ಭದ್ರಾವತಿಯ ನಿವೃತ್ತ ಎಎಸ್ಐ ದೇವದಾಸ್ ನಿಧನ: ಸಂತಾಪ
ಶಿವಮೊಗ್ಗ: ಭದ್ರಾವತಿ ಉಜ್ಜನಿಪುರದಲ್ಲಿ ವಾಸವಾಗಿದ್ದ ನಿವೃತ್ತ ಎಎಸ್ಐ ದೇವದಾಸ್ (67) ಇಂದು ಬೆಳಿಗ್ಗೆ ನಿಧನವಾಗಿದ್ದಾರೆ.
ಮೃತ ಎಎಸ್ಐ ದೇವದಾಸ್ ಇವರು, ಶಿವಮೊಗ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾಗಿದ್ದರು.
ಮೃತರ ನಿಧನದ ಸುದ್ದಿ ತಿಳಿದ ಸಂಘದ ಅದ್ಯಕ್ಷ ರು ಮತ್ತು ಕಾರ್ಯದರ್ಶಿಗಳು ತೀವೃ ಸಂತಾಪ ಸೂಚಿಸಿದ್ದಾರೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು. ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.
ಮೃತರ ಅಂತ್ಯಕ್ರಿಯೆಗೆ ಪೊಲೀಸ್ ಇಲಾಖೆಯಿಂದ ಸಿಗಬಹುದಾದ ನಗದುಹಣವನ್ನು ಕೂಡಲೇ ಕೊಡಿಸುವುದಾಗಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಮೃತರು ನಾಲ್ಕು ಜನ ಹೆಣ್ಣು ಮಕ್ಕಳು ಮತ್ತು ಒಂದು ಗಂಡು ಮಗು ಹಾಗೂ ಪತ್ನಿ ಅಪಾರ ಬಂದುಬಳಗವನ್ನು ಬಿಟ್ಟು ಅಗಲಿದ್ದಾರೆ.
Leave a Comment