ಮುಖಕ್ಕೆ ಬಟ್ಟೆಕಟ್ಟಿ ನನ್ನ ಗಂಡನ ಕಾಲಿಗೆ ಪೋಲಿಸರಿಂದ ಗುಂಡೇಟು; ನ್ಯಾಯಾಂಗದ ತನಿಖೆಗೆ ಶಬಾನಾ ಆಗ್ರಹ

ಶಿವಮೊಗ್ಗ: ನನ್ನ ಗಂಡ ಅಮಾಯಕ ಅವರ  ವಿರುದ್ಧ ರಾಜಕೀಯ ಒತ್ತಡ ಮತ್ತು ಷಡ್ಯಂತ್ರದಿಂದ ಪೊಲೀಸ್ ಇಲಾಖೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಕಾಲಿಗೆ ಗುಂಡು ಹಾರಿಸಿ ಜೀವ ಬೆದರಿಕೆ ಹಾಕಿದ್ದಾರೆ. ನನ್ನ ಗಂಡನಿಗೆ ಸೂಕ್ತ ರಕ್ಷಣೆ ನೀಡಿ ಈ ಘಟನೆಯನ್ನು ನ್ಯಾಯಾಂಗ ತನಿಖೆ ನಡೆಸಬೇಕು ಎಂದು‌ ಮಾರ್ನಮಿ‌ಬೈಲ್ ವಾಸಿ ಶಬಾನಾ ಕೋಂ ಜಬಿ ಹೇಳಿದ್ದಾರೆ. 
ಇಂದು ಶಿವಮೊಗ್ಗ ನಗರದಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಟಿ ನಡೆಸಿ ಈ ಬಗ್ಗೆ ಮಾತನಾಡಿದ ಅವರು,ಈ ಪ್ರಕರಣದಲ್ಲಿ ಅಮಾಯಕನ ಮೇಲೆ ಕಾಲಿಗೆ ಗುಂಡೇಟು ಹಾಕಿದ  ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮತ್ತು  ಗಂಡನನ್ನು ಬಿಡುಗಡೆಗೊಳಿಸಬೇಕು. ನನ್ನ ಗಂಡನಿಗೆ ಸೂಕ್ತವಾದ ರಕ್ಷಣೆ ನೀಡಬೇಕು ಎಂದು ಸರ್ಕಾರಕ್ಕೆ  ಆಗ್ರಹಿಸಿದರು.

ಆ. 15ರಂದು  ಶಿವಮೊಗ್ಗದಲ್ಲಿ ಗಲಾಟೆಯಾದಾಗ ನನ್ನ ಗಂಡ ಮನೆಯಲ್ಲಿ ಇದ್ದರು. ಗಲಾಟೆಯ ಮಾಹಿತಿ ತಿಳಿದು ಎಲ್ಲಿಯೂ ಕೂಡ ಹೊರಗಡೆ ಹೋಗಿರಲಿಲ್ಲ ಎಂದರು.

ಅದೇ ದಿನ ರಾತ್ರಿ ಸುಮಾರು 9.30 ಗಂಟೆಗೆ ಗಂಡ ಊಟ ಮಾಡುತ್ತಿರುವಾಗ ಕೆಲವು ಪೊಲೀಸರು ಬಂದು  ಹೊರಗಡೆ ಬರಲು ಕರೆದಾಗ ನನ್ನ ಗಂಡ ಊಟ ಮಾಡುವುದನ್ನು ಬಿಟ್ಟು ಹೊರಗಡೆ ಬಂದು ನೋಡಿದಾಗ ಇಬ್ಬರು ಪೊಲೀಸರು ಗಾಡಿಯಲ್ಲಿ ಬಂದು ಸ್ಟೇಷನ್‌ಗೆ ಬರಲು ತಿಳಿಸಿದರು ಎಂದರು.

