ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪರಿಂದ ʼರಾಮ್ಸ್ ರೆಸ್ಟೋರೆಂಟ್ʼ ಉದ್ಘಾಟನೆ
ಶಿವಮೊಗ್ಗ: ನಗರದ ಶ್ರೀರಾಂಪುರದಲ್ಲಿ ನೂತನವಾಗಿ ಆರಂಭಗೊಂಡಿರುವ ‘ರಾಮ್ಸ್ ರೆಸ್ಟೋರೆಂಟ್’ ಅನ್ನು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಶಿವಮೊಗ್ಗ ಕ್ಷೇತ್ರದ ಶಾಸಕ ಕೆ.ಎಸ್. ಈಶ್ವರಪ್ಪ ಗುರುವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ದಿ ಹೊಂದಿರುವ ಶಿವಮೊಗ್ಗ ನಗರದಲ್ಲಿ ಇಂತದೊಂದು ಸುಸಜ್ಜಿತ ಗಾರ್ಡನ್ ರೆಸ್ಟೋರೆಂಟ್ ಅಗತ್ಯವಿತ್ತು. ಆರಂಭಗೊಂಡಿರುವ ʼರಾಮ್ಸ್ ರೆಸ್ಟೋರೆಂಟ್ʼ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ಮೂಲಕ ಯಶಸ್ಸು ಸಾಧಿಸಲಿ ಎಂದು ಹಾರೈಸಿದರು.
ರಾಮ್ಸ್ ರೆಸ್ಟೋರೆಂಟ್ ಮ್ಯಾನೇಜಿಂಗ್ ಡೈರೆಕ್ಟರ್ ಕೆ. ರಾಮೋಜಿ ರಾವ್ ಅತಿಥಿಗಳನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಡಾ. ನಾಗರಾಜ ರಾವ್, ರೆಸ್ಟೋರೆಂಟ್ ಜನರಲ್ ಮ್ಯಾನೇಜರ್ ಪವನ್ ಕುಮಾರ್ ಮೊದಲಾದವರಿದ್ದರು.
Leave a Comment