ಹಂದಿ ಅಣ್ಣಿ ಕೊಲೆ ಪಾತಕಿಗಳು ಚಿಕ್ಕಮಗಳೂರು ಎಸ್ಪಿ ಮುಂದೆ ಶರಣು:ಶಿವಮೊಗ್ಗ ಎಸ್ಪಿ ಲಕ್ಷ್ಮಿಪ್ರಸಾದ್ ಹೇಳಿಕೆ

ಚಿಕ್ಕಮಗಳೂರು: ಇತ್ತೀಚೆಗೆ ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣೆ ಬಳಿಯಲ್ಲಿ ಹಾಡಹಗಲೇ ನಟೋರಿಸ್ ರೌಡಿ ಹಂದಿ ಅಣ್ಣಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಗಳು ಇದೀಗ ಚಿಕ್ಕಮಗಳೂರು ಜಿಲ್ಲಾ ರಕ್ಷಣಾಧಿಕಾರಿಗಳ ಎದುರು ಶರಣಾಗಿದ್ದಾರೆಂದು ಜಿಲ್ಲಾರಕ್ಷಣಾಧಿಕಾರಿ ಲಕ್ಷ್ಮಿ ಪ್ರಸಾದ್ ಹೇಳಿದರು.
ಪ್ರೆಸ್ ಟ್ರಸ್ಟ್ ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂಧಿಗೆ ಮಾತನಾಡಿದರು.
 
ಕಾರ್ತಿಕ್, ನಿತಿನ್, ಮಧು, ಬಾಲು, ಆಂಜನೇಯ, ಮದನ್, ಮಧು, ಚಂದನ್ ಶರಣಾಗಿರುವ ಆರೋಪಿಗಳಾಗಿದ್ದಾರೆ. ವಶಕ್ಕೆ ಪಡೆದ ಬಳಿಕ ವಿಚಾರಣೆ ನಡೆಸಿದ ನಂತರ ಕೊಲೆಯ ಸತ್ಯಾಂಶ ಹೊರಬರಲಿದೆ ಎಂದು ಎಸ್ಪಿ ತಿಳಿಸಿದರು.   ಚಿಕ್ಕಮಗಳೂರು ಜಿಲ್ಲಾ ರಕ್ಷಣಾಧಿಕಾರಿ  ಅವರ ಮುಂದೆ ಕೋಟೆ ಠಾಣೆ ಎದುರು ಬಂದು ಶರಣಾಗಿದ್ದಾರೆ ಎಂದು ತಿಳಿಸಿದರು.

ಶರಣಾದ ಈ 8 ಮಂದಿ ಪಾತಕಿಗಳು ಹಂದಿ ಅಣ್ಣಿಯನ್ನ ತಾವೇ ಕೊಲೆ ಮಾಡಿದವರು ಎಂದು ತಪ್ಪೊಪ್ಪಿಕೊಂಡಿದ್ದಾರೆ  ಎನ್ನಲಾಗಿದ್ದು, ಈ ಕುರಿತು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ಅವರು ಮಾಹಿತಿ ನೀಡಿದ್ದಾರೆ.
 ಈಗಾಗಲೇ ಶಿವಮೊಗ್ಗ ಪೋಲೀಸರ ಎರಡು ತಂಡ ಚಿಕ್ಕಮಗಳೂರ ಗೆ ತೆರಳಿದ್ದು,  ಶರಣಾಗಿರುವ ಪಾತಕಿಗಳನ್ನ ಶಿವಮೊಗ್ಗ ತಂಡ ವಶಕ್ಕೆ ಪಡೆದು ಶಿವಮೊಗ್ಗ ಕ್ಕೆ ಕರೆತಂದು ದೀರ್ಘಕಾಲದ ವಿಚಾರಣೆಯನ್ನು ಮಾಡಲಾಗುತ್ತದೆ ಎಂದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.