ರಾಜಕಾರಣ ಪ್ರವೇಶಿಸುವ ಇಂಗಿತ ವ್ಯಕ್ತಪಡಿಸಿರುವುದು ನಿಜ.ಯಾವುದೆ ಪಕ್ಷ, ಸಂಘಟನೆಗಳ ಮುಖಂಡರ ಪ್ರೇರಣೆ ಇರಲಿಲ್ಲ:ಡಾ.ಧನಂಜಯ ಸರ್ಜಿ ಪ್ರತಿಕ್ರಿಯೆ

ಶಿವಮೊಗ್ಗ: ‘ಸರ್ಜಿ ಕನ್ವೆನ್ಷನ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ನನ್ನ ಜನ್ಮದಿನದ (12-9-2022) ಸಮಾರಂಭದಲ್ಲಿ ರಾಜಕಾರಣ ಪ್ರವೇಶಿಸುವ ಇಂಗಿತ ವ್ಯಕ್ತಪಡಿಸಿರುವುದು ನಿಜ. ಆದರೆ, ಘೋಷಣೆಯ ಹಿಂದೆ ಯಾವುದೆ ಪಕ್ಷ, ಸಂಘಟನೆಗಳ ಮುಖಂಡರ ಪ್ರೇರಣೆ ಇರಲಿಲ್ಲ’ ಎಂದು ಸರ್ಜಿ ಫೌಂಡೇಷನ್‌ ಮುಖ್ಯಸ್ಥ ಡಾ.ಧನಂಜಯ ಸರ್ಜಿ ಪ್ರತಿಕ್ರಿಯಿಸಿದ್ದಾರೆ.
’ಇನ್ನಷ್ಟು ಸಮಾಜ ಸೇವೆ ಮಾಡಬೇಕು. ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು ಎನ್ನುವುದು ನನ್ನ ಬಹು ದಿನಗಳ ಬಯಕೆ, ಬಂದು ಬಳಗ, ಹಿತೈಷಿಗಳು ಹಾಗೂ ಅಭಿಮಾನಿಗಳ ಪ್ರೇರಣೆಯಿಂದ ಅಂದು ಅವರ ಸಮ್ಮುಖದಲ್ಲಿ ಹೊಸ ಬದುಕಿಗೆ ತೆರೆದುಕೊಳ್ಳುವ ಇಂಗಿತ ವ್ಯಕ್ತಪಡಿಸಿದೆ. ವೇದಿಕೆಯಲ್ಲಿ, ನಾನು ಗೌರವಿಸುವ ಕೆಲವು ಗಣ್ಯರು ಅಂದು ಆಸೀನರಾಗಿದ್ದರು, ಆದರೆ,  ಅವರು ಪ್ರತಿನಿಧಿಸುವ ಸಂಘಟನೆ ಅಥವಾ ಪಕ್ಷದ ಬೆಂಬಲಿತ ಅಭ್ಯರ್ಥಿ ಎನ್ನುವ ರೀತಿ ಮಾತನಾಡಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡುವಾಗ ಸಹಜವಾಗಿ ನನ್ನ ವೈದ್ಯಕೀಯ ವೃತ್ತಿಯ ಸೇವೆಯನ್ನು ಹೇಳಿಕೊಂಡಿದ್ದು ಇದರೊಂದಿಗೆ ಹಿಂದಿನಿಂದಲೂ ನನ್ನನ್ನು ನಾನು ಸಮಾಜಮುಖಿಯಾಗಿ ತೊಡಗಿಸಿಕೊಂಡ ಬಗ್ಗೆ ಮಾತನಾಡುತ್ತ ಇನಷ್ಟು ಸಮಾಜ ಮುಖಿಯಾಗಬೇಕು ನನ್ನಿಂದ ಈ ಸಮಾಜಕ್ಕೆ ಹೆಚ್ಚಿನ ಸೇವೆ ಸಿಗುವಂತೆ ಆಗಬೇಕು ಎಂಬುವ ಸದುದ್ದೇಶದಿಂದ ಮನದಾಳ ತೋಡಿಕೊಂಡಿರುವೆ. ಹಲವರು ನನಗೆ ನೀವು ಚುನಾವಣೆಗೆ ನಿಲ್ಲುವಿರ? ರಾಜಕಾರಣಕ್ಕೆ ಹೋಗುವಿರ? ಎಂದೆಲ್ಲಾ ಪ್ರಶ್ನೆ ಮಾಡುತ್ತಿದ್ದರು, ಚುನಾವಣಾ ರಾಜಕಾರಣದ ಮೂಲಕವು ಜನಸೇವೆಗೆ ಸಿದ್ದನಿದ್ದೇನೆ’ ಎಂದಷ್ಟೇ ಹೇಳಿಕೆ ನೀಡಿದ್ದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಕಾರ್ಯಕ್ರಮಕ್ಕೆ ಅಪಾರ ಬಂಧುಬಾಂದವರು, ಹಿತೈಷಿಗಳು, ಒಡನಾಡಿಗಳು, ಗೆಳೆಯರು, ವೃತ್ತಿ ಬಾಂದವರು, ಆಸ್ಪತ್ರೆ ಸಿಬ್ಬಂದಿ, ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ನನ್ನನ್ನು ಹಾರೈಸಿದ್ದಕ್ಕೆ ಎಲ್ಲರಿಗೂ ಹೃದಯ ಪೂರ್ವಕವಾಗಿ ಕೃತಜ್ಞತೆ ಸಲ್ಲಿಸುತ್ತಿದ್ದೇನೆ ಎಂದರು.
ನನ್ನ ಜನ್ಮದಿನದಂದು ನಾನು ಆಡಿದ ಮಾತುಗಳಿಗೆ ಯಾವುದೇ ಪಕ್ಷದ, ಮುಖಂಡರ ಅಥವಾ ಸಂಘ ಸಂಸ್ಥೆಗಳ ಪ್ರೇರಣೆ ಇಲ್ಲ.  ನನ್ನ ರಾಜಕೀಯ ಪ್ರವೇಶದ ಬಗ್ಗೆ ಯಾರಲ್ಲಿಯೂ ಗೊಂದಲ ಮೂಡಬಾರದೆಂಬ ಕಾರಣಕ್ಕೆ ಈ ಮೂಲಕ ಸ್ಪಷ್ಟ ಪಡಿಸಿದ್ದಾರೆ.


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.