ವೀರಸಾವರ್ಕರ್ ಫ್ಲೆಕ್ಸ್ ವಿಚಾರವಾಗಿ ಎರಡು ಗುಂಪುಗಳ ನಡುವೆ ವಾಗ್ವಾದ ಶಿವಮೊಗ್ಗ ಉದ್ವಿಗ್ನ- ಚಾಕು ಇರಿತ

ಶಿವಮೊಗ್ಗ,ಆ15 :  ಶಿವಮೊಗ್ಗ ಅಮೀರ್ ಅಹಮದ್ ವೃತ್ತದಲ್ಲಿ ಹಾಕಿದ್ದ ವೀರಸಾವರ್ಕರ್ ಫ್ಲೆಕ್ಸ್ ವಿಚಾರವಾಗಿ ಎರಡು ಗುಂಪುಗಳ ನಡುವೆ ನಡೆದ ವಾಗ್ವಾದ ಶಿವಮೊಗ್ಗದಲ್ಲಿ  ಉದ್ವಿಗ್ನತೆಗೆ ತಿರುಗಿದೆ. 

ಇಬ್ಬರು ಯುವಕರಿಗೆ ದುಷ್ಕರ್ಮಿಗಳು ಚಾಕು ಇರಿದಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ನಗರ ವ್ಯಾಪ್ತಿಯಲ್ಲಿ 144  ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಗಲಾಟೆ ನಿಯಂತ್ರಿಸುವ ಸಲುವಾಗಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಗಾಂಧೀಬಜಾರಿನ ಉಪ್ಪಾರ ಕೇರಿಯ ಯುವ ಪ್ರೇಮ್ ಸಿಂಗ್ ಹಾಗೂ ಅಶೋಕ ನಗರದಲ್ಲಿ ಪ್ರವೀಣ್ ಎಂಬ ಯುವಕನಿಗೆ ಚಾಕು ಚುಚ್ಚಲಾಗಿದ್ದು, ಇಬ್ಬರನ್ನೂ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಗರದಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ವ್ಯಾಪಕ ಪೊಲೀಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿದೆ. 

ಘಟನೆಗೆ ಕಾರಣವೇನು?:

ಶಿವಮೊಗ್ಗ ದಲ್ಲಿ ಗಲಾಟೆ ಕ್ಲಿಕ್ ಮಾಡಿ ವಿಡಿಯೋ ನೋಡಿ

ಸ್ವಾತಂತ್ರ್ಯದ ಅಮೃತಮಹೋತ್ಸವದ ಆಚರಣೆ ಶಿವಮೊಗ್ಗದಲ್ಲಿ ಅದ್ಧೂರಿಯಾಗಿತ್ತು. ಅಮೀರ್ ಅಹಮದ್ ವೃತ್ತ, ಶಿವಪ್ಪನಾಯಕ ವೃತ್ತದಲ್ಲಿ ವೇದಿಕೆಯಲ್ಲಿ ಸ್ವಾತಂತ್ರ್ಯ ಸಂಭ್ರಮದ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದವು. ಭಾರತ ಮಾತೆ ಮೂರ್ತಿ ಮಾಡಿ ಪೂಜೆ ಸಲ್ಲಿಸಲಾಗಿತ್ತು. 

ಶಿವಪ್ಪ ನಾಯಕ ವೃತ್ತದಲ್ಲಿ ಹಿಂದೂಪರ ಸಂಘಟನೆಗಳು ವೀರಸಾವರ್ಕರ್ ಅವರ ಉದ್ದನೆಯ ಫ್ಲೆಕ್ಸ್ ಹಾಕಿದ್ದರು. ಇದನ್ನು ಖಂಡಿಸಿದ ಒಂದು ಗುಂಪು ಅವರ ಫ್ಲೆಕ್ಸ್ ತೆಗೆಯಿರಿ ಎಂದು ಹೇಳಿತು.

ಶಿವಮೊಗ್ಗದಲ್ಲಿ ಗಲಾಟೆ ವಿಡಿಯೋ ಕ್ಲಿಕ್ ಮಾಡಿ ನೋಡಬಹುದು

 ಮಾತ್ರವಲ್ಲದೆ ಟಿಪ್ಪು ಸುಲ್ತಾನ್ ಫ್ಲೆಕ್ಸ್ ಹಾಕಿ ಎಂದು ಒತ್ತಡ ಹಾಕಿದರೆನ್ನಲಾಗಿದೆ. ಇದಕ್ಕೆ ಪೊಲೀಸರು ವಿರೋಧ ವ್ಯಕ್ತಪಡಿಸಿದಾಗ ಒಂದು ಗುಂಪು ಸಾವರ್ಕರ್ ಫ್ಲೆಕ್ಸ್ ಅನ್ನು ತೆರವುಮಾಡಿದರು. ಇದಕ್ಕೆ ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತವಾಯಿತು. ಈ ಸಂದರ್ಭ ಪೊಲೀಸರು ಲಾಠಿ ಚಾರ್ಜ್ ನಡೆಸಿದರು.

ಈ ಸುದ್ದಿ ಹರಡುತ್ತಿದ್ದಂತೆ ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ. ಈ ನಡುವೆ ಹಿಂದೂಪರ ಸಂಘಟನೆಗಳು ಗಾಂಧಿ ಬಜಾರಿನಲ್ಲಿ ಪ್ರತಿಭಟನೆ ಮತ್ತು ಧರಣಿಗೆ ಮುಂದಾದರು. ಮಾತ್ರವಲ್ಲದೆ, ಸೂಕ್ಷ್ಮ ಪ್ರದೇಶಗಳಲ್ಲಿ ರ್‍ಯಾಲಿ ನಡೆಸಲು ಮುಂದಾದರು ಆದರೆ ಪೊಲೀಸರು ಅದನ್ನು ತಡೆದರು. 

ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಸತತ ಪ್ರಯತ್ನ ಪಡುತ್ತಿದ್ದು ಬೇರೆ ಜಿಲ್ಲೆಯಿಂದ ಪೊಲೀಸ್ ಪಡೆಗಳನ್ನು ಕರೆತರಲಾಗುತ್ತಿದೆ ಎಂದು ಪೊಲೀಸ್ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ನಗರದ ನಾಗರಿಕರಲ್ಲಿ ಶಾಂತಿ ಕಾಪಾಡಲು ಹಿರಿಯ ಪೊಲೀಸ್ ಅಧಿಕಾರಿಗಳು ,ಮನವಿ ಮಾಡಿದ್ದಾರೆ.

ಶಿವಮೊಗ್ಗ ದಲ್ಲಿನ ಗಲಾಟೆ ವಿಡಿಯೋ ಕ್ಲಿಕ್ ಮಾಡಿ ನೋಡಿ

ಸ್ಥಳಕ್ಕೆ ಗೃಹಸಚಿವ ಆರಗಜ್ಞಾನೇಂದ್ರ,ಉಸ್ತುವಾರಿ ಸಚಿವರು, ಶಾಸಕರು,ಜಿಲ್ಲಾಧಿಕಾರಿ ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು  ಧಾವಿಸಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. 

ಶಿವಮೊಗ್ಗ ನಗರ ಮತ್ತು ಭದ್ರಾವತಿ ನಗರದಲ್ಲಿ ಎರಡೂ ಕಡೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ: ಜಿಲ್ಲಾರಕ್ಷಣಾಧಿಕಾರಿ ಡಾ.ಲಕ್ಷ್ಮೀಪ್ರಸಾದ್ 


ಫ್ಲೆಕ್ಸ್ ಹಾಕುವ ವಿಚಾರದಲ್ಲಿ ಎರಡು ಗುಂಪುಗಳು ಮುಖಾಮುಖಿಯಾಗುವುದನ್ನ ತಪ್ಪಿಸಲಾಗಿದ್ದು ಶಿವಮೊಗ್ಗ ನಗರ ಮತ್ತು ಭದ್ರಾವತಿ ನಗರದಲ್ಲಿ ಎರಡೂ ಕಡೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಡಾ.ಲಕ್ಷ್ಮೀಪ್ರಸಾದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಫ್ಲೆಕ್ಸ್ ವಿಚಾರವಾಗಿ ನಡೆದ ಘರ್ಷಣೆಯಲ್ಲಿ ಒಬ್ಬರಿಗೆ ಚಾಕು ಇರಿದಿರುವುದು ದೃಢಪಟ್ಟಿದೆ. ಇನ್ನೊಬ್ಬರಿಗೆ ಚಾಕು ಇರಿಯಲಾಗಿದೆ ಎಂಬ ಸುದ್ದಿ ಹರಡಿದೆ ಎಂದು ಹೇಳಲಾಗುತ್ತಿದೆ.

ಪ್ರೇಮ್ ಸಿಂಗ್ ಗೆ ಚಾಕು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗೆ ಯತ್ನ ಪ್ರಕರಣವನ್ನ ದಾಖಲಿಸಲಾಗಿದೆ. 

8 ಕೆಎಸ್ ಆರ್ ಪಿ, 10 ಡಿಎಆರ್ ಮತ್ತು ಒಂದು ರ್ಯಾಪಿಡ್ ಆಕ್ಷನ್ ಫೊರ್ಸ್  ರಾತ್ರಿಗೆ ಇನ್ನೂ ಹೆಚ್ಚಿನ ಫೊರ್ಸ್ ನಗರಕ್ಕೆ ಬರುತ್ತಿದೆ.

ಸಧ್ಯಕ್ಕೆ ಸಿಟಿಯಲ್ಲಿ ಅಂಗಡಿಗಳನ್ನ ಬಂದ್ ಮಾಡಲಾಗಿದೆ. ಗುಂಪುಕಟ್ಟಿಕೊಂಡು ಓಡಾಡುವುದು ಕಡಿಮೆಯಾಗಿದೆ. ಸ್ವಾತಂತ್ರ್ಯೋತ್ಸವದ ಸಂಭ್ರಮ ಸಡಗರಕ್ಕೆ ಫ್ಲೆಕ್ಸ್ ಕಾರ್ಮೋಡ ಕವಿದಿದೆ. ಶಿವಮೊಗ್ಗ ಶಾಂತಿಯಾಗುವ ತನಕ 144 ಸೆಕ್ಷನ್ ಮುಂದುವರೆಯುವ ನಿರೀಕ್ಷೆ ಇದೆ.

144 ಸೆಕ್ಷನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ  ಶಿವಮೊಗ್ಗ ನಗರ ಹಾಗೂ ಭದ್ರಾವತಿ ಪಟ್ಟಣ ವ್ಯಾಪ್ತಿಯ ಎಲ್ಲಾ ಶಾಲಾ ಕಾಲೇಜುಗಳಿಗೆ ದಿನಾಂಕ 16/08/2022 ರಂದು ರಜೆ ಘೋಷಿಸಲಾಗಿದೆ.

# ಜಿಲ್ಲಾಧಿಕಾರಿ ಶಿವಮೊಗ್ಗ

.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.