ನೂತನ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಸಿಕ್ಕ ಜಯ!! ಪಧಾದಿಕಾರಿಗಳು ಸಂತಸ!!
ಶಿವಮೊಗ್ಗ: ನೂತನ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಮೊದಲ ಜಯ ಸಿಕ್ಕಿದ್ದು, ಸಂಘದ ಪಧಾದಿಕಾರಿಗಳು ಮತ್ತು ನಿರ್ದೆಶಕರು ಹಾಗೂ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.
ಇತ್ತೀಚಿಗೆ ಬೇರೆ ಪತ್ರಕರ್ತರ ಸಂಘದ ನಿರ್ದೇಶಕರೊಬ್ಬರು ನೂತನ ಪತ್ರಕರ್ತರ ಸಂಘವನ್ನು ರದ್ದುಪಡಿಸಬೇಕೆಂದು ಸಹಕಾರ ಸಂಘಗಳ ಉಪನಿಬಂದಕರಿಗೆ ದೂರನ್ನು ಸಲ್ಲಿಸಿದ್ದರು.
ಇದೀಗ ಸಹಕಾರ ಸಂಘಗಳ ಉಪನಿಬಂದಕರು ಕೊಟ್ಟ ದೂರನ್ನು ಪರಿಶೀಲಿಸಿ ನೀವು ನೀಡಿದ ಕಾರಣಕ್ಕಾಗಿ ನೂತನ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವನ್ನು ರದ್ದುಪಡಿಸಲು ಅವಕಾಶವಿರುವುದಿಲ್ಲ ಎಂದು ದೂರು ಕೊಟ್ಟ ವ್ಯಕ್ತಿಗೆ ಹಿಂಬರಹ ನೀಡಿ ವಿಲೇಗೊಳಿಸಿದ್ದಾರೆ.
ಸಹಕಾರ ಸಂಘಗಳ ನೋಂದಣಿ ಕಾನೂನು ನಿಯಮಾನುಸಾರ ರಚನೆಯಾದ ಸಂಘಕ್ಕೆ ತೊಂದರೆಕೊಡುವ ಉದ್ದೇಶದ ದೂರಿಗೆ ಈಗ ಬೆಲೆ ಇಲ್ಲದಂತಾಗಿದೆ. ನೂತನ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಲೋಗೋ ವನ್ನು ಮಾನ್ಯ ಜಿಲ್ಲಾ ರಕ್ಷಣಾಧಿಕಾರಿಗಳು ಮೊನ್ನೆ ತಾನೇ ಪ್ರೆಸ್ ಟ್ರಸ್ಟ್ ಪತ್ರಿಕಾಭವನದಲ್ಲಿ ಅನಾವರಣಗೊಳಿಸಿದ್ದರು. ಇದೀಗ ಸತ್ಯಕ್ಕೆ ನ್ಯಾಯಕ್ಕೆ ಜಯ ಸಿಕ್ಕಂತಾಗಿದೆ.
ನೂತನ ಸಂಘದ ಪಧಾದಿಕಾರಿಗಳ ಸಂತಸ:
ಸಂಘದ ವ್ಯಾಟ್ಸಪ್ ಗ್ರೂಪ್ ನಲ್ಲಿ ನಿಜವಾದ ಕಾರ್ಯನಿರತ ಪತ್ರಕರ್ತರಿಗೆ ಜಯಸಿಕ್ಕಂತೆ ಆಗಿದೆ. ಸತ್ಯಕ್ಕೆ, ನ್ಯಾಯಕ್ಕೆ ಜಯಸಿಕ್ಕಿದೆ ಎಂದು ನೂತನ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಗಳು ಹಾಗೂ ಪಧಾದಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
Leave a Comment