(SJKPS )ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ:ಅಧ್ಯಕ್ಷರಾಗಿ ಗೋಪಾಲ್ ಯಡಗೆರೆ, ಪ್ರಧಾನ ಕಾರ್ಯದರ್ಶಿಯಾಗಿ ಕಾಚಿನಕಟ್ಟೆ ಸಂತೋಷ್ ಆಯ್ಕೆ

ಶಿವಮೊಗ್ಗ: ನೂತನವಾಗಿ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಸ್ತಿತ್ವಕ್ಕೆ ಬಂದಿದ್ದು, ಇದರ ನೂತನ ಗೌರವಾಧ್ಯಕ್ಷರಾಗಿ ಶಿವಮೊಗ್ಗ ಟೈಮ್ಸ್‌‌ ನ ಸಂಪಾದಕ ಎಸ್. ಚಂದ್ರಕಾಂತ್, ಅಧ್ಯಕ್ಷರಾಗಿ ಕನ್ನಡಪ್ರಭದ ಗೋಪಾಲ್ ಯಡಗೆರೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವಿಜಯಕರ್ನಾಟಕದ ಸಂತೋಷ್ ಕಾಚಿನಕಟ್ಟೆ(ಲಕ್ಷ್ಮೀಕಾಂತ್) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೋಮವಾರ ಪತ್ರಿಕಾ ಭವನದಲ್ಲಿ ನಡೆದ ಪತ್ರಕರ್ತರ ಸಭೆಯಲ್ಲಿ ಈ ಅವಿರೋಧ ಆಯ್ಕೆ ನಡೆಯಿತು. ಉಳಿದಂತೆ ಉಪಾಧ್ಯಕ್ಷರಾಗಿ ಹಿರಿಯ ಪತ್ರಕರ್ತ ಸಂಯುಕ್ತ ಕರ್ನಾಟಕದ ಕೆ. ತಿಮ್ಮಪ್ಪ, ನಗರ ಕಾರ್ಯದರ್ಶಿಯಾಗಿ ಪವರ್ ಟಿ.ವಿ. ವರದಿಗಾರ ಗೋ.ವಾ. ಮೋಹನ್ ಕೃಷ್ಣ, ಖಜಾಂಚಿಯಾಗಿ ಇಂಡಿಯನ್ ಎಕ್ಸ್ಪ್ರೆಸ್  ಪತ್ರಿಕೆಯ ಹಿರಿಯ ಛಾಯಾಚಿತ್ರಕಾರ ನಂದನ್ ಆಯ್ಕೆಗೊಂಡರು.ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಾಮಚಂದ್ರ ವಿ. ಗುಣಾರಿ(ಇಂಡಿಯನ್ ಎಕ್‌ಸ್‌‌ಪ್ರೆೆಸ್), ವಿಸ್ತಾರ ಟಿ.ವಿ. ಸ್ಥಾನಿಕ ಸಂಪಾದಕ ವಿವೇಕ್ ಮಹಾಲೆ, ವಿಜಯಕರ್ನಾಟಕ ಸ್ಥಾನಿಕ ಸಂಪಾದಕ ಆರಗ ರವಿ, ಈ ಟಿ.ವಿ.ಭಾರತ್‌ನ ಕಿರಣ್ ಕಂಕಾರಿ, ಆಜ್ ಕಾ ಇನ್ ಕಿಲಾಬ್ ಪತ್ರಿಕೆಯ ಲಿಯಾಕತ್, ಹಲೋ ಶಿವಮೊಗ್ಗ ದಿನಪತ್ರಿಕೆ ಸಂಪಾದಕ  ಡಿ. ಜಿ. ನಾಗರಾಜ್, ರಾಜಋಷಿ ಪತ್ರಿಕೆ ಸಂಪಾದಕ ಭರತೇಶ್, ಸಹ್ಯಾದ್ರಿ ಪತ್ರಿಕೆ ಸಂಪಾದಕ ಮಂಜುನಾಥ್ ಎನ್., ವಿಜಯಕರ್ನಾಟಕ ಛಾಯಾಚಿತ್ರಕಾರ ಚಂದ್ರು ಸ್ಪಂದನ, ಎಚ್ಚರಿಕೆ ಪತ್ರಿಕೆಯ ವರದಿಗಾರ ಜೋಸೆಫ್ ಟೆಲ್ಲಿಸ್, ಕನ್ನಡಪ್ರಭದ ಗಣೇಶ್ ತಮ್ಮಡಿಹಳ್ಳಿ, ವಾರ್ತಾ ಭಾರತಿ ಪತ್ರಿಕೆ ವರದಿಗಾರ ಶರತ್ ಮಳವಳ್ಳಿ, ಪಬ್ಲಿಕ್ ಟಿ.ವಿ. ವರದಿಗಾರ ಶಶಿಧರ್ ಆಯ್ಕೆಯಾದರು.

