ಶಿವಮೊಗ್ಗದಲ್ಲಿ ಈ ಬಾರಿ ವಿಜೃಂಭಣೆಯಿಂದ ಸೆ.26 ರಿಂದ ಅ.5 ರವರೆಗೆ ನಾಡಹಬ್ಬ ಶಿವಮೊಗ್ಗ ದಸರಾ ಹಬ್ಬ ಆಚರಣೆಗೆ ಸಿದ್ದತೆ:ಮೇಯರ್ ಶ್ರೀಮತಿ ಸುನಿತಾಅಣ್ಣಪ್ಪ

ಶಿವಮೊಗ್ಗದಲ್ಲಿ ವಿಭಿನ್ನವಾಗಿ  ಈ ಬಾರಿ  ವಿಜೃಂಭಣೆಯಿಂದ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5 ರವರೆಗೆ ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ ಹಬ್ಬ ಆಚರಣೆ ಮಾಡಲು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಶ್ರೀಮತಿ ಸುನಿತಾಅಣ್ಣಪ್ಪ ಹೇಳಿದರು.

ಇಂದು ಪಾಲಿಕೆಯ ಸಭಾಂಗಣದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡುತ್ತಾ 

 ದಸರಾ ಸಂಬಂಧಿಸಿದಂತೆ  14 ವಿವಿಧ ರೀತಿಯಲ್ಲಿ ದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ.ಶಿವಮೊಗ್ಗ ದಸರಾದ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದರು.

 ಮಹಿಳಾ ದಸರಾ, ರಂಗದಸರಾ, ಚಲನಚಿತ್ರತ್ಸೋವ,ಮಕ್ಕಳ ದಸರಾ,ಸ್ಟೆಟ್ ಲೆವೆಲ್ ಕಾಂಪಿಟೇಶನ್, ಸಾಂಸ್ಕೃತಿಕ ದಸರಾ, ರೈತ ದಸರಾ,ಪರಿಸರದ ದಸರಾ ನದಿಹಬ್ಬ, ಆಹಾರ ದಸರಾ,ನಗರದ ವಿವಿಧ ಸ್ಥಳಗಳಲ್ಲಿ ರಂಗಗೀತೆ ಗಾಯನ,ಸರ್ಕಾರಿ ಮಕ್ಕಳಿಂದ ನಾಟಕ ಪ್ರದರ್ಶನ, ಯುವದಸರಾ ಸ್ಲೋ ಬೈಕ್ ರೈಸ್ ಪಂದ್ಯಾವಳಿ,ಕುಸ್ತಿ ಪಂದ್ಯಾವಳಿ,ಕಬ್ಬಡ್ಡಿ ಪಂದ್ಯಾವಳಿ,ಕ್ರಾಸ್ ಕಂಟ್ರಿ ಓಟದ ಸ್ಪರ್ಧೆ, ರಾಜ್ಯಮಟ್ಟದ ನೃತ್ಯ ಸ್ಪರ್ಧೆ, ಮ್ಯೂಸಿಕಲ್ ನೈಟ್, ಚತ್ಮ ವಾದ್ಯಗಳ ರಾಜ್ಯಮಟ್ಟದ ಸ್ಪರ್ಧೆ, ಸಾಹಿತ್ಯ ದಸರಾ, ಯಕ್ಷದಸರಾ,ಸಂಗೀತ ಸಂಭ್ರಮ,ಶಾಲಾ ಮಕ್ಕಳಿಗೆ ಕ್ವಜ್ ಮತ್ತು ಪ್ರಬಂಧ ಸ್ಪರ್ಧೆ,ಯೋಗಾದಸರಾ, ಮ್ಯಾರಥಾನ್, ಕೆಸರು ಗದ್ದೆ ಓಟ, ಹಗ್ಗ ಜಗ್ಗಾಟದ ಸ್ಪರ್ಧೆ, ಉಚಿತ ಆರೋಗ್ಯ ತಪಾಸಣೆ, ನಡೆಯಲಿದೆ ಎಂದರು.

