*ಗಣೇಶಮೂರ್ತಿಗಳನ್ನು ಸಂಚಾರಿ ಟ್ಯಾಂಕ್‍ಗಳಲ್ಲಿ ವಿಸರ್ಜನೆ ಮಾಡಲು ಸೂಚನೆ*

ಶಿವಮೊಗ್ಗ ಆಗಸ್ಟ್ 25 : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ದಿ: 31/08/2022 ರಂದು ಗಣೇಶಮೂರ್ತಿಗಳ ವಿಸರ್ಜನೆಗಾಗಿ ವಿವಿಧ ಸ್ಥಳಗಳಲ್ಲಿ ಸಂಚಾರಿ ವಾಹನದ ವ್ಯವಸ್ಥೆಯನ್ನು ಏರ್ಪಡಿಸಿದೆ.
ಹೊಸಮನೆ, 5ನೇ ತಿರುವು, ಗಣಪತಿ ದೇವಸ್ಥಾನದ ಹತ್ತಿರ -ಸಂಜೆ 6.00 ರಿಂದ 6.30ರವರೆಗೆ, ಗೋಪಾಳ ಬಸ್‍ಸ್ಟ್ಯಾಂಡ್ -ರಾ. 6.45 ರಿಂದ 7.15ರವರೆಗೆ, ಗೋಪಾಲಗೌಡ ಬಡಾವಣೆ, ಇನ್‍ಕಂಟ್ಯಾಕ್ಸ್ ಕಚೇರಿ ಹತ್ತಿರ -ರಾ. 7.30 ರಿಂದ 8.00ರವರೆಗೆ, ಕರಿಯಣ್ಣ ಬಿಲ್ಡಿಂಗ್ ಹತ್ತಿರ, ವಿನೋಬನಗರ- ರಾ. 8.15 ರಿಂದ 8.45ರವರೆಗೆ, ಕಾಶೀಪುರ ಬಸ್‍ಸ್ಟ್ಯಾಂಡ್ – ರಾ. 9.00 ರಿಂದ 9.15 ರವರೆಗೆ ಹಾಗೂ ಚೌಡೇಶ್ವರಿ ದೇವಸ್ಥಾನದ ಹತ್ತಿರ, ಲಾಲ್ ಬಹದ್ದೂರ್ ಶಾಸ್ತ್ರಿನಗರ- ರಾ. 9.30 ರಿಂದ 10.00 ರವರೆಗೆ  ಸಂಚಾರಿ ವಾಹನದ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಈ ವ್ಯವಸ್ಥೆಯ ಉಪಯೋಗ ಪಡೆದುಕೊಳ್ಳುವಂತೆ ಪರಿಸರ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಶಿವಕುಮಾರ್ ಬಿ. ಮೊ.ಸಂ.: 6363023685 ನ್ನು ಸಂಪರ್ಕಿಸುವುದು. 
=============

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.