 ನಾನು ನೀವು ಯಾಕಾಗಿ ನನ್ನ ಗಂಡನನ್ನು ಕರೆದುಕೊಂಡು ಹೋಗುತ್ತಿದ್ದೀರಿ ಎಂದು ಕೇಳಿದಾಗ ನಿನ್ನ ಗಂಡನನ್ನು 10 ನಿಮಿಷದಲ್ಲಿ ವಾಪಸ್ ತಂದು ಬಿಡುತ್ತೇವೆ ಎಂದು ತಮ್ಮ ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಕರೆದುಕೊಂಡು ಹೋಗಿರುತ್ತಾರೆ. 
ಮಾರನೆ ದಿನ ಬೆಳಗ್ಗೆ ನನ್ನ ಗಂಡನಿಗೆ ಪೊಲೀಸರು ಮುಖಕ್ಕೆ ಬಟ್ಟೆಕಟ್ಟಿ  ಗುಂಡು ಹಾರಿಸಿರುತ್ತಾರೆ ಎಂದು ಪೋಲಿಸರ ಮೇಲೆ ಗಂಭೀರ ಆರೋಪ ಮಾಡಿದರು.

ಈ ಬಗ್ಗೆ ನನಗೆ ಮಾಹಿತಿ ಸಿಕ್ಕಾಗ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹೋಗಿ ನನ್ನ ಗಂಡನನ್ನು ಭೇಟಿ  ಆದೆ. ಆಗ ನನ್ನ ಗಂಡ ನನಗೆ ತಿಳಿಸಿದ್ದು, ನನಗೆ ರಾತ್ರಿ ಸಮಯದಲ್ಲಿ ನನ್ನ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕೈಗಳನ್ನು ಕಟ್ಟಿ ಹಾಕಿ ಯಾವುದೋ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಪೊಲೀಸರು ನನ್ನ ಕಾಲಿಗೆ ಗುಂಡು ಹಾರಿಸಿರುತ್ತಾರೆ ಹಾಗೂ ನಂತರ ನನ್ನನ್ನು ಪೊಲೀಸರೇ ಮೆಗ್ಗಾನ್ ಗೆ ದಾಖಲಿಸಿದ್ದನ್ನು  ತಿಳಿಸಿದರು ಎಂದರು.

ಈ  ಬಗ್ಗೆ ನ್ಯಾಯಾಂಗ  ತನಿಖೆ ಆಗಬೇಕು, ತನಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ಈ ಬಗ್ಗೆ ಸಿಸಿ ಕ್ಯಾಮೆರಾ ಫುಟೇಜ್ ಮತ್ತು ಇತರೇ ಪೋಟೋ ಗಳು ಇದಕ್ಕೆ ಸಂಭಂದಿಸಿದ ಎಲ್ಲಾ ದಾಖಲೆಗಳನ್ನು ನ್ಯಾಯಾಲಯಕ ಸಲ್ಲಿಸಿ ನ್ಯಾಯಾಲಯಕ್ಕೆ ಪ್ರಕರಣ ಒಯ್ಯಲು ತೀರ್ಮಾನಿಸಿದ್ದೆವೆ ಎಂದರು.

ಆಗಸ್ಟ್ 15ರಂದು ಶಿವಮೊಗ್ಗ ಅಮೀರ್ ಅಹ್ಮದ್ ವೃತ್ತದಲ್ಲಿ ನಡೆದ ಸಾವರ್ಕರ್ ಪ್ಲೆಕ್ಸ್ ವಿವಾದ ತಾರಕಕ್ಕೇರಿ ಪೊಲೀಸರ ಮಧ್ಯ ಪ್ರವೇಶದಿಂದ ಸ್ವಲ್ಪ ತಣ್ಣಗಾದ ಬಳಿಕ ಪ್ರೇಮ್ ಸಿಂಗ್ ಎಂಬ ವ್ಯಾಪಾರಿಗೆ ಚೂರಿಯಿಂದ ಇರಿಯಲಾಗಿತ್ತು. ಈ ಘಟನೆ ಸಂಬಂಧ ನಾಲ್ವರನ್ನು ಬಂಧಿಸಲಾಗಿದ್ದು, ಜಬಿವುಲ್ಲಾ ಅಲಿಯಾಸ್ ಜಬಿ ಪ್ರಧಾನ ಆರೋಪಿ ಎಂದು ಹೇಳಲಾಗುತ್ತಿದೆ. ಆತನನ್ನು ಬಂಧಿಸಿ ಕರೆದೊಯ್ಯುವ ವೇಳೆ ಹಲ್ಲೆ ನಡೆಸಲು ಮುಂದಾದ. ಆತ್ಮರಕ್ಷಣೆಗಾಗಿ ಕಾಲಿಗೆ ಗುಂಡು ಹಾರಿಸಲಾಯಿತು ಎನ್ನುವುದು ಪೊಲೀಸರ ಮಾತು. ಅದನ್ನು ಪತ್ನಿ ಶಬಾನಾ ಬಾನು ಆಕ್ಷೇಪಿಸಿದ್ದಾರೆ.

