ಮೊದಲ ಆದ್ಯತೆ ಲಾ ಆಂಡ್ ಆರ್ಡರ್-.ನೆಶೆಮುಕ್ತ ಶಿವಮೊಗ್ಗ ಮಾಡುತ್ತೆವೆ:ನೂತನ ಎಸ್ಪಿ ಬಿ.ನಿಖಿಲ್

ಶಿವಮೊಗ್ಗ:2017 ನೇ IPS  ಬ್ಯಾಚ್ ನನ್ನದು,ಮಾಧ್ಯಮ ಮಿತ್ರರು ಒಂದು ಸೇತುವೆ ಇದ್ದ ಹಾಗೆ, ನಮ್ಮ ನಿಮ್ಮ ಮದ್ಯೆ ಓಪನ್ ಕಮ್ಯೂನಿಕೇಶನ್ಸ್ ಮುಖ್ಯ.. ನನ್ನ ಮೊದಲ ಆದ್ಯತೆ ಲಾ ಅಂಡ್ ಆರ್ಡರ್.ನೆಶೆಮುಕ್ತ ಶಿವಮೊಗ್ಗ ಮಾಡುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನ ಮುಂದುವರಿಯುತ್ತದೆ. ಡ್ರಗ್ಸ್ ವಿರುದ್ದ ವಾರ್ ಮಾಡ್ತಿವಿ ಎಂದು ನೂತನ ಎಸ್ಪಿ ಬಿ.ನಿಖಿಲ್ ಇವರು ಹೇಳಿದರು

ಇಂದು ಬೆಳಿಗ್ಗೆ ಶಿವಮೊಗ್ಗ ನಗರದ ಡಿಎಆರ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು  ಪೊಲೀಸ್ಇ ಇಲಾಖೆಯ ಕೆಲಸವನ್ನ ಜನರಿಗೆ ಮುಟ್ಟಿಸಬೇಕು. ಅಭಿವೃದ್ಧಿಗೆ ಮಾಧ್ಯಮಗಳ ಸಹಕಾರ ಕೋರಿದರು. 

ಶಿವಮೊಗ್ಗ ಜಿಲ್ಲೆಯ ಪ್ರತಿಯೊಂದು ತಾಲ್ಲೂಕು ವೈವಿದ್ಯತೆ ಹೊಂದಿದೆ.ಪ್ರತಿಯೊಂದು ಠಾಣೆಗೆ ನಾನು ನಾಳೆಯಿಂದ ಬೇಟಿ ನೀಡುತ್ತೆನೆ ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವ ಬಗ್ಗೆ ನಾವೆಲ್ಲ ಸೇರಿ ಕೆಲಸ ಮಾಡುತ್ತೆವೆ. ಸಾರ್ವಜನಿಕರಿಗೆ ಪೊಲೀಸರು ಸಿಗುವ ಹಾಗೆ ಆಗಬೇಕು.ಆರಕ್ಷಕ ದಿನ 15 ದಿವಸಕ್ಕೆ ಒಂದು ದಿವಸ ಮಾಡುತ್ತೆವೆ.ಕೋಮು ಸೌಹರ್ದತೆ ಬಗ್ಗೆ ಗಮನ ಹರಿಸುತ್ತೆವೆ.

 ಕಾನೂನಿಗೆ ಯಾರು ಗೌರವ ಕೊಡುತ್ತಾರೆ ಅವರಿಗೆ ನಾವು ಗೌರವ ಕೊಡುತ್ತೆವೆ.ಪೊಲೀಸ್ ಇಲಾಖೆಯ ಕೆಲಸದ ಬಗ್ಗೆ
ಪ್ರತಿದಿನ ಒಂದು ಸ್ಟೇಟಸ್ ವ್ಯಾಟ್ಸಪ್ ನಲ್ಲಿ ಇರುತ್ತದೆ.

  ಸಂತ್ರಸ್ತರಿಗೆ ಗೌರವಪೂರಕವಾಗಿ ಮಾತನಾಡಿಸಿ ನ್ಯಾಯಕೊಡಿಸುವ ಬಗ್ಗೆ ಕೆಲಸ ಮಾಡಿಕೊಡುತ್ತೇವೆ. ಮೊದಲ ಬಾರಿಗೆ ಮದ್ಯ ಕರ್ನಾಟಕದಲ್ಲಿ ಕೆಲಸ ಮಾಡುತ್ಯಿರುವೆ ಕ್ರೈಂ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿರುವೆ. ತಾಲೂಕು ಅಸ್ಮಿತೆ ಹೊಂದಿದೆ. ನನಗೆ ಅರ್ಥೈಸಿಕೊಳ್ಳಲು ಸಮಯ ಆಗಬಹುದು. ನಾಳೆಯಿಂದ ಪ್ರತಿ ಠಾಣೆಗೆ ಭೇಟಿ ಕೊಡುವೆ. ಬರ್ನಿಂಗ್ ಇಸ್ಸೂಸ್ ಬಗ್ಗೆ ತಿಳಿದುಕೊಳ್ಳುವೆ ಎಂದರು. 

