ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಕೆ ಶಾಂತಿ ಕದಡಿದರೆ ಸತ್ಯಾಗ್ರಹ ಮಾಡಬೇಕಾದೀತು !

ಶಿವಮೊಗ್ಗ : ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಹಿರಿಮೆ ಹೊಂದಿದ  ಶಿವಮೊಗ್ಗದಲ್ಲಿ  ಶಾಂತಿಯನ್ನು ಕದಡಬಾರದು, ಒಂದು ವೇಳೆ ಅಂತಹ ಪ್ರಸಂಗಗಳು ನಡೆದರೆ ಸತ್ಯಾಗ್ರಹ ಮಾಡಬೇಕಾದೀತು ಎಂದು  ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ   ಎಚ್ಚರಿಸಿದರು. 
ನಗರದಲ್ಲಿ ಇಂದು ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದ ಗುರುಗಳು ನೇತೃತ್ವದಲ್ಲಿ ಸಮಾನ ಮನಸ್ಕರು, ವಿವಿಧ  ಸಂಘ, ಸಂಸ್ಥೆಗಳು, ಸಂಘಟನೆಗಳು, ರೈತ ಮುಖಂಡರು, ಪ್ರಗತಿಪರ ಚಿಂತಕರು,ವರ್ತಕರು, ವ್ಯಾಪಾರಿಗಳು ಹಾಗೂ ಸಾರ್ವಜನಿಕರೇ ಸ್ವಯಂ ಪ್ರೇರಿತರಾಗಿ ಹಮ್ಮಿಕೊಂಡದ್ದಿ ` ನಮ್ಮ ನಡಿಗೆ ಶಾಂತಿಯ ಕಡೆಗೆ ' ಬೃಹತ್‌  ಶಾಂತಿ ನಡಿಗೆ ಸಿಮರ‍ಸೌ ಮೆಡಿಕಲ್‌ ಕಾಲೇಜಿನಿಂದ ಆರಂಭಗೊಂಡು ಸೈನ್‌ರ‍ಸ  ಮೈದಾನದಲ್ಲಿ  ಸಮಾವೇಶಗೊಂಡ ಸಂದರ್ಭ ಅವರು ಈ ಎಚ್ಚರಿಕೆ ರವಾನಿಸಿದರು. 
