ಶಿವಮೊಗ್ಗ ಕಾಲೇಜ್ ಬಳಿ ತೂರಾಡುತ್ತಾ ಓಡಾಡುವ ವಿದ್ಯಾರ್ಥಿಗಳ ವಿಡಿಯೋ ವೈರಲ್!!

ಶಿವಮೊಗ್ಗ:  ಮೂವರು ವಿದ್ಯಾರ್ಥಿಗಳು ಸಾಗರರಸ್ತೆಯಲ್ಲಿರುವ ಖಾಸಾಗಿ ಕಾಲೇಜಿನ ಬಳಿ ತೂರಾಡುತ್ತಾ ಓಡಾಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿದ್ದು, ಪೊಲೀಸ್ ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡಿದೆ.

ಸಾಗರ ರಸ್ತೆಯ ಖಾಸಗಿ ಕಾಲೇಜಿನ ಬಳಿ ವಿದ್ಯಾರ್ಥಿಗಳು ತೂರಾಡುತ್ತಾ ಮಲಗಿದ್ದು ಮೂವರು ವಿದ್ಯಾರ್ಥಿಗಳನ್ನ ಕಾಲೇಜಿನ ಗೇಟಿನ ಬಳಿ ಸೆಕ್ಯೂರಿಟಿ ಯೋರ್ವರು ತಡೆದು ವಿದ್ಯಾರ್ಥಿಗಳ ಪೋಷಕರಿಗೆ ತಿಳಿಸಿ ನಂತರ ಕೌನ್ಸಿಲಿಂಗ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಕಾಲೇಜಿನ ಬಳಿಯಿರುವ ಬಾರ್ ವೊಂದರಲ್ಲಿ ಕುಡಿದು ನಂತರ ಕಾಲೇಜಿಗೆ ಬಂದಾಗ ಅವರನ್ನ ಸೆಕ್ಯೂರಿಟಿ ತಡೆದಿದ್ದಾರೆ. ಕೆಲ ಮಾಧ್ಯಮಗಳಲ್ಲಿ ಇದು ಗಾಂಜಾ ನಶೆಯೆಂದು ಬಿತ್ತರವಾಗಿತ್ತು. ಆದರೆ ಪೊಲೀಸ್ ಇಲಾಖೆ ಗಾಂಜಾ ಅಲ್ಲ ಇದು ಕುಡಿದ ನಶೆಯಲ್ಲಿ ನಡೆದಿದೆ ಎಂದು ಸ್ಪಷ್ಟನೆ ನೀಡಿದೆ.

ಇವರೆಲ್ಲರೂ ಡಿಪ್ಲೊಮಾ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಮೂವರು ಕುಡಿದು ತೂರಾಡಿರುವುದು ಕಂಡು ಬಂದಿದೆ. 

 ವಿದ್ಯಾರ್ಥಿಗಳ ಈ ನಡುವಳಿಕೆ ವೈರಲ್ ಆದ ವಿಡಿಯೊ ನೋಡಿ ಪೋಷಕರಲ್ಲಿ ಆತಂಕ ಹುಟ್ಟಿಸಿದೆ.

ಈ ಬಗ್ಗೆ ಪೊಲೀಸ್ ಇಲಾಖೆ ಗಮನಹರಿಸಬೇಕಾಗಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.