ಈಶ್ವರಪ್ಪನವರು ಇದು ಸ್ಯಾಂಪಲ್‌ ಶೂಟ್ ಎಂದಿದ್ದು ಯಾಕೆ? ರಿಯಾಜ್ ಮಹಮ್ಮದ್ ಪ್ರಶ್ನೆ 
 ಶಾಸಕ ಈಶ್ವರಪ್ಪರವರು ಮತ್ತು ಹಿಂದು ಸಂಘಟನೆಯ ಮುಖಂಡರಾದ ದೀನದಯಾಳುರವರು ಇತ್ತಿಚೆಗೆ ಮುಸ್ಲಿಂ ಯುವಕರನ್ನು ಕೆರಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಪೊಲೀಸರು ಆರೋಪಿ ಜಬಿಗೆ  ಗುಂಡು ಹೊಡೆದ ನಂತರ ಇದು ಸ್ಯಾಂಪಲ್ ಅಂತ  ಈಶ್ವರಪ್ಪರವರು ಯಾಕೆ  ಹೇಳಬೇಕಿತ್ತು‌ ಎಂದು ಪ್ರಶ್ನಿಸಿದರು..

ಜಬಿ ಕಾಲಿಗೆ ಗುಂಡು ಹಾರಿಸಿರುವುದು, ಪೂರ್ವ ನಿರ್ಧಾರಿತ ಕೆಲಸ . ಹಿಂದೂ ಸಮಾಜದ ಮುಖಂಡರು ಪ್ರಚೋದನಾಕಾರಿಯಾಗಿ ಮಾತನಾಡಿದ್ದಾರೆ. ಅವರ ಮೇಲೆ ಏಕೆ ಕ್ರಮ ಕ್ರಮ ಕೈಗೊಂಡಿಲ್ಲ. ಅವರ ಹಿಡಿತದಲ್ಲಿ ಮಹಾನಗರ ಪಾಲಿಕೆ ಇದೆ. ಪಾಲಿಕೆ ಸದಸ್ಯರು ಹಾಗೂ ಹಿಂದೂ ಸಂಘಟನೆ ನಾಯಕರು ಪ್ರಚೋದನೆ ಮಾಡಿದ್ದಾರೆ. ಈಶ್ವರಪ್ಪನವರ ಮೇಲೆ ಆರೋಪ ಬಂದಾಗಲೆಲ್ಲಾ ಶಿವಮೊಗ್ಗದಲ್ಲಿ ಗಲಭೆಯಾಗಿದೆ . ಅವರ ಮೇಲಿನ ಆರೋಪಗಳ ಮೇಲಿನ ಗಮನವನ್ನು ಬೇರೆಡೆಗೆ ಸೆಳೆಯಲು ಹೀಗೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ನಗರದಲ್ಲಿ ಗಾಂಜಾ ಯಥೇಚ್ಛವಾಗಿ ಮಾರಾಟವಾಗುತ್ತಿದ್ದು ಅಮಾಯಕರು ಬಲಿಯಾಗುತ್ತಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯಂದು ನಡೆದ ಘಟನೆ ಜಿಲ್ಲೆಯ ಪಾಲಿಗೆ ಕರಾಳ ಪುಟ ಸೇರಿತು. ಬಜರಂಗದಳದ ಮುಖಂಡ ದೀನ್ ದಯಾಳ್ ನಗರವನ್ನು ಸುಟ್ಟು ಹಾಕುತ್ತೇವೆ ಎಂದು ಹೇಳಿದ್ದರೂ ಏಕೆ ಕ್ರಮ ಆಗಿಲ್ಲ. ಅವರು ಹೇಳುವಂತೆ ಮದರ, ಮಸೀದಿಗಳಲ್ಲಿ ದೇಶ ವಿರೋಧಿ ಚಟುವಟಿಕೆ ಹಾಗೂ ವಿಷಯಗಳನ್ನು ಹೇಳಿ ಕೊಡುವುದಿಲ್ಲ. ಹಿಂದೂ ನಾಯಕರ ಪ್ರಚೋದನಾಕಾರಿ ಹೇಳಿಕೆಗಳಿಂದ ಸಮಾಜದ ಯುವಕರು ದಾರಿ ತಪ್ಪುತ್ತಿದ್ದಾರೆ ಎಂದು ದೂರಿದರು.

