ಸೊರಬ:ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸೊರಬ ತಾಲೂಕು ಘಟಕ ಅಸ್ತಿತ್ವಕ್ಕೆ-ಪಧಾದಿಕಾರಿಗಳ ನೇಮಕ

ಸೊರಬ:ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸೊರಬ ತಾಲೂಕು ಘಟಕವು ಅಸ್ತಿತ್ವಕ್ಕೆ ಬಂದಿದೆ.
ಸೊರಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪ್ರಜಾವಾಣಿ ವರದಿಗಾರ ರಾಘವೇಂದ್ರ ಟಿ., ಉಪಾಧ್ಯಕ್ಷರಾಗಿ ಹೊಸ ದಿಗಂತ ಪತ್ರಿಕೆ ವರದಿಗಾರ ಮಹೇಶ್ ಗೋಖಲೆ, ಪ್ರಧಾನ ಕಾರ್ಯದರ್ಶಿಯಾಗಿ ಮಲೆನಾಡು ಮಿತ್ರ ಪತ್ರಿಕೆ ವರದಿಗಾರ ದಿನಕರ್ ಬಾವೆ, ಕಾರ್ಯದರ್ಶಿಯಾಗಿ ಕ್ರಾಂತಿದೀಪ ವರದಿಗಾರ ನೂಪಿ ಶಂಕರ್, ಖಜಾಂಚಿಯಾಗಿ ಕನ್ನಡಪ್ರಭ ವರದಿಗಾರ ಹೆಚ್.ಕೆ.ಬಿ. ಸ್ವಾಮಿ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿರಿಯ ಪತ್ರಕರ್ತ ಶ್ರೀಪಾದ ಬಿಚ್ಚುಗತ್ತಿ ಅವರು ಗೌರವಾಧ್ಯಕ್ಷರಾಗಿದ್ದಾರೆ.
ಜಿಲ್ಲಾ ಉಪಾಧ್ಯಕ್ಷರಾಗಿ ಸುರಭಿ ವಾಣಿ ಪತ್ರಿಕೆ ಸಂಪಾದಕ ರಾಮಚಂದ್ರಪ್ಪ ಹಾಗೂ ಜಿಲ್ಲಾ ಪ್ರತಿನಿಧಿಯಾಗಿ ವಿಜಯ ಕರ್ನಾಟಕ ವರದಿಗಾರ ಯು.ಎಂ. ನಟರಾಜ್ ಅವರು ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ನೀಲೇಶ್ ಸಮನಿ, ರವಿ ಕಲ್ಲಂಬಿ, ಎಂ‌.ಕೆ. ಮೋಹನ್, ಪುರುಷೋತ್ತಮ್ ಚಂದ್ರಗುತ್ತಿ, ರಾಜೇಂದ್ರ ಜೈನ್, ಜಗನ್ನಾಥಪ್ಪ, ವಾಣಿಶ್ರೀ, ವಾಸುದೇವ ಆನವಟ್ಟಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಗೋಪಾಲ್ ಯಡಗೆರೆ ಅವರು ನೂತನ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿ, ಈ ಸಂಘ ಯಾರ ವಿರುದ್ಧವೂ ಅಲ್ಲ. ಸೃಜನಾತ್ಮಕ ಕೆಲಸಗಳನ್ನು ಮಾಡೋಣ. ಈ ಮೂಲಕ ಎಲ್ಲರ ಮೆಚ್ಚುಗೆ ಪಡೆಯೋಣ ಎಂದರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಅವರು ಮಾತನಾಡಿ, ಪತ್ರಕರ್ತರ ಬದುಕಿನ ಭದ್ರತೆಗೆ ಬೇಕಾದ ಕೆಲಸಗಳನ್ನು ಒಟ್ಟಿಗೆ ಮಾಡೋಣ ಎಂದರು.
ನೂತನ ಅಧ್ಯಕ್ಷ ರಾಘವೇಂದ್ರ ಟಿ. ಪ್ರಧಾನ ಕಾರ್ಯದರ್ಶಿ ದಿನಕರ ಬಾವೆ ಅವರು ಮಾತನಾಡಿ ಸಂಘಟನೆಯನ್ನು ಬಲಿಷ್ಠವಾಗಿ ಹಾಗೂ ಸಮಾಜಮುಖಿಯಾಗಿ ಬೆಳೆಸುವ ಉತ್ಸಾಹ ವ್ಯಕ್ತಪಡಿಸಿದರು*
ಈ ಸಂದರ್ಭದಲ್ಲಿ ಪತ್ರಕರ್ತರಾದ ಜೇಸುದಾಸ್, ಹೊನ್ನಾಳಿ ಚಂದ್ರಶೇಖರ್, ಕಿರಣ್ ಕಂಕಾರಿ ಸೇರಿದಂತೆ ಹಲವರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.