ಧರ್ಮ ಗುರುಗಳ  ಸಮ್ಮುಖದಲ್ಲಿ ಆರಂಭಗೊಂಡ ಈ ಶಾಂತಿ ನಡಿಗೆ ಮೊದಲ ಹಂತವಷ್ಟೇ. ನಿರಂತರ ಶಾಂತಿಗಾಗಿ  ಈ ವೇದಿಕೆ ಸಂಕಲ್ಪ ಮಾಡುತ್ತದೆ. ಯಾವುದೇ ರೀತಿಯಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ನಡೆದರೆ ಎಲ್ಲ ಧರ್ಮಗುರುಗಳು ಒಂದಾಗಿ ಸತ್ಯಾಗ್ರಹ ಮಾಡುವಲ್ಲಿ ಹಿಂದೆ ಬೀಳುವುದಿಲ್ಲ ಎಂದು ಎಚ್ಚರಿಕೆ ಕೊಟ್ಟರು. 
ಇದು ಅಪರೂಪ ಹಾಗೂ ಅಭೂತಪೂರ್ವ ನಡಿಗೆ, ಇದರ  ಉದ್ದೇಶ ಸಮಯೋಚಿತ ಅರ್ಥಪೂರ್ಣ. ಶಾಂತಿಯ ಕರೆ  ಮೊದಲೇನಲ್ಲ, ಸ್ವಾತಂತ್ರ್ಯಪೂರ್ವದಿಂದಲೂ ನಡೆಯುತ್ತಲೇ ಬಂದಿದೆ. ಎಲ್ಲರೂ ಬಯಸುವುದು ಶಾಂತಿಯನ್ನು, ಎಲ್ಲ ಧರ್ಮದ ಸಾರವೂ ಶಾಂತಿಯೇ.. ಶಾಂತಿಗಾಗಿ ಮಾನವೀಯ ಗುಣಗಳು  ಬೇಕಾಗಿದೆ. ಆದರೆ, ನಿಮ್ಮನ್ನು ಕೈ, ಕಾಲು, ಕಣ್ಣು ಮಾಡಿಕೊಂಡು ತಿನ್ನುವವರಿಗೆ ಅವಕಾಶ ಮಾಡಿಕೊಡಬೇಡಿ, ನೀವು ತಿನ್ನಿ, ಇತರರಿಗೆ ಹಂಚಿ ತಿನ್ನಿ.  ಹಬ್ಬ, ಹರಿದಿನಗಳು ಬಂದಾಗ ಎಲ್ಲರೂ ಸಾಮರಸ್ಯದಿಂದ ಬಾಳುವಂತಾಗಬೇಕು,  ತ್ಯಾಗ, ಬಲಿದಾನಗಳಿಂದ ದೊರೆತ  ಸ್ವಾತಂತವನ್ನು  ದುರ್ಬಳಕೆ   ಮಾಡಿಕೊಂಡರೆ ಸಹಿಸುವುದಿಲ್ಲ ಎಂದು  ಈ ನಡಿಗೆ ರಾಜ್ಯ, ದೇಶಕ್ಕೆ ಮಾದರಿ ಆಗಲಿ.  ಎಲ್ಲ  ಇದು ದೇಶಾದ್ಯಂತ ನಡೆಯುವಂತಾಗಲಿ ಎಂದು ಕರೆಕೊಟ್ಟರು. 