30 ಸ್ಟಾಲ್ ಗಳಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸಾಂಪ್ರದಾಯಿಕ ವಿವಿಧ ರೀತಿಯ ಅಡುಗೆಗಳ ತಯಾರಿಕೆ ತಿನಿಸುಗಳ ಅಂಗಳ ಫ್ರೀಡಂ ಪಾರ್ಕ್  ವಿನೋಬನಗರದಲ್ಲಿ ಆಯೋಜಿಸಲಾಗಿದೆ ಎಂದರು.

ಇದೀಗ ಸರ್ಕಾರ ದಸರಾ ಹಬ್ಬದ ಆಚರಣೆ ಸಲುವಾಗಿ 1 ಕೋಟಿ ನೀಡಲಿದೆ‌. ಪಾಲಿಕೆ 50 ಲಕ್ಷ ಭರಿಸಲಿದೆ. ನಾವು ಸರ್ಕಾರಕ್ಕೆ 2 ಕೋಟಿ ಕೊಡುವಂತೆ ಕೋರಿದ್ದೆವೆ ಎಂದರು. 

 ಬೆಳ್ಳಿ ಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಬೆಳ್ಳಿ ವಿಗ್ರಹದ ವೈಭವದ ಅಂಬಾರಿ ಮೆರವಣಿಗೆಯಲ್ಲಿ ಆನೆ ಅಂಬಾರಿ ಮೆರವಣಿಗೆ ಉತ್ಸವ ಇದೆ. ಮೂರು ಆನೆಗಳು ಬರಲಿವೆ ಎಂದರು.  ಅಮ್ಮನವರಿಗೆ ಬಂಗಾರದ ಕಿರೀಟವನ್ನು ಈ ಬಾರಿ ಮಾಡಿಸಲಿದ್ದೆವೆ. ಸುಮಾರು 3 ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗಲಿದೆ.ಹಣವನ್ನು ಪಾಲಿಕೆ ಭರಿಸಲಿದೆ ಎಂದರು.

ದಸರಾ ಹಬ್ಬಕ್ಕೆ  ಸೂಡಾದಿಂದ ಸಹ 25 ಲಕ್ಷ ನೀಡುವ ಸಾಧ್ಯತೆ ಇದೆ ಸ್ಮಾರ್ಟ್ ಸಿಟಿ ಅವರು ಸಹ  ಸಹಕಾರ ನೀಡಲಿದ್ದಾರೆ ಎಂದರು.

ಮೇಲ್ಕಂಡ ಎಲ್ಲಾ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ವೀಕ್ಷಿಸಿ ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾವನ್ನು ಯಶಸ್ವಿಗೋಳಿಸಕೊಡಬೇಕೆಂದು ವಿನಂತಿಸಿದರು.   

ಪತ್ರಿಕಾಗೋಷ್ಠಿಯಲ್ಲಿ ಮಹಾನಗರಪಾಲಿಕೆ ಉಪಮೇಯರ್ ಶಂಕರ್ ಗನ್ನಿ, ಸದಸ್ಯರಾದ ಹೆಸ್.ಎನ್.ಚನ್ನಬಸಪ್ಪ, ಸುವರ್ಣ ಶಂಕರ್, ರೇಖಾ ರಂಗನಾಥ್, ಹೆಚ್.ಸಿ.ಯೋಗೀಶ್, ಲಕ್ಷ್ಮಿಶಂಕರ್ ನಾಯಕ್, ಮಂಜುಳಾ ಶಿವಣ್ಣ, ಆಶಾಚಂದ್ರಪ್ಪ, ಅನಿತಾ ರವಿಶಂಕರ್, ಆರತಿ ಅ.ಮ.ಪ್ರಕಾಶ್, ಸುರೇಖಾ ಮುರುಳೀಧರ್, ಆಯುಕ್ತ ಕೆ.ಮಾಯಣ್ಣಗೌಡ ಇನ್ನಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.