*ಕನ್ನಡ ಸಾಹಿತ್ಯ ಪರಿಷತ್ತಿನ 'ಸಂಘಟನಾ ಕಾರ್ಯದರ್ಶಿ'ಯಾಗಿ ಶ್ರೀರಂಜಿನಿದತ್ತಾತ್ರಿ ಆಯ್ಕೆ :*

ಶಿವಮೊಗ್ಗ:  ನಾಡೋಜ ಡಾ.ಮಹೇಶ್ ಜೋಷಿ ಅಧ್ಯಕ್ಷರು" ಕನ್ನಡ ಸಾಹಿತ್ಯ ಪರಿಷತ್ತು" ಬೆಂಗಳೂರು, ಇವರು ಶಿವಮೊಗ್ಗ ಜಿಲ್ಲೆಯ ಸಾಹಿತ್ಯ ಪರಿಷತ್ತಿನ ಸದಸ್ಯರ ಮೇಲೆ ಅಭಿಮಾನವಿಟ್ಟು ಜಿಲ್ಲೆಯ ಕ್ರೀಯಾಶೀಲ ಸಾಮಾಜಿಕ ಕಾರ್ಯಕರ್ತೆ ಹಾಗು ಸಾಹಿತಿ, ಅಂಕಣಕಾರ್ತಿಯಾದ ಶ್ರೀಮತಿ ಶ್ರೀರಂಜನಿ ದತ್ತಾತ್ರಿಯವರನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ...

ಶ್ರೀರಂಜನಿ ದತ್ತಾತ್ರಿಯವರು ಈ ಹಿಂದಿನ ಅವಧಿಯಲ್ಲಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸಂಘಟನ ಕಾರ್ಯದರ್ಶಿಗಳಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಪ್ರತಿಫಲವಾಗಿ ಸಂದಗೌರವ ಇದಾಗಿದೆ. ಕಳೆದ ಬಾರಿ ಜಿಲ್ಲೆಯ ಪ್ರತಿ ತಾಲ್ಲೂಕುಗಳನ್ನು ಸುತ್ತುತ್ತಾ ಕನ್ನಡದ ಕಾರ್ಯಕ್ರಮಗಳ ಆಯೋಜನೆಯ ಮೂಲಕ ಕನ್ನಡ ಪ್ರತಿ ಗ್ರಾಮಗ್ರಾಮಗಳಿಗು ತಲುಪಿಸಲು ಕಾರ್ಯಕರ್ತರೊಂದಿಗೆ ನಿರಂತರ ಶ್ರಮಿಸಿದ್ದಾರೆ...

*ಡಿ.ಬಿ.ಶಂಕರಪ್ಪ ಅಭಿನಂದನೆ :*

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು. ಶಿವಮೊಗ್ಗ, ದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಡಿ.ಬಿ.ಶಂಕರಪ್ಪ ನವರು ನೂತನವಾಗಿ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಶ್ರೀಮತಿ ಶ್ರೀರಂಜನಿ ದತ್ತಾತ್ರಿ ಯವರನ್ನು ಅಭಿನಂದಿಸಿದ್ದಾರೆ...

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಶ್ರಮವಹಿಸಿ ಜಿಲ್ಲೆಯ ಎಲ್ಲಾ ಕಡೆಗಳಲ್ಲಿಯೂ ಓಡಾಟ ಮಾಡಿ ಸಂಘಟಿಸಿದ ಶ್ರೀ ರಂಜಿನಿ ದತ್ತಾತ್ರಿಯವರಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾಕಾರ್ಯದರ್ಶಿ ಸ್ಥಾನ ಸಿಕ್ಕಿದ್ದು ಬಹಳ ಸಂತಸ ತಂದಿದೆ. ನಾಡೋಜ ಡಾ.ಮಹೇಶ್ ಜೋಷಿಯವರಿಗೆ ಗೌರವಪೂರ್ವಕವಾಗಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಪರವಾಗಿ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದ್ದಾರೆ. ಮುಂದಿನ ದಿನಮಾನಗಳಲ್ಲೂ ಅವರ ಕಾರ್ಯ ರಾಜ್ಯಮಟ್ಟದಲ್ಲಿ ಮೊಳಗಲಿ ಎಂದು ಬಯಸುತ್ತಾ ಅವರಿಗೆ ಶುಭ ಹಾರೈಸುತ್ತೇನೆ ಎಂದಿದ್ದಾರೆ...

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.