ನಿರ್ದೇಶಕರಾದ ಡಾ.ಕ್ಲಿಫರ್ಡ್‌ ರೋಷನ್‌ ಪಿಂಟೋ ಮಾತನಾಡಿ, ಶಿವಮೊಗ್ಗ ಶಾಂತಿಯ ತವರೂರು. ಎಲ್ಲರೂ ಸಾಮರಸ್ಯ, ಸೌಹಾರ್ದದಿಂದ ಬಾಳಬೇಕು. ಇವನಾರವ ಎನ್ನುವ ಬದಲು ಇವ ನಮ್ಮವ ಎಂದು ಕಾಣಬೇಕು. ರಾಷಕವಿ ಅವರ ವಿಶ್ವ ಮಾನವ ಸಂದೇಶ ನಾವೆಲ್ಲರೂ ಸಾಕಾರಗೊಳಿಸಬೇಕು ಎಂದರು.  

ಮುಸ್ಲಿಂ ಧರ್ಮಗುರು ಮೌಲಾನ ಶಾವುಲ್‌ ಹಮೀದ್‌  ಮಾತನಾಡಿ,   ವಿವಿಧ ಧರ್ಮ ಗುರುಗಳಿಲ್ಲದ  ವಿಷ ಬೀಜ ನಮಗ್ಯಾಕೆ  ಬೇಕು. ಜಿಲ್ಲೆಯು ಶಾಂತಿ ಬೀಡು. ಅಶಾಂತಿ ಬಿತ್ತುವವರಿಗೆ ಇದು ಎಚ್ಚರಿಕೆ. ಜಿಲ್ಲೆಯಲ್ಲಿ ಕೈಗಾರಿಕೆ ಉದ್ಯಮಿಗಳು ಬರುವಂತಾಗಬೇಕು.  ಯುವಕರಿಗೆ ಉದ್ಯೋಗ ದೊರೆಯುವಂತಾಗಬೇಕು, ಇದು ಸರ್ವಜನಾಂಗದ ಶಾಂತಿಯ ತೋಟವಾಗಿದ್ದು,   ವಿವಿಧತೆಯಲ್ಲಿ ಏಕತೆ  ಹೊಂದಿದೆ. ಈ ವೇದಿಕೆ ಸ್ವಾಹಾರ್ದತೆ ಕೇಂದ್ರವಾಗಿ ಕಂಗೊಳಿಸುತ್ತಿದೆ. ಇಲ್ಲಿ ಬೇಕಾಗಿರುವುದು ಶಾಂತಿ ಮಾತ್ರ. ಎಲ್ಲರೂ ಒಂದಾಗಿ ಸೋದರರಂತೆ ಬಾಳೋಣ  ನಿರಂತರ ಶಾಂತಿಗಾಗಿ ಎಲ್ಲರೂ ಕಟಿ ಬದ್ಧರಾಗೊಣ ಎಂದರು. 
ಬೆಕ್ಕಿನ  ಕಲ್ಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ , ಬಸವಕೇಂದ್ರದ ಶ್ರೀ ಬಸವ ಮರುಳ ಸಿದ್ಧ ಸ್ವಾಮೀಜಿ,  ಜಡೆಮಠದ ಶ್ರೀ ಮಹಾಂತ ಸ್ವಾಮೀಜಿ, ಮುಸ್ಲಿಂ ಧರ್ಮಗುರುಗಳಾದ ಮುಫ್ತಿ ಅಖೀಲ್‌‍ ರಜಾ, ಮೌಲಾನ ಶಾವುಲ್‌‍ ಹಮೀದ್‌ , ರಾಜ್ಯ ರೈತ ಸಂಘದ ಅಧ್ಯಕ್ಷರಾದ ಹೆಚ್‌. ಆರ್‌.ಬಸವರಾಜಪ್ಪ,  ಸರ್ಜಿ ಫೌಂಡೇನ್‌ನ ಮ್ಯಾನೇಜಿಂಗ್‌ ಟ್ರಸ್ಟಿ ಡಾ. ಧನಂಜಯ ಸರ್ಜಿ, ಓಪನ್‌ ಮೈಂಡ್‌ರ‍ಸ  ವಲ್ಡ್‌‍ ಶಾಲೆಯ ವ್ಯವಸ್ಥಾಪಕರಾದ ಕೆ.ಕಿರಣ್‌‍ ಕುಮಾರ್‌,  ವಕೀಲರಾದ ಕೆ.ಪಿ. ಶ್ರೀಪಾಲ್‌‍, ಡಿ.ಎಸ್‌.ಎಸ್‌. ರಾಜ್ಯ ಸಂಚಾಲಕ ಗುರುಮೂರ್ತಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಗೋಪಿನಾಥ್‌ ಇತರರು ಇದ್ದರು. 

