ಕಿರಾಣಿ ಅಂಗಡಿಗೆ ಆಕಸ್ಮಿಕ ಬೆಂಕಿ- ಅಧಿಕ ಹಾನಿ

ಶಿವಮೊಗ್ಗ: ನಗರದ ನಾಗೇಂದ್ರ ಕಾಲೋನಿಯಲ್ಲಿರುವ ಸದಾನಂದ ಎಂಬುವರಿಗೆ ಸೇರಿದ ಕಿರಾಣಿ ಅಂಗಡಿಯಲ್ಲಿ ಇಂದು ನಸುಕಿನ ಜಾವ 5 ಗಂಟೆ ಸುಮಾರಿಗೆ ಆಕಸ್ಮಿಕ ಬೆಂಕಿ ತಗುಲಿದೆ.
ಅಂಗಡಿಯಲ್ಲಿನ ಫ್ರಿಜ್ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ದಿನಸಿ ಪದಾರ್ಥಗಳು ಸುಟ್ಟು ಕರಕಲಾಗಿದ್ದು, ಸಂಪೂರ್ಣ ಹಾನಿಯಾಗಿದೆ. ಪಕ್ಕದಲ್ಲೇ ವಿಘ್ನೇಶ್ವರ ಕ್ಯಾಂಟೀನ್ ಹಾಗೂ ಸುತ್ತಲೂ ಅನೇಕ ಮನೆಗಳಿದ್ದು ನೆರೆಯವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದರಿಂದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದು, ಹೆಚ್ಚಿನ ಅನಾಹುತವಾಗುವುದನ್ನು ತಪ್ಪಿಸಿದ್ದಾರೆ. ಅಂದಾಜು 4 ಲಕ್ಷ ರೂ.ಗೂ ಅಧಿಕ ಹಾನಿ ಉಂಟಾಗಿದೆ ಎಂದು ಮಾಲೀಕ ಸದಾನಂದ ಹೇಳಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.