ಇನ್ನು ಮುಂದೆ"ಪೌರ ಕಾರ್ಮಿಕರು"ಸರ್ಕಾರಿ ನೌಕರರು.!ರಾಜ್ಯ ಸಚಿವ ಸಂಪುಟದ ಅನುಮೋದನೆ


ಪೌರಕಾರ್ಮಿಕರ ಹಲವು ವರ್ಷಗಳ ಹೋರಾಟಕ್ಕೆ ಸಿಕ್ಕ ಜಯ
 
ಬೆಂಗಳೂರು:   ರಾಜ್ಯದ ನಗರಸಭೆ ಪುರಸಭೆ ಮತ್ತು ಇತರ ಪಟ್ಟಣ ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ 11,133 ಪೌರಕಾರ್ಮಿಕರಿಗೆ ವಿಶೇಷ ನೇಮಕಾತಿ ನಿಯಮಗಳ ಅಡಿಯಲ್ಲಿ ಸರ್ಕಾರಿ ನೌಕರರೆಂದು ನೇಮಕಾತಿ ಮಾಡಿಕೊಳ್ಳುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಇಂದು ತನ್ನ ಅನುಮೋದನೆ ನೀಡಿದೆ. 

ಈ ನೌಕರರು ಈಗ17000-28980 ವೇತನ ಶ್ರೇಣಿ ಅಡಿಯಲ್ಲಿ ಸೇವೆ ಸಲ್ಲಿಸುವಂತೆ ಅವಕಾಶ ಕಲ್ಪಿಸಲಾಗಿದೆ. 11,133 ಪೌರ ಕಾರ್ಮಿಕ ಖಾಯಮಾತಿಯಾಗಿದ್ದು ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಯಾಗಿದೆ. ಅನೇಕ ದಿನಗಳಿಂದ ಹೋರಾಟ ಮಾಡುತ್ತಿದ್ದ ಪೌರಕಾರ್ಮಿಕರ ಹೋರಾಟಕ್ಕೆ ನ್ಯಾಯ ಒದಗಿಸಿದಂತಾಗಿದೆ. ಸಾಮಾಜಿಕ ನ್ಯಾಯದ ದಿಗ್ವಿಜಯ ಯಾತ್ರೆಯನ್ನು ಕರ್ನಾಟಕದ ಬಿಜೆಪಿ ಸರ್ಕಾರ ಮುಂದುವರಿಸಿದೆ. 

ಈ ಪ್ರಸ್ತಾವಕ್ಕೆ ಅನುಮೋದನೆ ನೀಡಿದ 
ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದ ಸದಸ್ಯರೆಲ್ಲರಿಗೂ ಕೃತಜ್ಞತೆಗಳು ಮತ್ತು ಅಭಿನಂದನೆಗಳನ್ನು ಪೌರ ಕಾರ್ಮಿಕರ ಅಧ್ಯಕ್ಷ ಪೆಂಚಲಯ್ಯ ತಿಳಿಸಿದ್ದಾರೆ.

20 ವರ್ಷ ಪೂರೈಸಿದ ಎಲ್ಲಾ ಪೌರ ಕಾರ್ಮಿಕರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ: ಪೆಂಚಲಯ್ಯ ಮನವಿ

ಸರ್ಕಾರ ನೇರಪೌರ ಕಾರ್ಮಿಕರಿಗೆ ಕೇವಲ  10% ಜನರಿಗೆ ಖಾಯಂಯಾತಿ ಮಾಡಿದ್ದಾರೆ. ಸ್ವಲ್ಪ ಮೂಗಿಗೆ ಬೆಣ್ಣೆ ಹಚ್ಚಿದ್ದಾರೆ.ನೌಕರರಿಗೆ ಅನ್ಯಾಯವಾಗಿದೆ. ಪೂರ್ಣವಾದ ನ್ಯಾಯ ಕೊಟ್ಟಿಲ್ಲ ಸರಕಾರ. ನಮ್ಮ ಬೇಡಿಕೆ ಏನಿತ್ತು ಅಂದರೇ ಒಟ್ಟು ರಾಜ್ಯದಲ್ಲಿ 43 ಸಾವಿರ ಜನ ಪೌರ ಕಾರ್ಮಿಕರು ಇದ್ದಾರೆ. ಡ್ರೈವರ್, ಲೋಡರ್ಸ್,ಹೆಲ್ಪರ್ಸ್,ಯುಜಿಡಿ ನೌಕರರಿಗೆ ನ್ಯಾಯ ಸಿಕ್ಕಿಲ್ಲ. ನಮ್ಮ ಹೋರಾಟಕ್ಕೆ ಪೂರ್ಣವಾದ ಜಯಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.
 20 ವರ್ಷ ಪೂರೈಸಿದ ಎಲ್ಲಾ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿರುವ 43 ಸಾವಿರ ಪೌರ ಕಾರ್ಮಿಕರಿಗೆ ಸರ್ಕಾರಿ ನೌಕರರು ಎಂದು ಸರಕಾರ ಪರಿಗಣಿಸಬೇಕು ಎಂದು  ಶಿವಮೊಗ್ಗ ಪೌರಕಾರ್ಮಿಕರ ಸಂಘದ ಅದ್ಯಕ್ಷ ಪೆಂಚಲಯ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.