ಶಾಲೆಗಳ ಕ್ಯಾಂಪಸ್‌ನಲ್ಲಿ ಡ್ರೋಣ್‌  ಹವಾ 
ಶನಿವಾರ  ಬೆಳಗ್ಗೆ ``ನಮ್ಮ ನಡಿಗೆ ಶಾಂತಿಯ ಕಡೆಗೆ '' ಬೃಹತ್‌ ಶಾಂತಿ ಮೆರವಣಿಗೆಗೆ ಸುಮಾರು ೨೭ ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಶಾಂತಿ ರ್ಯ್ಲಿಗೆ ಬೆಂಬಲ ವ್ಯಕ್ತಪಡಿಸದ್ದಿವು. ಕನಿಷ್ಠ ೫ ಸಾವಿರ ಮಕ್ಕಳು ಭಾಗವಹಿಸು ವವರದ್ದಿರು. ಆದರೆ, ಶಾಂತಿ ಮೆರವಣಿಗೆಯ ಹಿಂದಿನ ದಿನ ರಾತ್ರಿ ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಕ ಶಿಕ್ಷಣ ಸಂಸ್ಥೆಗಳ  ಮುಖ್ಯಸ್ಥರು, ಪ್ರಾಂಶುಪಾಲರಿಗೆ, ಮುಖ್ಯ ಶಿಕ್ಷಕರಿಗೆ ಶಾಲಾ ಮಕ್ಕಳನ್ನು ಶಾಂತಿ ಮೆರವಣಿಗೆಗೆ ಕರೆದೊಯ್ಯದಂತೆ ಎಚ್ಚರಿಕೆ ನೀಡದ್ದಿರಿಂದ ಶಿಕ್ಷಣ ಸಂಸ್ಥೆಗಳನ್ನು ಜಾಥಾದಿಂಧ ಕೈ ಬಿಡಲಾಯಿತು. ಆದರೆ, ಶಾಂತಿ ರ್ಯ್ಲಿಯಲ್ಲಿ ಮಕ್ಕಳು ಪಾಲ್ಗೊಳ್ಳದದ್ದಿರೂ  ಶಿಕ್ಷಣ ಸಂಸ್ಥೆಗಳು ಡ್ರೋಣ್‌  ಮೂಲಕ ಕ್ಯಾಂಪಸ್‌ ಆವರಣದಲ್ಲೇ ೧೦ ಸಾವಿರ ಮಕ್ಕಳೊಂದಿಗೆ ಶಾಂತಿ ನಡಿಗೆ ನಡೆಸಿ ಕಾರ್ಯಕ್ರಮಕ್ಕೆ ಸಂಪೂರ್ಣ ಅಭೂತಪೂರ್ವ ಬೆಂಬಲ ನೀಡಿದರು.  ಕೆಲವು ಹಿತಾಶಕ್ತಿಗಳು ಏನೇ ಪ್ರಭಾವ ಬೀರಿದರೂ ನಡೆಯದು ಎಂಬ ಸಂದೇಶವನ್ನು  ಡ್ರೋಣ್‌ ಮೂಲಕ ಮಕ್ಕಳು ಶಾಂತಿ ಸಂದೇಶ ರವಾನಿಸಿದರು. 

ಧರ್ಮ ಗುರುಗಳ  ಸಮಾಗಮ
ಅದೊಂದು ಅಪರೂಪ ಹಾಗೂ ಅಭೂತಪೂರ್ವ ವೇದಿಕೆಯಾಗಿತ್ತು.  ಹೌದು, ಸಾಮಾನ್ಯವಾಗಿ ರ್ಯ್ಲಿ, ಸಮಾರಂಭ, ಸಮಾವೇಶಗಳೆಂದರೆ ಸಂಘಟಕರು, ಆಯೋಜಕರು ಮುಂದೆ ನಿಂತು ಫೋಸು ಕೊಡುವ ಭರಾಟೆಯಲ್ಲಿರುತ್ತಾರೆ. ಆದರೆ, ಇಂದು ಸಂಘಟಕರು ಕಾರ್ಯಕ್ರಮದ ಅಚ್ಚುಕಟ್ಟತನಕ್ಕೆ ಶ್ರಮಿಸುವ ಮೂಲಕ ವೇದಿಕೆಯಿಂದ ದೂರ ಉಳಿದರು. ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮಗುರುಗಳ ಸಮಾಗಮದಲ್ಲಿ ಸ್ವಾಗತ, ನಿರೂಪಣೆ ಹಾಗೂ ವಂದನಾರ್ಪಣೆಯ ತನಕ ಬೇರೆ ಯಾರೋಬ್ಬರೂ ಧ್ವನಿವರ್ಧಕವನ್ನು ಕೈಗೆತ್ತಿಕೊಳ್ಳಲಿಲ್ಲ. ಇದು ಸಂಘಟನೆ ಹಾಗೂ ಸಂಘಟಕರ ಶಿಸ್ತಿಗೆ ಸಾಕ್ಷಿಯಾಗಿತ್ತು. ಸಂಪೂರ್ಣವಾಗಿ ಧರ್ಮಗುರುಗಳು ಸಮಾರಂಭವನ್ನು ನಿರ್ವಹಿಸುವ ಮೂಲಕ ಸ್ಪಷ್ಟವಾಗಿ ನಾವೆಲ್ಲಾ ಒಂದೇ ಎಂಬ ಶಾಂತಿ ಸಂದೇಶವನ್ನು ರವಾನಿಸಿದರು.

