ನಿವೃತ್ತ ಪಿಎಸ್ಐ ಯತಿರಾಜ್ ನಿಧನ-ಸಂತಾಪ

ಶಿವಮೊಗ್ಗ ಜಿಲ್ಲಾ ನಿವ್ರತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾಗಿಧ್ದ ಶ್ರೀ ಯತಿರಾಜ್,
P S I (Rtd) ರವರು ಅನಾರೋಗ್ಯದ ಕಾರಣ ಬುಧವಾರ
ರಾತ್ರಿ 7-45  ಘಂಟೆ ಸಮಯಕ್ಕೆ ಗುರುಪುರದಲ್ಲಿಯ
ಸ್ವಂತ ಮನೆಯಲ್ಲಿ ಮೃತಪಟ್ಟಿದ್ದಾರೆ. 

ಇವರು 2016 ರಲ್ಲಿ ನಿವ್ರತ್ತಿ
ಹೊಂದಿದ್ದು,1993 ರಲ್ಲಿ ಮುಖ್ಯಮಂತ್ರಿಗಳ ಬಂಗಾರ ಪದಕಕ್ಕೆ ಭಾಜನರಾಗಿದ್ದರು.
 
ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಗಳು ಮೃತರ ಸುದ್ದಿ ತಿಳಿದು ತೀವ್ರ ಸಂತಾಪ ವ್ಯಕ್ತಪಡಿಸಿದರು.  ಮೃತರ ಆತ್ಮಕ್ಕೆ ಚಿರ ಶಾಂತಿ ಸಿಗಲೆಂದು  ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲೆಂದು  ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

 ಪೊಲೀಸ್ ಇಲಾಖೆಯಿಂದ ಅಂತ್ಯಕ್ರಿಯೆ ಗೆ  ಸಿಗಬಹುದಾದ 10 ಸಾವಿರ ಹಣವನ್ನು ಕೂಡಲೇ ಕೊಡಿಸಿಕೊಡುವುದಾಗಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಮ್ರತರು ಪತ್ನಿ
ದೇವಕಿ,ಮಗ ವೆಂಕಟೇಶ, ಮಗಳು ಸುಮಿತ್ರಾ ಮತ್ತು ಅಪಾರ ಬಂಧುಗಳನ್ನ ಅಗಲಿದ್ದಾರೆ.
 ಮೃತರ ಅಂತ್ಯಕ್ರಿಯೆ ಇಂದು ಗುರುವಾರ ಮಧ್ಯಾಹ್ನ ನಡೆಸಲಾಗುವುದು ಎಂದು ತಿಳಿದು ಬಂದಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.