ಶಿವಮೊಗ್ಗ:ಶಿಯಾ ವತಿಯಿಂದ ಕಲ್ಚರಲ್ ಫೆಸ್ಟ್ -2022
ಶಿವಮೊಗ್ಗ : ನಗರದ ಕುವೆಂಪು ರಂಗಮಂದಿರದಲ್ಲಿ ಶಿವಮೊಗ್ಗ ಹೆಲ್ತ್ಕೇರ್ ಎಂಪ್ಲಾಯಿಸ್ ಅಸೋಸಿಯೇಷನ್ ಇವರ ಆಶ್ರಯದಲ್ಲಿ ಹಾಡು ಮತ್ತು ನೃತ್ಯ ಸ್ಪರ್ಧೆ ಕಾರ್ಯಕ್ರಮವನ್ನು ದಿನಾಂಕ 30-10-2022 ರ ಭಾನುವಾರದಂದು ಬೆಳಿಗ್ಗೆ 10 ಗಂಟೆಯಿಂದ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ನಗರದ ಎಲ್ಲಾ ಖಾಸಗಿ ಆಸ್ಪತ್ರೆಗಳ ವೈದ್ಯವೃಂದದವರು ಹಾಗೂ ಸಿಬ್ಬಂದಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅಸೋಸಿಯೇಷನ್ ಅಧ್ಯಕ್ಷರಾದ ಡಾ||ವಿಕ್ರಮ್ ಬೆನ್ನೂರ್‌ರವರು ತಿಳಿಸಿರುತ್ತಾರೆ.
ಈ ಕಾರ್ಯಕ್ರಮದಲ್ಲಿ ಸಂಸತ್ ಸದಸ್ಯರಾದ ಬಿ.ವೈ ರಾಘವೇಂದ್ರ, ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ.ಎಸ್ ಈಶ್ವರಪ್ಪ, ವಿಧಾನಪರಿಷತ್ ಸದಸ್ಯರಾದ ಅರುಣ್ ಡಿ.ಎಸ್, ಆಯನೂರ್ ಮಂಜುನಾಥ್, ಜಿಲ್ಲಾ ವೈದ್ಯಾಧಿಕಾರಿಗಳಾದ ಡಾ|| ರಾಜೇಶ್ ಸುರಿಗೆಹಳ್ಳಿ, ಶಿಯಾ ಸಂಸ್ಥೆಯ ಗೌರವಾಧ್ಯಕ್ಷರು ಹಾಗೂ ಸರ್ಜಿ ಸಮೂಹ ಆಸ್ಪತ್ರೆಗಳ ಛರ‍್ಮನ್‌ರಾದ ಡಾ|| ಧನಂಜಯ ಸರ್ಜಿ, ಸುಬ್ಬಯ್ಯ ಮೆಡಿಕಲ್ ಕಾಲೇಜಿನ ವೈದ್ಯಾಧಿಕಾರಿಗಳಾದ ಡಾ|| ನಾಗೇಂದ್ರ ಹಾಗೂ ನಾರಾಯಣ ಹೃದಯಾಲಯದ ಶ್ರೀ ವರ್ಗೀಸ್ ಪಿ ಜಾನ್‌ರವರು ಭಾಗವಹಿಸಲಿದ್ದಾರೆ ಎಂದು ವಿಕ್ರಮ್ ಬೆನ್ನೂರ್‌ರವರು ತಿಳಿಸಿರುತ್ತಾರೆ.
ಸುದ್ಧಿಗೋಷ್ಟಿಯಲ್ಲಿ ಶಿಯಾ ಕಾರ್ಯದರ್ಶಿಗಳಾದ ರಾಜಾಸಿಂಗ್, ಅನಿಲ್ ಸಿ.ಪಿ., ಪುರುಷೋತ್ತಮ್ ಕೆ.ಆರ್. ರೆಹಮತ್, ಪ್ರದೀಪ್, ಸಚಿನ್, ಕೊಟ್ರೇಶ್ ಹಾಗೂ ಇತರ ಆಸ್ಪತ್ರೆಗಳ ಆಡಳಿತಾಧಿಕಾರಿಗಳು ಹಾಜರಿದ್ದರು.

Leave a Comment