VISL ಕಾರ್ಖಾನೆಗೆ ಅವಶ್ಯವಿರುವ ರೂ.300 ಕೋಟಿ ಬಂಡವಾಳ ವನ್ನು ಕೇಂದ್ರ ಸರ್ಕಾರ ದ ಭಾರತೀಯ ಉಕ್ಕು ಪ್ರಾಧಿಕಾರದಿಂದ ತೊಡಗಿಸುವಂತೆ ಮನವಿ

ಭದ್ರಾವತಿ :-   VISL ಕಾರ್ಮಿಕರ ಸಂಘದ ನಿಯೋಗ ದೆಹಲಿಯಲ್ಲಿ ಜುಲೈ 21 ರಂದು ಕರ್ನಾಟಕ ರಾಜ್ಯದ ಸಂಸದ ರಾದ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರು  ನಳಿನ್ ಕುಮಾರ್ ಕಟೀಲ್, ಬೆಂಗಳೂರು ಕೇಂದ್ರ ಸಂಸದರು  ಪಿ ಸಿ ಮೋಹನ್, ಕೇಂದ್ರ ಮಾಜಿ ಸಚಿವರಾದ  ಡಿ ವಿ ಸದಾನಂದ ಗೌಡರು, ಕೋಲಾರ ಸಂಸದ ರಾದ  ಮುನಿಸ್ವಾಮಿ, ಬಳ್ಳಾರಿ ಸಂಸದರಾದ  ದೇವೇಂದ್ರಪ್ಪ, ರಾಜ್ಯ ಸಭಾ ಸದಸ್ಯ ಹನುಮಂತಯ್ಯ ರವರನ್ನು ಬೇಟಿ ಮಾಡಿ VISL ಕಾರ್ಖಾನೆಗೆ ಅವಶ್ಯವಿರುವ ರೂ.300 ಕೋಟಿ ಬಂಡವಾಳ ವನ್ನು ಕೇಂದ್ರ ಸರ್ಕಾರ ದ ಭಾರತೀಯ ಉಕ್ಕು ಪ್ರಾಧಿಕಾರದಿಂದ ತೊಡಗಿಸುವಂತೆ ಮನವಿ ಸಲ್ಲಿಸಲಾಯಿತು.
ಇದೇ ಸಂಧರ್ಭದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಯುವ ಅಧ್ಯಕ್ಷ  B V ಶ್ರೀನಿವಾಸ್ ಮತ್ತು AICC ಸದಸ್ಯರಾದ ಶ್ರೀ ಮಂಜುನಾಥ ಭಂಡಾರಿ ನೇತೃತ್ವದಲ್ಲಿ ರಾಜ್ಯ ಸಭಾ  ವಿರೋದ ಪಕ್ಷದ ನಾಯಕರಾದ Dr.ಮಲ್ಲಿಕಾರ್ಜುನ ಖರ್ಗೆರವರನ್ನು ಬೇಟಿ ಮಾಡಿ VISL ಕಾರ್ಖಾನೆಗೆ ಅವಶ್ಯವಿರುವ ರೂ.300 ಕೋಟಿ ಬಂಡವಾಳ ವನ್ನು ಕೇಂದ್ರ ಸರ್ಕಾರ ದ ಭಾರತೀಯ ಉಕ್ಕು ಪ್ರಾಧಿಕಾರದಿಂದ ತೊಡಗಿಸುವಂತೆ ಮನವಿ ಸಲ್ಲಿಸಲಾಯಿತು.
   ಕಾರ್ಮಿಕ ಸಂಘದ ಅಧ್ಯಕ್ಷ ಜಗದೀಶ್, ಪ್ರದಾನ ಕಾರ್ಯದರ್ಶಿ ಬಸಂತ್ ಕುಮಾರ್, ಕಾರ್ಯದರ್ಶಿ ಮನು, ಖಜಾಂಚಿ ಮೋಹನ್ ಉಪಸ್ಥಿತರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.