ಶಿವಮೊಗ್ಗ ಸಂತೆಕಡೂರು ಗ್ರಾಮದಲ್ಲಿ ಸ್ಮಶಾನಕ್ಕೆ ಮೀಸಲಿಟ್ಟ ಜಾಗವನ್ನು ಬಿಡದ ಭೂಪರು!! ಮಾನ್ಯ ಜಿಲ್ಲಾಧಿಕಾರಿಗಳು ಗಮನಹರಿಸಿ,ಸೂಕ್ತ ಕ್ರಮ ಕೈಗೊಳ್ಳುವರೇ..?



ಶಿವಮೊಗ್ಗ ತಾಲ್ಲೂಕು ನಿಧಿಗೆ  ಹೋಬಳಿ ಸಂತೆಕಡೂರು ಗ್ರಾನದ ಸ.ನಂ.95 ರಲ್ಲಿ 3 ಎಕರೆ ಜಮೀನನ್ನು ಸ್ಮಶಾನದ ಉದ್ದೇಶಕ್ಕೆ ಕಾಯ್ದಿರಿಸಿದ ಜಾಗವನ್ನು ಕೆಲವು ಪ್ರಭಾವಿ ವ್ಯಕ್ತಿಗಳು ಬಡ ಜನರಿಂದ ಮನೆಕಟ್ಟಲು ಸೈಟ್ ಕೊಡುತ್ತೆವೆ ಎಂದು ಲಕ್ಷಗಟ್ಟಲೆ ಹಣ ಪಡೆದು ಈಗಾಗಲೇ ಒತ್ತುವರಿ ಮಾಡಿ ಮನೆಕಟ್ಟಲು ಪ್ರೇರೇಪಣೆ ನೀಡುತ್ತಿದ್ದಾರೆ ಎಂಬ ಆರೋಪ ಸಂತೆಕಡೂರು ಗ್ರಾಮಸ್ಥರಿಂದ ಕೇಳಿಬರುತ್ತಿದೆ.,

ಸಂತೆಕಡೂರು ಗ್ರಾಮದಲ್ಲಿ ಸ್ಮಶಾನ ಜಾಗದಲ್ಲಿ ಅಕ್ರಮವಾಗಿ  ಒತ್ತುವರಿ ಮಾಡುತ್ತಿದ್ದಾರೆ ಅದನ್ನು ತೆರವು ಗೊಳಿಸಬೇಕೆಂದು ಹಲವಾರು ಬಾರಿ ತಹಶೀಲ್ದಾರ್ ಶಿವಮೊಗ್ಗ ರವರಿಗೆ. ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರೂ ಉಪಯೋಗವಾಗಿಲ್ಲವೆಂದು ಗ್ರಾಮಸ್ಥರ ಆರೋಪವಾಗಿದೆ.

ಸ್ಥಳಿಯ ಗ್ರಾಮಾಂತರ ಶಾಸಕರಾದ ಅಶೋಕನಾಯ್ಕ ರವರು  ತಮ್ಮ ಲೇಟರ್ ಹೆಡ್ ನಲ್ಲಿ ಸಂತೆಕಡೂರು ಗ್ರಾಮದಲ್ಲಿ ಸ್ಮಶಾನದ ಒತ್ತುವರಿ ಜಾಗದಲ್ಲಿ ಇರುವ ರನ್ನು ತೆರವು ಗೋಳಿಸಲು ಸೂಕ್ತವಾದ ಕಾನೂನು ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಜಿಲ್ಲಾಡಳಿತ ಮತ್ತು ತಹಶೀಲ್ದಾರ್ ಹಾಗೂ ,ಸಂತೆಕಡೂರು PDO ವಿರುದ್ದ ಅಸಮಾಧಾನ ಹೊರ ಹಾಕಿದ್ದಾರೆ. 

ಸಂತೆಕಡೂರು ಗ್ರಾಮದಲ್ಲಿ 3 ಎಕರೆ ಸ್ಮಶಾನಕ್ಕೆ ಅಂತಾ ಮೀಸಲಿಟ್ಟ ಜಾಗದಲ್ಲಿ ನಿರ್ಮಿಸಲಾದ ಮನೆಗಳನ್ನು ಮತ್ತು ಒತ್ತುವರಿ ಜಾಗವನ್ನು ತೆರವು ಗೊಳಿಸುವಂತೆ ಸ್ಮಶಾನಕ್ಕೆ ಮೀಸಲಿಟ್ಟ ಮೂರು ಎಕರೆ ಜಾಗವನ್ನು ಬೇರೆಯವರ ಪಾಲಾಗದಂತೆ ಉಳಿಸಿಕೊಡುವಂತೆ ಸಂಬಂದಿಸಿದ ಅಧಿಕಾರಿಗಳಿಗೆ ಮತ್ತು ಗ್ರಾಮಾಂತರ ಶಾಸಕ ರಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದಾರೆ.ಅಧಿಕಾರಿಗಳು ಮಾತ್ರ ಕೈಕಟ್ಟಿಕುಳಿತಿದ್ದಾರೆ ಎಂದು ಸ್ಥಳಿಯರ ಆರೋಪವಾಗಿದೆ.ಕೆಲವು ಗ್ರಾಮಪಂಚಾಯಿತಿ  ಸದಸ್ಯರು ಮತ್ತು ಅಧಿಕಾರಿಗಳು ಇದರಲ್ಲಿ ಶಾಮೀಲು ಆಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಈ ಬಗ್ಗೆ   ದಕ್ಷ ನಿಷ್ಠಾವಂತ  ಜಿಲ್ಲಾಧಿಕಾರಿಗಳಾದ ಸೆಲ್ವಮಣಿ ರವರು ಮತ್ತು ಶಿವಮೊಗ್ಗ ತಹಶೀಲ್ದಾರ್ ರವರು ಮೇಲ್ಕಂಡ ಸ್ಮಶಾನ ಜಾಗದ ಒತ್ತುವರಿ ಮನೆಗಳ ನಿರ್ಮಾಣದ ಬಗ್ಗೆ ಗಮನಹರಿಸಿ ಸೂಕ್ತವಾದ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಲಿ ಎಂಬುದು ಸ್ಥಳಿಯರ ಒತ್ತಾಸೆಯಾಗಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.