ನಾಮ ನಿರ್ದೇಶನ ಸದಸ್ಯರಾಗಿ ನಮ್ಮ ಟಿವಿ ಯ ವಿ. ಜಗದೀಶ್, ಕನ್ನಡ ಮೀಡಿಯಂನ ಯೋಗೀಶ್, ಸಹರಾ ವರದಿಗಾರ ರಜಾಕ್, ಪಿಟಿಐ ಛಾಯಾಚಿತ್ರಕಾರ ಎಂ. ನಿಂಗನಗೌಡ ಆಯ್ಕೆಯಾದರೆ, 

ವಿಶೇಷ ಆಹ್ವಾನಿತರಾಗಿ ಮಲೆನಾಡು ಎಕ್ಸ್‌ ಪ್ರೆಸ್ ಪತ್ರಿಕೆಯ ಸಂಪಾದಕ ಶಿ. ಜು. ಪಾಶಾ, ವಿಸ್ತಾರ ಟಿವಿಯ ಕ್ಯಾಮರಾಮನ್ ಸಾವಂತ್, ಟಿವಿ -5 ಕ್ಯಾಮರಾಮನ್ ಮಹೇಶ್, ಕ್ರಾಂತಿದೀಪ ಪತ್ರಿಕೆಯ ವರದಿಗಾರ ದತ್ತಾತ್ರೇಯ ಹೆಗಡೆ ಅವಿರೋಧವಾಗಿ ಆಯ್ಕೆಯಾದರು.


