ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ವಿಎಚ್‌ಪಿ ಹಾಗೂ ಬಜರಂಗ ದಳದಿಂದ ಪ್ರತಿಭಟನೆ
ಶಿವಮೊಗ್ಗ: ಹಿಂದೂ ಸಂಘಟನೆ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ವಿಎಚ್‌ಪಿ ಹಾಗೂ ಬಜರಂಗ ದಳದಿಂದ ಗುರುವಾರ ಸಂಜೆ ನಗರದ ಹೊಳೆ ಬಸ್ ನಿಲ್ದಾಣ ವೃತ್ತ ಹಾಗೂ ವಿದ್ಯಾನಗರದ ರೈಲ್ವೆ ಗೇಟ್ ಬಳಿ ಇರುವ ಆಂಜನೇಯ ದೇವಸ್ಥಾನ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ಮಾಡಿದ ಪ್ರತಿಭಟನಾಕಾರರು ಹಿಂದೂ ಕಾರ್ಯಕರ್ತನ ಹತ್ಯೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಇಲಾಖೆ ಹಾಗೂ ಗುಪ್ತಚರ ವಿಭಾಗ ವೈಫಲ್ಯವನ್ನು ತೀವ್ರವಾಗಿ ಖಂಡಿಸಿದ ಪ್ರತಿಭಟನಾಕಾರರು ಹತ್ಯೆ ನಡೆಸಿದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಂತಹ ಮರುಕಳಿಸದಂತೆ ಎಚ್ಚರ ವಹಿಸುವಂತೆ ಆಗ್ರಹಿಸಿದರು.
ಹಿಂದೂ ಸಂಘಟನೆಯ ಕಾರ್ಯಕರ್ತರ ಕೊಲೆಯಾದಾಗಲೆಲ್ಲಾ ಆಳುವವರು ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದು ಹೇಳುತ್ತಲೇ ಜಾರಿಕೊಳ್ಳುತ್ತಿದ್ದಾರೆ. ಇದರಿಂದ ಹಿಂದೂ ಕಾರ್ಯಕರ್ತರ ಜೀವಕ್ಕೆ ಬೆಲೆಯೇ ಇಲ್ಲ ಎನ್ನುವಂತಾಗಿದೆ.
ಕಾನೂನು ತೋರಿಸಿ ಕಟ್ಟಿ ಹಾಕುವ ಆಳುವವರು ಕೊಲೆಗಡುಕರಿಗೆ ಮುಕ್ತ ಅವಕಾಶ ನೀಡುತ್ತಿದ್ದಾರೆ. ಹತ್ಯೆ ನಡೆಸುವವರ ಮೇಲೆ ನಿರ್ದಾಕ್ಷಣ್ಯ ಕ್ರಮ ಕೈಗೊಳ್ಳದಿದ್ದರೆ ಹಿಂದೂ ಸಂಘಟನೆಯ ಕಾರ್ಯಕರ್ತರು ಸಿಡಿದೇಳಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವಹಿಂದು ಪರಿಷದ್ ಜಿಲ್ಲಾಧ್ಯಕ್ಷ ಜೆ.ಆ್ ವಾಸುದೇವ್, ಪೊಲೀಸ್ ಇಲಾಖೆ ಹಾಗೂ ಗುಪ್ತಚರ ವಿಭಾಗ ಸಂಪೂರ್ಣ ವೈಫಲ್ಯ ಆಗಿರುವುದೇ ಹಿಂದೂ ಸಂಘಟನೆ ಕಾರ್ಯಕರ್ತರ ಹತ್ಯೆಗೆ ಕಾರಣವಾಗುತ್ತಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಹಿಂದೂ ಸಮಾಜದ ರಕ್ಷಣೆಗೆ ಮುಂದಾಗದಿದ್ದರೆ ನಾವೇ ರಕ್ಷಣೆ ಮಾಡಿಕೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡಬೇಕಾಗುತ್ತದೆ ಎಂದರು.
ಸಂಘಟನೆಯ ಮುಖಂಡ ರಾಜುಗೌಡ ಮಾತನಾಡಿ, ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡಿ ಬೆದರಿಸಲಾಗುತ್ತಿದೆ. ಇಸ್ಲಾಂ ಮೂಲಭೂತವಾದಿಗಳು ಭಾರತವನ್ನು ಹಂತ ಹಂತವಾಗಿ ಮುಸ್ಲಿಂ ರಾಷ್ಟ್ರವಾಗಿ ಮಾಡಲು ಸಂಚುರೂಪಿಸುತ್ತಿದ್ದಾರೆ. ಇಂತಹ ಸಂಚು ಯಾವುದೇ ಕಾರಣಕ್ಕೂ ಫಲಿಸುವುದಿಲ್ಲ ಎಂದರು.
ಸಣ್ಣಪುಟ್ಟ ರೌಡಿ ಚಟುವಟಿಕೆಗಳಲ್ಲಿ ತೊಡಗಿದ ವ್ಯಕ್ತಿಗಳನ್ನು ಗಡೀ ಪಾರು ಮಾಡಿ, ಇಲ್ಲವೇ ಎನ್‌ಕೌಂಟರ್ ಮಾಡಿ ಮುಗಿಸುವ ಪೊಲೀಸ್ ಇಲಾಖೆ ಧಾರ್ಮಿಕ ಮತಾಂತಧರ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆಳುವವರು ಹಾಗೂ ಪೊಲೀಸರು ಹಿಂದೂ ಕಾರ್ಯಕರ್ತರನ್ನು ರಕ್ಷಣೆ ಮಾಡುತ್ತಾರೆಂದು ಸುಮ್ಮನಾದರೂ ಉಳಿಗಾಲವಿಲ್ಲ. ಹೀಗಾಗಿ ಹಿಂದೂ ಸಮಾಜ ಖಡ್ಗ ಹಿಡಿಯದಿದ್ದರೆ ಉಳಿಗಾಲವಿಲ್ಲ. ರಾಷ್ಟ್ರ ರಕ್ಷಣೆಗಾಗಿ, ಮುಸಲ್ಮಾನರನ್ನು ಹಿಮ್ಮೆಟ್ಟಲು ಶಿವಾಜಿ ಹಿಡಿದಿದ್ದು ಖಡ್ಗವನ್ನೇ ಎಂದರು.
ಪ್ರತಿಭಟನೆಯಲ್ಲಿ ಹರ್ಷನ ಸಹೋದರಿ ಅಶ್ವಿನಿ ಭಾಗಿಯಾಗಿ ಹತ್ಯ ಖಂಡಿಸಿದರು.
Leave a Comment