ಶಿವಮೊಗ್ಗದಲ್ಲಿ ಒಂದು ಗಂಟೆ ಮಳೆ ಆರ್ಭಟ : ಹಲವು ಬಡಾವಣೆಯಲ್ಲಿ ಮನೆಗಳಿಗೆ ನುಗ್ಗಿದ ನೀರು

ಶಿವಮೊಗ್ಗ, ಸೆ. 6: ಶಿವಮೊಗ್ಗ ನಗರದಲ್ಲಿ ಮಂಗಳವಾರ  ಇಂದು ಸಂಜೆ ಒಂದು ಗಂಟೆ ಅವಧಿಯಲ್ಲಿ ಸುರಿದ ಮಳೆಗೆ  ನಗರದ ಹಲವೆಡೆ ಬಡಾವಣೆಯಲ್ಲಿ ಮನೆಗಳಿಗೆ ನುಗ್ಗಿದ ನೀರು ಜನರು ಸುಸ್ತೋ ಸುಸ್ತೋ.... ಜನರು ಆತಂಕದಿಂದ ಬದುಕುವಂತಾಗಿದೆ. 

ಮಳೆಯಿಂದ ನೂರಾರು ಮನೆಗಳು ಜಲಾವೃತವಾಗಿದ್ದವು. ನಗರದ ಹೊಸಮನೆ ಬಡಾವಣೆಯ ಚೌಡೇಶ್ವರಿ ಕಾಲೋನಿ, ಅಣ್ಣಾ ನಗರ, ಸಿದ್ದೇಶ್ವರ ನಗರ, ಬಾಪೂಜಿ ನಗರ, ಟ್ಯಾಂಕ್ ಮೊಹಲ್ಲಾ, ಗೋಪಾಲಗೌಡ ಬಡಾವಣೆ, ಎನ್.ಟಿ.ರಸ್ತೆ ಸೇರಿದಂತೆ ಹಲವೆಡೆ ಜವಸತಿ ಪ್ರದೇಶಗಳು ಜಲಾವೃತವಾಗಿದ್ದವು. ಅಂಗಡಿ-ಮುಂಗಟ್ಟುಗಳಿಗೂ ನೀರು ನುಗ್ಗಿತ್ತು. ಅಪಾರ ಪ್ರಮಾಣದ ನಷ್ಟ ಮತ್ತು ಕಷ್ಟವನ್ನು ಜನರ ಅನುಭವಿಸಿದ್ದು.ಶಿವಮೊಗ್ಗ ನಗರದ ಸ್ಮಾರ್ಟ್ ಸಿಟಿ ಎಂ.ಡಿ  ವಟಾರೆ ಮತ್ತು ಅಧಿಕಾರಿಗಳಿಗೆ ಶಾಪ ಹಾಕಿ ಧಿಕ್ಕಾರ ಕೂಗುತ್ತಿದ್ದಾರೆ.

ನಗರದಲ್ಲಿ ಕಳೆದ ಕೆಲ ದಿನಗಳಿಂದ ಹಗಲು ವೇಳೆ ಬಿರು ಬಿಸಿಲಿನ ವಾತಾವರಣ ಕಂಡುಬರುತ್ತಿದ್ದು, ಸಂಜೆ ವೇಳೆ ಭಾರೀ ಮಳೆಯಾಗುತ್ತಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಳ್ಳುವಂತಾಗಿದೆ.ಶಿವಮೊಗ್ಗ ಜನರು ಸಂಜೆಯಾಗುತ್ತಿದ್ದಂತೆ ದಿನನಿತ್ಯ ಭಯ ಮತ್ತು  ಆತಂಕ ದಲ್ಲಿ ಬದುಕು ಸಾಗಿಸುವಂತಾಗಿದೆ. 

ಶಿವಮೊಗ್ಗ ಶಾಸಕರು ಮತ್ತು ಪಾಲಿಕೆ ಮೇಯರ್, ಆಯುಕ್ತರು  ಇತ್ತ ಕಡೆ ಗಮನಹರಿಸಿ ಪದೇ ಪದೇ ಈ ರೀತಿಯ ಸಮಸ್ಯೆಗಳು ನಗರದ ನಾಗರೀಕರಿಗೆ ಉಂಟಾಗದಂತೆ  ಸಮಸ್ಯೆ ಬಗೆಹರಿಸುವತ್ತಾ ಚಿಂತಿಸಲೀ ಜನರ ಆತಂಕ ಮತ್ತು ಭಯವನ್ನು ನಿವಾರಿಸಲು ಗನಹರಿಸಲೀ ಎಂಬುದು ಸಂಕಷ್ಟಕ್ಕೆ ನಷ್ಟ ಕ್ಕೆ  ಗುರಿಯಾಗಿರುವ ನಾಗರೀಕರ ಪ್ರಾರ್ಥನೆ ಯಾಗಿದೆ....

ಶಿವಮೊಗ್ಗದಲ್ಲಿ ಸಂಜೆ ಮಳೆಗೆ ಮನೆಗಳಿಗೆ ನುಗ್ಗಿದ ನೀರು ವಿಡಿಯೋ ನೋಡಿ...

ಕೂಡಲೇ ಸ್ಮಾರ್ಟ್ ಸಿಟಿ ಅಧಿಕಾರಿಗಳನ್ನು ಎತ್ತಂಗಡಿ ಮಾಡಿ ದಕ್ಷ ಪ್ರಾಮಾಣಿಕ ಅಧಿಕಾರಿಗಳ ನ್ನು ಸ್ಮಾರ್ಟ್ ಸಿಟಿ ನಿರ್ವಹಣೆ ಗೆ ನೇಮಿಸಿ...

ಶಿವಮೊಗ್ಗ ದಲ್ಲಿ ಇಂದು ಸಂಜೆ ಒಂದು ಗಂಟೆ ಸುರಿದ ಮಳೆಗೆ ಮನೆಗಳಿಗೆ ನುಗ್ಗಿದ ನೀರು ವಿಡಿಯೋ ನೋಡಿ...

    ಎಚ್ಚೆತ್ತು ಕೊಳ್ಳದಿದ್ದರೆ ನೊಂದ ಜನರು  ಸ್ಮಾರ್ಟ್ ಸಿಟಿ ಎಂಡಿ ಮತ್ತು ಅಧಿಕಾರಿಗಳಿಗೆ ಓಡಾಡಿಸಿಕೊಂಡು ಹೊಡೆಯುವ ಕಾಲ ಬರಬಹುದು!! ಪದೃ ಪದೇ  ‌‌ನೊಂದ  ನಾಗರೀಕರ ಆಕ್ರೋಶ ಮುಗಿಲು ಮುಟ್ಟಿದೆ. ಮುಂದೇನಾಗುವುದು ಕಾದು ನೋಡುವ...

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.