ಸಭೆಯಲ್ಲಿ ಹಿರಿಯ ಪತ್ರಕರ್ತರಾದ ಪ್ರೆಸ್‌ಟ್ರಸ್ಟ್​ ಅಧ್ಯಕ್ಷ ಎನ್. ಮಂಜುನಾಥ್,  ನಾಗರಾಜ್ ನೇರಿಗೆ, ವೈ. ಕೆ. ಸೂರ್ಯನಾರಾಯಣ, ಜೇಸುದಾಸ್, ವಿ. ಸಿ. ಪ್ರಸನ್ನ, ಗಿರೀಶ್ ಉಮ್ರಾಯ್, ಮುದಾಸೀರ್, ಶ್ರೀಕಾಂತ್, ಕೆ. ಮೋಹನ್, ರಾಕೇಶ್ ಡಿಸೋಜಾ, ಆತೀಶ್ ಬಿ. ಕನ್ನಾಳೆ, ಹೊನ್ನಾಳಿ ಚಂದ್ರಶೇಖರ್, ಕ್ಯಾಮರಾಮನ್ ಸತೀಶ್, ರಾಘವೇಂದ್ರ, ಭರತ್ ಮತ್ತಿತರರು ಇದ್ದರು.
ಎಲ್ಲ ಆಶಯಗಳಿಗೆ ಸಂಘಟನೆ ಸ್ಪಂದಿಸುತ್ತದೆ- ಎಲ್ಲರನ್ನೂ ಒಂದಾಗಿ ಕರೆದೊಯ್ಯುತ್ತದೆ:ನೂತನ ಅಧ್ಯಕ್ಷ ಗೋಪಾಲ್ ಯಡಗೆರೆ
ನೂತನವಾಗಿ  ಅಧ್ಯಕ್ಷರಾದ ಗೋಪಾಲ್ ಯಡಗೆರೆಯವರು ಮಾತನಾಡುತ್ತಾ ಪತ್ರಿಕೆಯ ಎಲ್ಲರೂ ಒಂದಾಗಿ ಈ ಸಂಘಟನೆಯನ್ನು ಸ್ಥಾಪಿಸಿದ್ದಾರೆ. ಹೊಸ ಜವಾಬ್ದಾರಿ ವಹಿಸಿದ್ದಾರೆ. ಅವರ ಎಲ್ಲ ಆಶಯಗಳಿಗೆ ಸಂಘಟನೆ ಸ್ಪಂದಿಸುತ್ತದೆ. ಎಲ್ಲರನ್ನೂ ಒಂದಾಗಿ ಕರೆದೊಯ್ಯುತ್ತದೆ. ಇಲ್ಲಿ ಯಾವುದೇ ಜಾತಿ, ಧರ್ಮದ ಬೇಧವಿಲ್ಲ. ಪತ್ರಕರ್ತರು ಎಂಬುದೊಂದೇ ಇಲ್ಲಿನ ಮಾನದಂಡ. ಕ್ರಿಯಾಶೀಲವಾಗಿ ಕೆಲಸ ಮಾಡುತ್ತಾ ನಮ್ಮ ಅಸ್ತಿತ್ವ ತೋರಿಸೋಣ. ಜೊತೆಯಾಗಿ ಮುನ್ನಡೆಯೋಣ ಎಂದರು. ಮುಂದಿನ ದಿನಗಳಲ್ಲಿ ತಾಲೂಕು ಮತ್ತು ಹೋಬಳಿ ಘಟಕಗಳು ರಚನೆಯಾಗಲಿದ್ದು, ಈಗಾಗಲೇ ಎಲ್ಲ ಕಡೆಯಿಂದಲೂ ಪ್ರತಿಕ್ರಿಯೆಗಳು ಬರುತ್ತಲಿದೆ. ಪತ್ರಕರ್ತರಿಗೆ ಆರೋಗ್ಯ ವಿಮೆ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕೊಡಿಸುವ ಯತ್ನ ನಡೆಯಲಿದೆ ಎಂದು ಹೇಳಿದರು.

ಸಮನ್ವಯತೆ ಮತ್ತು ಒಗ್ಗಟ್ಟು ನಮ್ಮ ಮೂಲಮಂತ್ರ; ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ

ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ ಮಾತನಾಡಿ ಸಮನ್ವಯತೆ ಮತ್ತು ಒಗ್ಗಟ್ಟು ನಮ್ಮ ಮೂಲಮಂತ್ರ. ಉತ್ತಮ ಕಾರ್ಯಕ್ರಮಗಳ ಮೂಲಕ ಪತ್ರಕರ್ತರ ಆಶಯಗಳಿಗೆ ಸ್ಪಂದಿಸೋಣ ಎಂದರು.

ಹೊಸ ಸಂಘಟನೆ ಇಡೀ ರಾಜ್ಯಕ್ಕೆ ಮಾದರಿಯಾಗಲಿ; ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ 
ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಮಾತನಾಡಿ ಸಂಘಟನೆಯ ಉದ್ದೇಶವನ್ನು ವಿವರಿಸಿದರು. ಹೊಸ ಸಂಘಟನೆ ಇಡೀ ರಾಜ್ಯಕ್ಕೆ ಮಾದರಿಯಾಗಲಿ. ಪ್ರೆಸ್‌ಟ್ರಸ್ಟ್‌ ಮತ್ತು ನೂತನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಜೊತೆ ಜೊತೆಯಾಗಿ ಕೆಲಸ ಮಾಡಲಿದೆ ಎಂದು ಹೇಳಿದರು. ಉಳಿದಂತೆ ಹಿರಿಯ ಪತ್ರಕರ್ತರು ಮಾತನಾಡಿ ಸಂಘಟನೆ ಹೇಗೆ ಮುನ್ನಡಿಯಿಡಬೇಕೆಂಬುದನ್ನು  ವಿವರಿಸಿದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.