ಭದ್ರಾವತಿ ಹಿಂದೂಮಹಾಸಭಾ ಗಣಪತಿಯ ವಿಜೃಂಭಿಸಿದ ಮೆರವಣಿಗೆ ಶಾಂತಿಯುತ ವಿಸರ್ಜನೆ

ಭದ್ರಾವತಿ ,ಸೆ.8 : ಹೊಸಮನೆ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿದ್ದ 50 ನೇ ವರ್ಷದ ಹಿಂದೂಮಹಸಭಾ ಗಣಪತಿ ವಿಸರ್ಜನಾಪೂರ್ವ ಮೆರವಣಿಗೆ ಗುರುವಾರ ಅತ್ಯಂತ ವಿಜೃಂಭಣೆಯಿಂದ ಶಾಂತಿಯುತವಾಗಿ ನೆರವೇರಿತು.

ಬೆಳಿಗ್ಗೆ  ಗಣಪತಿಗೆ ಪೂಜೆಸಲ್ಲಿಸಿ ಮಹಾಮಂಗಳಾರತಿ ಮಾಡಿದನಂತರ ಗಣಪತಿಯನ್ನು ಪುಷ್ಪಾಲಂಕೃತ ವಾಹನದಲ್ಲಿರಿಸಲಾಯಿತು, ಮೆರವಣಿಗೆಗೆ ಶಾಸಕ ಬಿಕೆ.ಸಂಗಮೆಶ್ವರ್  ಚಾಲನೆ ನೀಡಿದರು.

ಶಿವಾಜಿವೃತ್ತಬಳಸಿ ಹೊಸಮನೆ ಮುಖ್ಯ ರಸ್ತೆಯಲ್ಲಿಸಾಗಿ ಬಂದಗಣಪತಿಮೆರವಣಿಗೆ, ರಂಗಪ್ಪವೃತ್ತ, ಮಾಧವಾಚಾರ್ ವೃತ್ತ,ಹಾಲಪ್ಪವೃತ್ತ, ಅಂಬೇಡ್ಕರ್ ವೃತ್ತ ಮೂಲಕ ಹುತ್ತಾಬಸ್ ನಿಲ್ದಾಣದವರೆಗೆ ಸಾಗಿ ಪುನಃ ಅದೇ ಮಾರ್ಗದಮೂಲಕ ಮಾಧವಾಚಾರ್ ವೃತ್ತಕ್ಕೆಬಂದು ತರಿಕೆರೆರಸ್ತೆಯಲ್ಲಿ ಗಾಂಧೀವೃತ್ತ ಬಳಸಿಕೊಂಡು ನಗರಸಭೆ ಮುಂದಿನ ಭದ್ರಾನದಿದಡಕ್ಕೆ ನಗರದ ವಿವಿಧಸಂಘ,ಸಂಸ್ಥೆಗಳವರು,ನ್ಯಾಯವಾದಿಗಳ ಸಂಘದವರು, ವ್ಯಾಪಾರಸ್ಥರು ಗಣಪತಿಗೆ ಹೂವಿನ ಹಾರ ,ಹಣ್ಣಿನ ಹಾರವನ್ನು ಹಾಕಿ ತಮ್ಮಭಕ್ತಿ ಸಮರ್ಪಿಸಿದರು.

ಆಂಜನೇಯನ ವಿಗ್ರಹವನ್ನು ಹೊತ್ತ ವಾಹನವು ಸಹ ಮೆರವಣಿಗೆಯಲ್ಲಿ ಭಾಗವಹಿಸಿದ್ದು  ವಿಶೇಷವಾಗಿತ್ತು.

ಬೆಳಗಿನಿಂದಲೇ ಆರಂಭವಾದ ಮೆರವಣಿಗೆಯ ಖುಷಿಯಲ್ಲಿ ಗಣಪತಿ ಮೆರವಣಿಗೆ ಸಾಗಿ ಬರುವ ಮಾರ್ಗಗಳಲ್ಲಿ ಯುವಕರು ಬೃಹದಾಕಾರದ ಓಂಕಾರ ಹಾಗೂ ಹೂವಿನ ಅಲಂಕಾರ, ದೀಪದ ಅಲಂಕಾರಮಾಡಿ ಅದರ ಸುತ್ತಲು ಕುಣಿದು ಕುಪ್ಪಳಿಸಿದರು.

ಯುವತಿಯರ ಉತ್ಸಾಹದಿಂದ ಕುಣಿತ;

ಈಬಾರಿಮೆರವಣಿಗೆಯಲ್ಲಿ ಭಾಗವಹಿಸಿದ್ದ ಅಸಂಖ್ಯಾತ ಯುವತಿಯರು ಮಹಿಳೆಯರು ಯುವಕರಿಗೆ ಸರಿ ಸಮಾನವಾಗಿ ಜೋಷಿನಿಂದ ಮೆರವಣಿಗೆ ಯಲ್ಲಿ ಕುಣಿದು ಕುಪ್ಪಳಿಸಿದರು., ಘೋಷಣೆಕೂಗುತ್ತಾ, ಜಯಕಾರ ಹಾಕುತ್ತಾ ಸಾಗಿದರು.

 *ಯಥೇಚ್ಛ ಪ್ರಸಾದ,ಅನ್ನಸಂತರ್ಪಣೆ.* 

ಮರವಣಿಗೆ ಮಾರ್ಗದ ಉದ್ದಕ್ಕೂ  ವಿವಿದ ಸಂಘಸಂಸ್ಥೆಗಳವರು ಭಕ್ತಾದಿಗಳಿಗೆ ಲಾಡು,ಹೋಳಿಗೆ ಸೇರಿದಂತೆ ಅನೇಕರೀತಿ ಖಾದ್ಯಗಳುಸೇರಿದಂತೆ ಅಲ್ಲಲ್ಲಿ ಅನ್ನಸಂತರ್ಪಣೆ ವ್ಯವಸ್ಥೆಮಾಡಿದ್ದರು.

 *ಪೋಲಿಸ್ ಬಿಗಿಭದ್ರತೆ.* 

ಶಾಂತಿ ಸುವ್ಯವಸ್ಥೆ ಹಿತದೃಷ್ಠಿ ಯಿಂದ ಪೋಲಿಸ್ ಇಲಾಖೆ ಅಧಿಕ ಪ್ರಮಾಣದಲ್ಲಿ ಪೋಲಿಸರನ್ನು ಮೆರವಣಿಗೆಯಲ್ಲಿ ಹಾಗೂ ನಗರದ ವಿವಿಧ ಸೂಕ್ಷ್ಮಪ್ರದೇಶಗಳಲ್ಲಿ ನಿಯೋಜಿಸಿತ್ತು, ಡ್ರೋಣ್ ಮೂಲಕ ಮೆರವಣಿಗೆ ಯನ್ನು ಚಿತ್ರೀಕರಿಸುವ ವ್ಯವಸ್ಥೆ ಮಾಡಿದ್ದು ಕಂಡುಬಂದಿತು.ಅಲ್ಲಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಜೊತೆಗೆ ರ್‍ಯಾಪಿಡ್ ಆಕ್ಷನ್ ಫೋರ್ಸ ಪಡೆಗಳ ಸಿಬ್ಬಂದಿಗಳನ್ನುಸಹ ನಿಯೋಜಿಸಲಾಗಿತ್ತು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.