ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಭರತ್ ಕುಮಾರ್ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಬಡ್ತಿ:ಶಿವಮೊಗ್ಗ ಮಹಿಳಾ ಠಾಣಾಧಿಕಾರಿಯಾಗಿ ನೇಮಕ

ಶಿವಮೊಗ್ಗ :--ಶಿವಮೊಗ್ಗ ಟ್ರಾಫಿಕ್ ಸಬ್ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದ ಭರತ್ ಕುಮಾರ್ ರವರಿಗೆ ಸರ್ಕಾರ ಪೊಲೀಸ್ ಇನ್ಸ್ ಪೆಕ್ಟರ್ (ಸರ್ಕಲ್ ಇನ್ಸ್ ಪೆಕ್ಟರ್ )ಆಗಿ ಬಡ್ತಿ ನೀಡಿರುತ್ತದೆ .ಹಾಗೂ ಇವರನ್ನು ಶಿವಮೊಗ್ಗ ಮಹಿಳಾ  ಪೊಲೀಸ್ ಠಾಣೆಯ ಠಾಣಾಧಿಕಾರಿ (ಪೊಲೀಸ್ ಇನ್ಸ್ ಪೆಕ್ಟರ್ )ಆಗಿ ನೇಮಕ ಮಾಡಿ ವರ್ಗಾವಣೆ ಆದೇಶ ನೀಡಿರುತ್ತದೆ .
ಭರತ್ ಕುಮಾರ್ ರವರು ತೀರ್ಥಹಳ್ಳಿ ,ಸಾಗರ ಗ್ರಾಮಾಂತರ ,ಮತ್ತು ಶಿವಮೊಗ್ಗ ಟ್ರಾಫಿಕ್ ನಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು .ಚಿಕ್ಕಮಗಳೂರು ಜಿಲ್ಲೆಯ ದಾರದಹಳ್ಳಿಯ ಮೂಲದವರಾದ ಇವರು ಸೇವೆಯಲ್ಲಿ ಉತ್ತಮ ಹೆಸರು ಪಡೆದಿದ್ದಾರೆ. ತೀರ್ಥಹಳ್ಳಿಯಲ್ಲಿ 3ವರ್ಷಗಳ ಉತ್ತಮವಾಗಿ ಜವಾಬ್ದಾರಿಯುತವಾಗಿ ಸೇವೆ ಸಲ್ಲಿಸಿದವರಾಗಿದ್ದಾರೆ .

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.