ಶಿವಮೊಗ್ಗ: ದುರ್ಗಿಗುಡಿಯಲ್ಲಿ ಮೆಸ್ಕಾಂಗೆ ಮಾಹಿತಿ ನೀಡದೇ ಖಾಸಗಿ ವ್ಯಕ್ತಿಯಿಂದ ಒಂದು ಗಂಟೆ ಕರೆಂಟ್ ಕಟ್! ಹೀಗೂ ಉಂಟೆ!!
ಶಿವಮೊಗ್ಗ: ಇಂದು ದುರ್ಗಿಗುಡಿ ಸರ್ಕಾರಿ ಶಾಲೆಯ ರಸ್ತೆಯಲ್ಲಿ ಸಂಜೆ ಸುಮಾರು 4 ಗಂಟೆಯಿಂದ 5 ಗಂಟೆಯವರೆಗೆ ಒಂದು ಗಂಟೆ ಕಾಲ ಮೆಸ್ಕಾಂ ಇಂಜಿನಿಯರ್ ಅಥವಾ ಮೇಸ್ತ್ರಿಗೆ ಯಾವುದೇ ಮಾಹಿತಿ ನೀಡದೇ ಖಾಸಾಗಿ ಇಂಜಿನಿಯರ್ ಕಾಮಗಾರಿ ವ್ಯಕ್ತಿ ಹೇಳಿದ ಎಂದು ಕರೆಂಟ್ ತೆಗೆದು ಕಾರ್ಮಿಕರು ಸ್ಮಾರ್ಟ್ ಸಿಟಿ ಕೇಬಲ್ ಬೋರ್ಡ್ ಕೆಲಸ ಮಾಡಿದ ಘಟನೆ ನಡೆದಿದೆ.
ಶಿವಮೊಗ್ಗದ ದುರ್ಗಿಗುಡಿಯಲ್ಲಿ ಸ್ಮಾರ್ಟ್ ಸಿಟಿ ಭೂಗತ ಕೇಬಲ್ ಎಲೆಕ್ಟ್ರಿಕ್ ಬೋರ್ಡ್ ಕಾಮಗಾರಿ ಕೆಲಸ ಮಾಡುವ ಸಂದರ್ಭದಲ್ಲಿ ಖಾಸಾಗಿ ವ್ಯಕ್ತಿ ಗೆ ಕರೆಂಟ್ ಹೊಡೆದು ಸ್ವಲ್ಪದರಲ್ಲೇ ಪಾರಾದ ಘಟನೆ ನಡೆದಿದೆ.ಹಲವು ಕಡೆ ಕರೆಂಟ್ ಶಾಕ್ ಆಗಿದೆ. ಮೆಸ್ಕಾಂ ಗಮನಕ್ಕೆ ತರದೇ ಇವರ ಇಷ್ಟಕ್ಕೆ ತಕ್ಕಂತೆ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರಿಗೆ ಏನಾದರೂ ತೊಂದರೇ ಆಗಿದ್ದರೇ ಇದರ ಹೊಣೆ ಹೊರುವವರು ಯಾರು. ಒಂದು ಗಂಟೆ ಕರೆಂಟ್ ಕಟ್ ಮಾಡಿದ ಲುಕ್ಸಾನು ಮೆಸ್ಕಾಂ ಗೆ ಕೊಡುವವರು ಯಾರು? ಬೇಜವಾಬ್ದಾರಿತನದ ಕೆಲಸ ನಡೆಯುತ್ತಿದೆ.
ಸ್ಥಳೀಯರು ಸದರಿ ಏರಿಯಾದಲ್ಲಿ ಕರೆಂಟ್ ಇಲ್ಲ ಅಂತಾ ಮೆಸ್ಕಾಂ ಇಂಜಿನಿಯರ್ಗೆ ಮತ್ತು ಮೆಸ್ಕಾಂ ದೂರವಾಣಿ ಕರೆಗೆ ಮಾಹಿತಿ ನೀಡಿದಾಗ ಈ ಪ್ರಕರಣ ಹೊರಬಿದ್ದಿದೆ.
ಮೇಸ್ತ್ರಿ ಶ್ರೀನಿವಾಸ್ ರವರು ಕೇಬಲ್ ಎಲೆಕ್ಟ್ರಿಕ್ ಬೋರ್ಡ್ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ತರಾಟೆಗೆ ತೆಗೆದುಕೊಂಡರು. ಯಾರನ್ನ ಕೇಳಿ ಕರೆಂಟ್ ತೆಗೆದಿದ್ದಿರಾ? ನಿಮಗೆ ಕರೆಂಟ್ ಚಾರ್ಜ್ ಮಾಡಿಕೊಂಡು ಬೋರ್ಡ್ ನಲ್ಲಿ ಕೆಲಸ ಮಾಡಲು ಹೇಳಿದವರು ಯಾರು? ಎಂದು ಬೈದು..ಮಾಡುತ್ತಿದ್ದ ಕೆಲಸ ನಿಲ್ಲಿಸಿ ಮೆಸ್ಕಾಂ ನ ಮೇಲಾಧಿಕಾರಿಗಳಿಗೆ ಗಮನಕ್ಕೆ ತಂದಿರುತ್ತಾರೆ.
ಈ ರೀತಿಯ ಘಟನೆಗಳು ಮರುಕಳುಹಿಸದಂತೆ ಮೆಸ್ಕಾಂ ಇಂಜಿನಿಯರ್ ಗಳು ಸ್ಮಾರ್ಟ್ ಸಿಟಿ ಕಂಟ್ರಾಕ್ಟರ್ ಗಳಿಗೆ ಮೂಗುದಾರ ಹಾಕುವರೇ ಎಂಬುದನ್ನು ಕಾದು ನೋಡ ಬೇಕಾಗಿದೆ.
ಮೆಸ್ಕಾಂ ಗೆ ಮಾಹಿತಿ ನೀಡದೇ ಇಂದು ಒಂದು ಗಂಟೆ ಅವಧಿ ಕರೆಂಟ್ ತೆಗೆದ ಘಟನೆಗೆ ತಪ್ಪತಸ್ಥರು ಯಾರು? ಎಂಬುದನ್ನು ಪತ್ತೆಹಚ್ಚಿ ಅಂತಹವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಸೆಯಾಗಿದೆ.

Leave a Comment