 ದೂರುಗಳು ಮತ್ತು ದಾಳಿಗಳ ಜೊತೆ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು. ಪೋಷಕರು ಮಕ್ಕಳ ಬಗ್ಗೆ ಕ್ಲೋಸ್ ವಾಚ್ ಮಾಡುವ ಬಗ್ಗೆ ಔಟರೀಚ್ ಕಾರ್ಯಕ್ರಮ‌ನಡೆಸಲಾಗುವುದು. 

 ಹೈಸ್ಕೂಲ್ ಇದ್ದವರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ ಆರಕ್ಷಕ ದಿನ ಶುರು ಮಾಡಿ ನಿಮಗೆ ತಿಳಿಸಲಾಗುವುದು. ರಸ್ತೆ ಅಪಘಾತದ ಬಗ್ಗೆ ಕಾಳಜಿ ವಹಿಸಲಾಗುವುದು. ಪಿಡಬ್ಲೂಡಿ, ಎನ್ ಹೆಚ್ ಮತ್ತು ಪೊಲೀಸ್ ಇಲಾಖೆಯು ಪ್ರಾಣ ಉಳಿಸುವ ಕೆಲಸ ಮಾಡಲಾಗುವುದು ಕೋಲಾರದಲ್ಲಿ ಹೆಲ್ಮೆಟ್ ಹಾಕುವುದನ್ನ ಕಲಿಸಲಾಗಿದೆ. ಇಲ್ಲೂ ಹಾಕ್ತಾರೆ ಇಲ್ಲಿ 100% ಹೆಲ್ಮೆಟ್ ಇಲ್ಲ. ಪೊಲೀಸರಿಗಾಗಿ ಹಾಕಬೇಡಿ ನಿಮ್ಮ ರಕ್ಷಣೆಗಾಗಿ ಹಾಕಿ ಎಂದರು. 

ಪೊಲೀಸ್ ಎಂದರೆ ಭಯವಲ್ಲ ಪೊಲೀಸ್ ಎಂದರೆ ಭರವಸೆಯಾಗಬೇಕಿದೆ. ಅದಕ್ಕೆ ಸಾರ್ವಜಿನಕರು ಮತ್ತು ಮಾಧ್ಯಮದವರ ಸಹಕಾರ ಬೇಕಿದೆ. ಶಿವಮೊಗ್ಗ ಸೂಕ್ಷ್ಮ ಪ್ರದೇಶ ಎಂಬುದು ಗೊತ್ತಿದೆ ಆ ಎಲೆಮೆಂಟ್ಸ್ ಗೆ ಕಡಿವಾಣ ಮತ್ತು ನಿಗವಹಿಸಲಾಗುವುದು. ಚಿತ್ರದುರ್ಗದವನಾಗಿರುವ ನಾನು ಇಂಜಿನಿಯರ್ ಓದಿದ್ದೆನೆ ಎಂದರು.

ಹಿಂದಿನ ಹುದ್ದೆಗಳು

ಕೋಲಾರ ಜಿಲ್ಲಾ ಎಸ್‌ಪಿಯಾಗಿ ಕಾರ್ಯನಿರ್ವಹಿಸಿದ್ದರು, ಅಲ್ಲಿ 533 ಪ್ರಕರಣಗಳಿಂದ ಸುಮಾರು 2.57 ಕೋಟಿ ಮೌಲ್ಯದ ಸ್ವತ್ತುಗಳನ್ನು ಮಾಲೀಕರಿಗೆ ವಾಪಸ್ ನೀಡಿದ್ದಾರೆ. 
ರಾಯಚೂರು ಎಸ್‌ಪಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. 

ಇತ್ತೀಚಿನ ಬದಲಾವಣೆ

ಡಿಸೆಂಬರ್ 31, 2025ರಂದು ಜಿ.ಕೆ. ಮಿಥುನ್‌ಕುಮಾರ್ ಅವರನ್ನು ಬೆಂಗಳೂರು ಡಿಸಿಪಿಯಾಗಿ ವರ್ಗಾವಣೆ ಮಾಡಿ, ಬಿ. ನಿಖಿಲ್ ಅವರನ್ನು ಶಿವಮೊಗ್ಗ ಎಸ್‌ಪಿಯಾಗಿ ನೇಮಿಸಲಾಯಿತು. ಜನವರಿ 1, 2026ರ ಸಂಜೆ ನೂತನ ಎಸ್ಪಿ ಬಿ.ನಿಖಿಲ್ ಇವರು ಅಧಿಕಾರ ಸ್ವೀಕರಿಸಿದರು. 



ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.