ಚಾಕು ತೋರಿಸಿ ನಗದು ಮತ್ತು ಮೊಬೈಲ್ ಕಿತ್ತುಕೊಂಡು ಹೋಗಿದ್ದ ಆರೋಪಿಗಳ ಬಂಧನ


ಶಿವಮೊಗ್ಗ:    ದಿನಾಂಕಃ- 06-07-2022  ರಂದು ಬೆಳಗ್ಗೆ ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ *ಕುವೆಂಪು ರಸ್ತೆ ನಂದಿಸಿ ಮಿಲ್ಕ್ ಪಾರ್ಲರ್ ಹತ್ತಿರ ವ್ಯಕ್ತಿಯೊಬ್ಬರಿಗೆ ಬೈಕ್ ನಲ್ಲಿ ಬಂದ ಇಬ್ಬರು ಆಸಾಮಿಗಳು ಚಾಕುವನ್ನು ತೋರಿಸಿ ರೂ 4000 ನಗದು ಮತ್ತು ಮೊಬೈಲ್ ಫೋನ್ ಅನ್ನು ಕಿತ್ತು ಕೊಂಡು ಹೋಗಿರುತ್ತಾರೆಂದು* ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0273/2022 ಕಲಂ 392  ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.

ಪಿಐ ದೊಡ್ಡಪೇಟೆ ಮತ್ತು ಸಿಬ್ಬಂಧಿಗಳ ತಂಡವು  ಸದರಿ ಪ್ರಕರಣದ ತನಿಖೆ ಕೈಗೊಂಡು, ದಿನಾಂಕಃ- 27-07-2022  ರಂದು *ಆರೋಪಿತರಾದ 1)ಅಬ್ದುಲ್ ಸಮಾದ್, 27 ವರ್ಷ, ಶಿವಮೊಗ್ಗ ಟೌನ್, ಮತ್ತು 2)ಸಯ್ಯದ್ ನಿಜಾಮುದ್ದೀನ್, 22 ವರ್ಷ, ಶಿವಮೊಗ್ಗ ಟೌನ್ ರವರುಗಳನ್ನು* ದಸ್ತಿಗಿರಿ ಮಾಡಿ ಆರೋಪಿತರಿಂದ *04 ದ್ವಿ ಚಕ್ರವಾಹನಗಳು ಮತ್ತು 01 ಗ್ರಾಂ 40 ಮಿಲಿ ತೂಕದ ಬಂಗಾರ ಮತ್ತು ಮೊಬೈಲ್ ಫೋನ್ ಅನ್ನು*  ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.