ಶಿವಮೊಗ್ಗ ಹಂದಿ ಅಣ್ಣಿ ಕೊಲೆ; ಶರಣಾಗತಿಯಾದ ಆರೋಪಿಗಳ ಪೋಟೋ ವೈರಲ್ ಆಗಿದೆ ನೋಡಿ.....
ನಿನ್ನೆ ಚಿಕ್ಕ ಮಗಳೂರಿನ ಎಸ್ಪಿ ಕಚೇರಿಯಲ್ಲಿ ಶರಣಾಗತಿಯಾಗಿದ್ದ ಕಾಡಾ ಕಾರ್ತಿಕ್,ನಿತೀನ್, ಮದನ್, ಫಾರೂಕ್, ಆಂಜನೇಯ, ಚಂದನ್, ಮಧು, ಮಧು ಯಾನೆ ಕರಿಯ ಒಟ್ಟು 8 ಜನ ಆರೋಪಿಗಳನ್ನ ಮುಸುಕು ಹಾಕಿ ಕರೆದುಕೊಂಡು ಬರಲಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ವತನಿಖಾ ತಂಡದ ವಶದಲ್ಲಿ ಆರೋಪಿಗಳು ಇದ್ದಾರೆ
ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಶಿವಮೊಗ್ಗಕ್ಕೆ ಕರೆತರಲಾಗದೆ. ಎಸ್ಪಿ ಲಕ್ಷ್ಮೀಪ್ರಸಾದ್ ಈ ಮೊದಲೇ ಹೇಳಿದಂತೆ ಎರಡು ತನಿಖಾ ತಂಡಗಳು ಆರೋಪಿಗಳನ್ನು ಕರೆತರಲು ಚಿಕ್ಕಮಗಳೂರಿಗೆ ತೆರಳಿತ್ತು.
ವಶಕ್ಕೆ ಪಡೆದ ಶಿವಮೊಗ್ಗ ಪೊಲೀಸರು ಇದೀಗ ಆರೋಪಿಗಳನ್ನು ಜಯನಗರ ಪೊಲೀಸ್ ಠಾಣೆಯಲ್ಲಿ ಇರಿಸಿದ್ದಾರೆ. ಈ ಮಧ್ಯೆ ಆರೋಪಿಗಳನ್ನ ವಶಕ್ಕೆ ಪಡೆದ ಬೆನ್ನಲ್ಲೆ, ಜಯನಗರ ಠಾಣೆಗೆ ಡಿವೈಎಸ್ಪಿ ಬಾಲ್ರಾಜ್, ಅಡಿಶನಲ್ ಎಸ್ಪಿ ವಿಕ್ರಂ ಆಮ್ಟೆ ಹಾಗೂ ಕೊನೆಯಲ್ಲಿ ಎಸ್ಪಿ ಲಕ್ಷ್ಮೀಪ್ರಸಾದ್ ರವರು ಜಯನಗರ ಠಾಣೆಗೆ ಬೇಟಿ ನೀಡಿದ್ದಾರೆ.
ಇನ್ನೂ ಮಾಧ್ಯಮಗಳ ಜೊತೆಯಲ್ಲಿ ಮಾತನಾಡಿದ ಎಸ್ಪಿ ಲಕ್ಷ್ಮೀಪ್ರಸಾದ್ ಚಿಕ್ಕಮಗಳೂರಿನಲ್ಲಿ ಶರಣಾಗತಿ ದಾಖಲಾತಿ ಮುಗಿದಿದ್ದು, ಕೋರ್ಟ್ಗೆ ಪ್ರೊಡ್ಯೂಸ್ ಮಾಡಲಾಗಿತ್ತು. ಅದಾದ ಬಳಿಕ ಅಲ್ಲಿ ಅವರ ವಿರುದ್ಧ ಯಾವುದೇ ಕೇಸ್ಗಳಿಲ್ಲದ ಕಾರಣಕ್ಕೆ ಶಿವಮೊಗ್ಗ ಪೊಲೀಸ್ ಇಲಾಖೆ ಅವರನ್ನು ವಶಕ್ಕೆ ಪಡೆದುಕೊಂಡು ಶಿವಮೊಗ್ಗಕ್ಕೆ ಕರೆದುಕೊಂಡು ಬಂದಿದೆ. ಸದ್ಯ ಅವರನ್ನು ಬಂಧನ ಮಾಡಲಾಗುತ್ತದೆ.
24 ಗಂಟೆಯಲ್ಲಿ ಅವರನ್ನು ಬಂಧಿಸಿ ಕೋರ್ಟ್ಗೆ ನಾಳೆ ಪ್ರೊಡ್ಯೂಸ್ ಮಾಡಲಾಗುವುದು. ಆನಂತರ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆಯನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.
Leave a Comment