ಈ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು. ಏಕೆಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಅವರ ಕೈಯಲ್ಲೇ ಇದೆ. ಜೊತೆಗೆ ಮಾನವ ಹಕ್ಕುಗಳ ಆಯೋಗಕ್ಕೂ ಮೊರೆ ಹೋಗುತ್ತೇವೆ. ದುಡಿದು ತಿನ್ನುವ ಯುವಕರೆ ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸ್ ಸ್ಟೇಷನ್, ಕೋರ್ಟ್ ಕಚೇರಿಗೆ ಅಲೆಯುತ್ತಿದ್ದಾರೆ. ಪೊಲೀಸರು ಒತ್ತಡದಲ್ಲಿ ಕೆಲಸ ಮಾಡಬಾರದು, ತನಿಖೆ ಮಾಡಬಾರದು. ನಿಷ್ಪಕ್ಷಪಾತವಾಗಿ ಕೆಲಸ ಮಾಡಲಿ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಳ್ಳುತ್ತೇವೆ ಎಂದರು.

ಬಿಜೆಪಿ ಹಾಗೂ‌ ಹಿಂದೂಪರ‌ ಸಂಘಟನೆಗಳ‌ ನಾಯಕರುಗಳ ಪ್ರಚೋದನಕಾರಿ ಹೇಳಿಕೆಯಿಂದ ನಮ್ಮ ಮುಸಲ್ಮಾನ ಯುವಕರು ಕೆರಳುತ್ತಿದ್ದಾರೆ.ಪೊಲೀಸರು ಒಂದು ಕೇಸ್ ಆದರೆ ಸಾಕು ಸಾಕಷ್ಟು ಅಮಾಯಕ ಮುಸ್ಲಿಂ ಯುವಕರನ್ನು ಕರೆದುಕೊಂಡು ಹೋಗಿ ಕೇಸುಗಳನ್ನು ಹಾಕಿ ಜೈಲಿಗೆ ಕಳುಹಿಸುತ್ತಿದ್ದಾರೆ. ಕೂಡಲೇ ಪ್ರಚೋದನೆ ಹೇಳಿಕೆಗಳನ್ನು ಹಿಂದೂ ನಾಯಕರುಗಳು‌ ನೀಡುವುದನ್ನು ನಿಲ್ಲಿಸಬೇಕು ಎಂದು ಪೀಸ್ ಕಮಿಟಿ ಅಧ್ಯಕ್ಷ ರಿಯಾಜ್ ಅಹಮದ್ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ರಿಯಾಜ್ ಅಹಮ್ಮದ,ಮದೀನಾ,ಸಿಮ್ರನ್ ಮತ್ತಿತರರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.