ಪತ್ರಿಕಾ ವಿತರಕನ ಕುಟುಂಬಕ್ಕೆ ಪತ್ರಕರ್ತರ ಸಂಘ, ಟ್ರಸ್ಟ್ ನೆರವು

ಶಿವಮೊಗ್ಗ,ಜು.11: ಸಾಗರದಲ್ಲಿ ಇತ್ತೀಚೆಗೆ ಅಪಘಾತದಲ್ಲಿ ಅಕಾಲಿಕ ಮರಣಕ್ಕೀಡಾದ  ಪತ್ರಿಕಾ ವಿತರಕ ಗಣೇಶ್ ಮನೆಗೆ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಪ್ರೆಸ್ ಟ್ರಸ್ಟ್‌ನ ಪದಾಧಿಕಾರಿಗಳು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಪತ್ರಕರ್ತರ ಸಂಘದ ಅಧ್ಯಕ್ಷರಾದ  ಗೋಪಾಲ್ ಯಡಗೆರೆ  ಕುಟುಂಬಕ್ಕೆ ವೈಯುಕ್ತಿಕವಾಗಿ ಆರ್ಥಿಕ ನೆರವನ್ನು ನೀಡಿದರೆ, ಪ್ರೆಸ್ ಟ್ರಸ್ಟ್ ವತಿಯಿಂದಲೂ ಆರ್ಥಿಕ ನೆರವು ನೀಡಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಕಾಚಿನಕಟ್ಟೆ, ಉಪಾಧ್ಯಕ್ಷ ಹುಲಿಮನೆ ತಿಮ್ಮಪ್ಪ, ಖಜಾಂಚಿ ಶಿವಮೊಗ್ಗ ನಂದನ್, , ಸಂಘದ ನಿರ್ದೇಶಕರಾದ ಆರಗ ರವಿ, ರಾಮಚಂದ್ರ ಗುಣಾರಿ, ಶಿವಮೊಗ್ಗ ನಾಗರಾಜ್, ಸ್ಪಂದನ ಚಂದ್ರ, ಲಿಯಾಖತ್, ಭರತ್ ಇದ್ದರು.
ಪ್ರೆಸ್ ಟ್ರಸ್ಟ್ ಅಧ್ಯಕರಾದ ಎನ್. ಮಂಜುನಾಥ್, ಖಜಾಂಚಿ ಜೇಸುದಾಸ್, ಹೊನ್ನಾಳಿ ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.