ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ತೀರ್ಥಹಳ್ಳಿ ಯಲ್ಲಿ ಭಾರತ್ ಜೋಡೋ ಪಾದಯಾತ್ರೆ ಪೂರ್ವಭಾವಿ ಸಭೆ

 ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಭಾರತ್ ಜೋಡೋ ಪಾದಯಾತ್ರೆ ಪೂರ್ವಭಾವಿ ಸಭೆ *ಮಾಜಿ ಸಚಿವ ಶ್ರೀಯುತ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ನಡೆಯಿತು..

ಕೆಟಿಕೆ ಕಲ್ಯಾಣ ಮಂದಿರದಲ್ಲಿ ಆಯೋಜನಗೊಂಡಿದ್ದ  ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿಗಳಾದ ಮಯೂರ್ ಜಯಕುಮಾರ್ ವೀಕ್ಷಕರಾಗಿ ಆಗಮಿಸಿದ್ದರು.

 ಕೆಪಿಸಿಸಿ ಇನ್ ಚಾರ್ಜ್ ಶ್ರೀಯುತ ಶ್ರೀನಿವಾಸ್ ಜಿಲ್ಲಾಧ್ಯಕ್ಷರಾದ ಶ್ರೀಯುತ ಹೆಚ್ ಎಸ್ ಸುಂದರೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರ್ ಪಕ್ಷದ ಮುಖಂಡರಾದ ಕಡ್ತೂರ್ ದಿನೇಶ್ ಎರಡು ಬ್ಲಾಕ್ ಅಧ್ಯಕ್ಷರಾದ ಶ್ರೀಯುತ ಕೆಸ್ತೂರ್ ಮಂಜುನಾಥ್ ಮತ್ತು ಶ್ರೀಯುತ ಮುಡುಬ ರಾಘವೇಂದ್ರ, ರಾಷ್ಟ್ರೀಯ ಯುವ ಕಾಂಗ್ರೆಸ್ ನ ವಕ್ತಾರರಾದ ಆದರ್ಶ ಹುಂಚದಕಟ್ಟೆ  ಕಡ್ತೂರ್ ದಿನೇಶ್ ವೇದಿಕೆ ಮೇಲಿದ್ದರು. 

ಮಯೂರ್ ಜಯಕುಮಾರ್ ಕಂಚಿನಕಂಠದಲ್ಲಿ  ಮೂಡಿ ಬಂದ ಭಾಷಣದುದ್ದಕ್ಕೂ ಕೇಂದ್ರ ಸರ್ಕಾರದ ವಿಫಲ ನೀತಿಗಳು, ರಾಹುಲ್ ಗಾಂಧಿಯವರ ಪಾದಯಾತ್ರೆಯ ಧ್ಯೇಯೋದ್ದೇಶಗಳ ಬಹು ವಿಸ್ತಾರವಾಗಿ ತಿಳಿಸಿದರು. ಶ್ರೀಯುತ ಕಿಮ್ಮನೆ ರತ್ನಾಕರ್ ತೀರ್ಥಹಳ್ಳಿ ವಿಧಾನಸಭಾಕ್ಷೇತ್ರದ ಇತಿಹಾಸ ಮತ್ತು ಮತಗಳ ಕ್ರೋಢಿಕರಣದ ಬಗೆಗಳನ್ನು ವಿವರಿಸಿದರು. 

ಸಂಪೂರ್ಣ ಕಾರ್ಯಕ್ರಮದ ಹೊಣೆ ಹೊತ್ತಿದ್ದ ಮಾಜಿ ಸಚಿವ ಶ್ರೀಯು ಕಿಮ್ಮನೆ ರತ್ನಾಕರ್ ಸಂಪೂರ್ಣ ಆರಂಭದಿಂದ ಅಂತ್ಯದವರೆಗೂ ಪ್ರತಿಯೊಂದನ್ನು ಜವಬ್ಧಾರಿಯುತವಾಗಿ ನರ್ವಹಣೆ ಮಾಡಿದ್ದ ಕಾರ್ಯಕರ್ತರ ಮೆಚ್ಚುಗೆಗೆ ಪಾತ್ರವಾಯಿತು. 

ಈ ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಮರನಾಥ ಶೆಟ್ಟಿ, ಪುಟ್ಟೋಡ್ಲು ರಾಘವೇಂದ್ರ, ಟೌನ್ ಪಂಚಾಯತ್ ಅಧ್ಯಕ್ಷರಾದ ಜಯಪ್ರಕಾಶ ಶೆಟ್ಟಿ. ಮುಖಂಡರಾದ ಅಮ್ರಪಾಲಿ ಸುರೇಶ್, ಬಾಳೆಹಳ್ಳಿ ಪ್ರಭಾಕರ್ , ಬಂಡೆ ವೆಂಕಟೇಶ್ ಓಬಿಸಿ ಘಟಕದ ಬ್ಲಾಕ್ ಅಧ್ಯಕ್ಷರಾದ ಉದಯಕುಮಾರ್ , ಜನಗಲ್ ರಾಮಚಂದ್ರ ಮತ್ತು ಇತರ ಎಲ್ಲಾ ಘಟಕದ ಪದಾಧಿಕಾರಗಳು ಮುಂಚುಣಿ ನಾಯಕರು ಹಾಜರಿದ್ದರು....

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.