೆ. ನೀರು ನೆಹರು ರಸ್ತೆಯಲ್ಲಿ ಜನರು ಓಡಾಡುವ ರಸ್ತೆಯಲ್ಲಿ ಬಿಡಲಾಗಿದೆ.ಅಂಡರ್ ಪಾಸ್ ಗೇಟ್ ಗೆ ಬೀಗ ಹಾಕಲಾಗಿದೆ.
ಇದೀಗ ಅಂಡರ್ ಪಾಸಿನಲ್ಲಿ ಎಲೆಕ್ಟ್ರೀಕ್ ಬೋರ್ಡ್ ಸಹ ಇದ್ದು,   ನೀರು ಖಾಲಿಯಾಗುವ ಸಂಭವ ಇದ್ದು, ಮಿನಿ ಜನರೇಟರ್ ಸುಟ್ಟು ಹೋಗುವ ಸಂಭವ ಇದೆ.ಇದು ಶಿವಮೊಗ್ಗ ಸ್ಮಾರ್ಟ್ ಸಿಟಿನಾ ಎಂದು ಜನರು ನೋಡಿ ನಗುವ ಸ್ಥಿತಿ ನಿರ್ಮಾಣವಾಗಿದೆ.ಇದರ ನಿರ್ವಹಣೆ ಪಾಲಿಕೆಯದ್ದಾ? ಅಥವಾ ಸ್ಮಾರ್ಟ್ ಸಿಟಿ ಅಧಿಕಾರಿಗಳಾದ್ದ? ಅಂಡರ್ ಪಾಸ್ ಎಲ್ಲಾ ಗೇಟ್ಗಳನ್ನು ಮುಚ್ಚಿ ಬೀಗ ಹಾಕಲಾಗಿದೆ.
       ಸ್ಮಾರ್ಟ್ ಸಿಟಿ ಅಧಿಕಾರಿಗಳಾಗಲೀ ಅಥವಾ ಪಾಲಿಕೆ ಅಧಿಕಾರಿಗಳು ಆಗಲೀ ಗಮನಹರಿಸಿ ಶಿವಮೊಗ್ಗ ನಗರದ ಪ್ರಮುಖ ಎಎ ಸರ್ಕಲ್ ನಲ್ಲಿ ಇರುವ  ಅಂಡರ್ ಪಾಸ್ ಗೇಟ್ ತೆಗೆದು ಕ್ಲೀನ್‌ ಮಾಡಿಸಿ  ಸಾರ್ವಜನಿಕರಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.
ಇವರಿಬ್ಬರು ನಾನು ವಿಡಿಯೋ ಮಾಡಬೇಕಾದರೇ ಬಂದು ಅಂಡರ್ ಪಾಸ್ ಗೆ ಹಾಕಿದ ಬೀಗ ತೆಗೆದು ಒಳಹೋಗಿ ಮೋಟಾರ್ ಸ್ವಿಚ್ ಮಾಡಿದರು. ಪಾಲಿಕೆ ಕಮೀಷನರ್ ಮತ್ತು ಇಂಜಿನಿಯರ್ ಹೇಳಿದ್ದಾರೆ ಎಂದು ನೀರು ಹೊರ ಹಾಕುತ್ತಿರುವುದಾಗಿ ತಿಳಿಸಿದ್ದಾರೆ.ನಮ್ಮ ಪರಿಚಯ ಮಾಡಿಕೊಂಡು ಇವರುಗಳ ಹೆಸರು ಕೇಳಿದರೇ ಹೆಸರು ಹೇಳಲಿಲ್ಲ.ಯಾಕ್ರೀ ವಿಡಿಯೋ ಮಾಡುತ್ತೀರಾ ಪೋಟೋ ತೆಗೆಯುತ್ತೀರಾ? ಅಂತಾ ನಮಗೆ ಪ್ರಶ್ನೆ ಮಾಡಿದರು.   ನಾವು ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದರು.ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.