ರಸ್ತೆಯದ್ದುಕ್ಕೂ ತ್ಯಾಜ್ಯ ವಿಲೇ  
ಶಾಂತಿ ನಡಿಗೆಯಲ್ಲಿ ಸಾಗುವ ಸಾವಿರಾರು ಮಂದಿಗೆ ಕುಡಿಯುವ ನೀರು ಹಾಗೂ ಬಿಸ್ಕತ್ತಿನ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ನೀರು ಕುಡಿದ ಖಾಲಿ ಬಾಟಲಿ ಹಾಗೂ ಬಿಸ್ಕತ್ತಿನ ಖಾಲಿ ಪೌಚುಗಳನ್ನು  ನೂರಾರು ಸ್ವಯಂ ಸೇವಕರು ಸಂಗ್ರಹಿಸುವ ಮೂಲಕ ತ್ಯಾಜ್ಯವನ್ನು ಸೂಕ್ತವಾಗಿ ವಿಲೆವಾರಿ ಮಾಡಿದ್ದು, ಕಾರ್ಯಕ್ರಮ ಸಂಘಟಕರ ಪರಿಸರ ಕಾಳಜಿಗೆ ಸಾಕ್ಷಿಯಾಗಿತ್ತು. 

ಜಿಲ್ಲಾಡಳಿತ, ರಕ್ಷಣಾ ಇಲಾಖೆ ಸಹಕಾರ 
ಶಾಂತಿ ನಡಿಗೆಗೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡದ್ದಿರೆ, ಜಿಲ್ಲಾ ಪೊಲೀಸ್‌ ಇಲಾಖೆ ಸೂಕ್ತ ಬಂದೋ ಬಸ್‌್ತ ಏರ್ಪಡಿಸಿತ್ತು. ಜಿಲ್ಲಾಧಿಕಾರಿ ಡಾ.ಆರ್‌.ಸೆಲ್ವಮಣಿ ಅವರು ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿ ಪ್ರಸಾದ್‌ ಸಂಪುರ್ಣ ಸಹಕಾರ ನೀಡುವ ಮೂಲಕ ಶಾಂತಿ ನಡಿಗೆಯ ಯಶಸರ‍ಸಿಗೆ ಸಹಕರಿಸಿದರು. 

ಕಳೆಗಟ್ಟಿದ ಶಾಂತಿ ಮೆರವಣಿಗೆ
ಬೆಳಗ್ಗೆ ೧೦. ೩೦ ಗೆ ಸಿಮರ‍ಸೌ ಮೆಡಿಕಲ್‌ ಕಾಲೇಜು ಮುಂಭಾಗ  ಜಿಲ್ಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮುಸ್ತಾಫ ಹುಸೇನ್‌ , ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ   ಅವರು ಚಾಲನೆ ನೀಡಿದರು.ಅಲ್ಲಿಂದ ಆರಂಭಗೊಂಡ ನಮ್ಮ ನಡಿಗೆ ಶಾಂತಿ ನಡಿಗೆ  ಮುಖ್ಯ ಬಸ್‌ ನಿಲ್ದಾಣ ಮೂಲಕ ಬಿ.ಎಚ್‌.ರಸ್ತೆ ಮಾರ್ಗವಾಗಿ,ಅಮೀರ್‌ ಅಹಮದ್‌ ವೃತ್ತ, ಶಿವಪ್ಪನಾಯಕ ಸರ್ಕಲ್‌‍ ಮೂಲಕ  ನಮ್ಮ ನಡಿಗೆ ಶಾಂತಿಯ ಕಡೆಗೆ ಘೋಷಣೆಗಳೊಂದಿಗೆ ೬ ಸಾವಿರಕ್ಕೂ ಹೆಚ್ಚು ಜನರೊಂದಿಗೆ ಸೈನ್‌ರ‍ಸ ಮೈದಾನ ತಲುಪಿತು.  
ಚಿತ್ರಗಳಿವೆ

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.