ಗದಗ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಶ್ರೀಮತಿ ವೈಶಾಲಿ ಎಂ.ಎಲ್.ನೇಮಕ

ಗದಗ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಶ್ರೀಮತಿ ವೈಶಾಲಿ ಎಂ.ಎಲ್.ನೇಮಕ

ಶಿವಮೊಗ್ಗ : ಶ್ರೀಮತಿ ವೈಶಾಲಿ ಅವರು ಶಿವಮೊಗ್ಗ ಜಿಲ್ಲಾ ಪಂಚಾಯತ ಸಿಇಓ ಆಗಿದ್ದು, ಇದೀಗ KAS ನಿಂದ IAS  ಪದೋನ್ನತಿ ಹೊಂದಿದ ಅವರು ಗದಗ ಜಿಲ್ಲೆಯ ನೂತನ  ಜಿಲ್ಲಾಧಿಕಾರಿಯಾಗಿ ನೇಮಕವಾಗಿದ್ದಾರೆ. ಇಂದು ಸರ್ಕಾರದ ಆದೇಶ ಹೊರಬಿದ್ದಿದೆ.

ಶ್ರೀಮತಿ ವೈಶಾಲಿ ಅವರು ಶಿವಮೊಗ್ಗದಲ್ಲಿ ಉಪವಿಭಾಗ ಅಧಿಕಾರಿಯಾಗಿ ಮತ್ತು ಶಿವಮೊಗ್ಗ ಜಿಲ್ಲಾ ಪಂಚಾಯತ ಸಿಇಓ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ . ಇದೀಗ ಪದೋನ್ನತಿ ಹೊಂದಿರುವ ಇವರು ಗದಗ ಜಿಲ್ಲಾಧಿಕಾರಿ ಯಾಗಿ ಸದ್ಯದಲ್ಲಿಯೇ ತೆರಳಲಿದ್ದಾರೆ. 
  ಶಿವಮೊಗ್ಗ ZP CEO ಹುದ್ದೆಯಿಂದ ಪದೋನ್ನತಿ ಹೊಂದಿ ಗದಗ  ಜಿಲ್ಲಾಧಿಕಾರಿಯಾಗಿ ತೆರಳಲಿರುವ ಶ್ರೀಮತಿ ವೈಶಾಲಿ ಮೇಡಮ್ ರವರಿಗೆ  ಹಲೋ ಶಿವಮೊಗ್ಗ ಪತ್ರಿಕಾ ಬಳಗದಿಂದ ಶುಭಾಶಯಗಳು. 

ಶಿವಮೊಗ್ಗ ಜಿಪಂ ಸಿಇಒ .ಎಂ.ಎಲ್ .ವೈಶಾಲಿಯವರನ್ನು ಸರ್ಕಾರ ಗದಗ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಇವರ ಜಾಗಕ್ಕೆ ಕರ್ನಾಟಕ ಪಂಚಾಯತ್ ರಾಜ್  ಕೇಂದ್ರ ಬೆಂಗಳೂರು ನಲ್ಲಿ  ಸಂಪನ್ಮೂಲ  ಅಧಿಕಾರಿಯಾಗಿದ್ದ ಎನ್. ಡಿ. ಪ್ರಕಾಶ್ ರವರನ್ನು  ಶಿವಮೊಗ್ಗ ಜಿ.ಪಂ ನ ಯೋಜನಾ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಿದ್ದು, ಜೊತೆಯಲ್ಲಿ ಅವರು ಸಿಇಒ ಆಗಿ ಕಾರ್ಯನಿರ್ವಹಿಸುವಂತೆ ಸರ್ಕಾರ ಆದೇಶಿಸಿದೆ ಎಂದು ತಿಳಿದು ಬಂದಿದೆ.


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.