ಶಿವಮೊಗ್ಗದಲ್ಲಿ ವಿನೋಬನಗರ ಚೌಕಿ ಬಳಿ ರೌಡಿ ಹಂದಿಯ ಭೀಕರ ಕೊಲೆ: ಬೆಚ್ಚಿಬಿದ್ದ ಶಿವಮೊಗ್ಗ ನಾಗರೀಕರು
ಶಿವಮೊಗ್ಗದ ಕುಖ್ಯಾತ ರೌಡಿ ಹಂದಿ ಅಣ್ಣಿಯನ್ನು ಹಾಡುಹಗಲೇ ಬೆಳಿಗ್ಗೆ ಸುಮಾರು 10-45 ನಂತರ ಪೊಲೀಸ್ ಠಾಣೆಯ ಸಮೀಪ ವಿನೋಬನಗರದ ಚೌಕಿ ಬಳಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿ ಕೊಲೆಗಡುಕರು ಪರಾರಿಯಾಗಿದ್ದಾರೆ.
ಇನ್ನೋವ ಕಾರಿನ ವಾಹನದಲ್ಲಿ ಬಂದ ನಾಲ್ಕೈದು ಜನರ ಗುಂಪು ಮಾರಕಾಸ್ತಗಳಿಂದ ತಲೆಗೆ ಕೊಚ್ಚಿ ಮಾಡಲಾಗಿದೆ. ತಲೆಯ ಮೇಲೆ ಭೀಕರವಾಗಿ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ.
ಶಿವಮೊಗ್ಗದ ರೌಡಿ ಲವಕುಶ ಮರ್ಡರ್ ಕೇಸ್ ನಲ್ಲಿ ಹಂದಿಹಣ್ಣಿ ಪ್ರಮುಖ ಆರೋಪಿಯಾಗಿದ್ದನು. 8 ಕ್ಕಿಂತ ಹೆಚ್ಚು ಕೊಲೆ ಪ್ರಕರಣಗಳು ಈತನ ಮೇಲಿದ್ದವು ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ. ಹಲಚು ಪ್ರಕರಣದಲ್ಲಿ ಹಂದಿಅಣ್ಣಿ ಭಾಗಿಯಾಗಿದ್ದನು.ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಹೆಚ್ಚಿನ ಮಾಹಿತಿಗಾಗಿ ಕಲೆ ಹಾಕಲಾಗುತ್ತಿದೆ.
ಶಿವಮೊಗ್ಗ ದಲ್ಲಿ ನಿಲ್ಲದ ಹಲ್ಲೆ ಮತ್ತು ಕೊಲೆ ಪ್ರಕರಣಗಳು. ಈ ಭೀಕರ ಕೊಲೆಯನ್ನು ನೋಡಿದ ಶಿವಮೊಗ್ಗ ಜನರು ಬೆಚ್ಚಿಬಿದ್ದಿದ್ದಾರೆ.
ಈತನೇ ರೌಡಿ ಹಂದಿ ಹಣ್ಣಿ. ಬೀಕರವಾಗಿ ಕೊಲೆಯಾದ ವ್ಯಕ್ತಿ. ಠಾಣೆಯ ಸಮೀಪ ಚೌಕಿ ಬಳಿ ಹಾಡುಹಗಲೇ ಭೀಕರವಾಗಿ ಹತ್ಯೆ ಮಾಡಲಾಗಿದೆ.
ಗೃಹ ಸಚಿವರ ತವರು ಜಿಲ್ಲೆಯಲ್ಲಿ ಈ ತರಹ ಭೀಕರ ಹತ್ಯೆ ಆಗಿರುವುದು ಜನರಲ್ಲಿ ಆತಂಕ ಮೂಡಿಸಿದೆ. ರೌಡಿಗಳಿಗೆ ಪೋಲಿಸರ ಭಯವಿಲ್ಲದಂತಾಗಿದೆ.
ಶಿವಮೊಗ್ಗದ ನಟೋರಿಯಸ್ ಅವಳಿ ರೌಡಿಗಳಾಗಿದ್ದ ಲವ-ಕುಶರನ್ನು ಶಿವಮೊಗ್ಗದ ಪ್ರವಾಸಿ ಮಂದಿರದ ಎದುರು 13 ವರ್ಷಗಳ ಹಿಂದೆ ಇದೇ ಹಣ್ಣಿ ಗ್ಯಾಂಗ್ ಕೊಚ್ಚಿ ಕೊಲೆ ಮಾಡುವ ಮೂಲಕ ಕ್ರೈಂ ಲೋಕದಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದ ಹಂದಿ ಅಣ್ಣಿ ಹಲವು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ರೌಡಿ ಲವಕುಶ ಕೊಲೆಯು ರಾಜ್ಯಾದ್ಯಂತ ಭಾರೀ ಸುದ್ದಿಯಾಗಿತ್ತು. ಜೈಲು ಶಿಕ್ಷೆ ಅನುಭವಿಸಿ ಬಂದಿದ್ದ. ಅಣ್ಣಿ ಕೊಲೆಗೆ ರಿಯಲ್ ಎಸ್ಟೇಟ್ ಸಂಬಂಧಿತ ವ್ಯಾಜ್ಯ ಕಾರಣ ಎನ್ನಲಾಗಿದೆ. ಅಥವಾ ರೀವೇಂಜ್ಎದುರಾಳಿ ರೌಡಿ ಗ್ಯಾಂಗಿನ ಕೃತ್ಯ ಇರಬಹುದು ಎಂದು ಶಂಕಿಸಲಾಗಿದೆ. ಅರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಒಂದೂವರೆ ವರ್ಷದ ಹಿಂದಷ್ಟೆ ಶಿವಮೊಗ್ಗದ ಸಿದ್ದೇಶ್ವರ ಸರ್ಕಲ್‌ನಲ್ಲಿ ಹಂದಿ ಅಣ್ಣಿಯ ಸಹೋದರನ ಕೊಲೆಯಾಗಿತ್ತು.
ಕೆಲಸ ವರ್ಷಗಳಿಂದ ತಣ್ಣಗಿದ್ದ ಶಿವಮೊಗ್ಗ ರೌಡಿಸಂ ಇದೀಗ ಮತ್ತೆ ಗರಿಗೇದರಿದೆ.

Leave a Comment