ಪೊಲೀಸ್ ನೌಕರರ ವಸತಿ ಸಂಘದಿಂದ ದುಮ್ಮಳ್ಳಿಯಲ್ಲಿನ ನಿವೇಶನ ಹಂಚಿಕೆ ವಿಳಂಬ: ಪೊಲೀಸ್ ಸಿಬ್ಬಂದಿಗಳ ಅಸಮಧಾನ-ಆಕ್ರೋಶ

ಶಿವಮೊಗ್ಗ:  ಶಿವಮೊಗ್ಗ ಜಿಲ್ಲಾ ಪೊಲೀಸ್ ಮತ್ತು ಇತರೇ ನೌಕರರ ವಸತಿ ಸಂಘದಿಂದ ಶಿವಮೊಗ್ಗ ಹೊರವಲಯದ ದುಮ್ಮಳ್ಳಿಯಲ್ಲಿ ನಿವೇಶನ ಕೊಡುವುದಾಗಿ ಸುಮಾರು 5 ವರ್ಷದ ಹಿಂದೇ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಗಳಿಂದ  ಮತ್ತು ಇತರೇ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಂದ ನಗದು ಹಣವನ್ನು ಕಟ್ಟಿಸಿಕೊಂಡಿದ್ದು, ಇದುವರೆಗೂ ನಿವೇಶನ ಮಂಜೂರು ಮಾಡದೇ ಇರುವುದಕ್ಕೆ ಇಂದು ನಿವೇಶನದಾರರು ವಸತಿ ಸಂಘದ ಅದ್ಯಕ್ಷರಾದ ಪೊಲೀಸ್ ಅಧಿಕಾರಿಗಳಿಗೆ ಮತ್ತು ನಿರ್ದೇಶಕರಿಗೆ ತರಾಟೆ ತೆಗೆದುಕೊಂಡು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಇಂದು ಬೆಳಿಗ್ಗೆ ಶಿವಮೊಗ್ಗ ನಗರದ ಡಿ.ಎ.ಆರ್ ಸಭಾಂಗಣದಲ್ಲಿ ದುಮ್ಮಳ್ಳಿಯಲ್ಲಿ ನಿವೇಶನಕ್ಕಾಗಿ ಹಣಕಟ್ಟಿ ಅರ್ಜಿ ಸಲ್ಲಿಸಿದ ನಿವೇಶನದಾರರ ಕುಂದುಕೊರತೆಗಳ ಸಭೆ ಕರೆಯಲಾಗಿತ್ತು.

ಬೆಳಿಗ್ಗೆ ಯಿಂದ ಮಧ್ಯಾಹ್ನ ದವರೆಗೆ ನಿವೇಶನದಾರರ ಸಭೆನಡೆಯಿತು.ಸಾಕಷ್ಟು ಜನರು ಹಣ ಕಟ್ಟಿದ ನಿವೇಶನದಾರರು ಸಭೆಯಲ್ಲಿ ಪಾಲ್ಗೊಂಡಿದ್ದರು.   ಸುಮಾರು 200 ಜನರು ಪೊಲೀಸ್ ಮತ್ತು ಇತರೇ ಸಿಬ್ಬಂದಿಗಳು ನಿವೇಶನಕ್ಕಾಗಿ ಅರ್ಜಿಸಲ್ಲಿಸಿದ್ದು, ಈಗಾಗಲೇ 5 ವರ್ಷದ ಹಿಂದೇ ಸುಮಾರು 3 ಲಕ್ಷದಿಂದ 5 ಲಕ್ಷದವರೆಗೆ ನಗದು ಹಣವನ್ನು ಸಾಲಸೂಲ ಮಾಡಿ ನಿವೇಶನ ಸಿಗುತ್ತದೆ ಅಂತಾ ಕಟ್ಟಿದ್ದರೆ ಇದುವರೆಗೆ ನಿವೇಶನ ಮಂಜೂರು  ಮಾಡಿಲ್ಲ.ಬರೀ ಸಬೂಬು ಹೇಳುತ್ತಾರೆ ಎಂಬ ಆರೋಪ ಹಲವರಿಂದ ಕೇಳಿಬಂದವು.
ಈ ಬಗ್ಗೆ 3-4 ಬಾರಿ ಸಭೆ ನಡೆದರೂ ನಿವೇಶನ ಹಂಚಿಕೆ ವಿಳಂಬವಾಗುತ್ತಿರುವ ಬಗ್ಗೆ ಸಂಬಂದಪಟ್ಟವರ ಗಮನಕ್ಕೆ ತಂದರೂ ಉಪವಾಗಿಲ್ಲವೆಂದು ಜಿಲ್ಲೆಯ ಮಹಿಳಾ ಪೊಲೀಸರು ಮತ್ತು ಇತರೇ ಪೊಲೀಸರು ಹಾಗೂ ಇತರೇ ನೌಕರರು  ಪೊಲೀಸ್ ವಸತಿ ಸಂಘದ ನಿರ್ದೆಶಕರ ಎದುರು ಕಣ್ಣೀರು ಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದ ದೃಶ್ಯ ಕಂಡು ಬಂದಿತು.ಪೊಲೀಸ್ ವಸತಿ ಸಂಘದ ಡೈರೆಕ್ಟರ್ ಗಳನ್ನು ಬದಲಾವಣೆ ಮಾಡಬೇಕು ಎಲೆಕ್ಷನ್ ಮಾಡಿ ನೂತನವಾಗಿ ಆಯ್ಕೆ ಮಾಡಲೀ ಎಂಬ ಕೂಗು ಕೇಳಿಬರುತ್ತಿತ್ತು.ಮತ್ತು ಸೆಕ್ರೆಟರಿ ಬದಲಾವಣೆಯ ಮಾಡಬೇಕು ಎಂಬ ಕೂಗು ಕೇಳಿ ಬಂದಿದೆ. ಪೋಲೀಸರಿಗೆ ನ್ಯಾಯ ಸಿಗದೇ ಪರದಾಡುವಂತೇ ಆಗಿದೆ.ಪೊಲೀಸರಿಗೆ ಈ ಗತಿಯಾದರೇ ಏನು ಎಂದು ಕೆಲವರು ಬೇಸರ ವ್ಯಕ್ತಪಡಿಸಿದರು.
ಈಗಾಗಲೇ ಪೊಲೀಸರು ಕೆಲವರು ಈಗಾಗಲೇ ನಿವೃತ್ತಿ ಯಾಗಿದ್ದಾರೆ. ನಿವೇಶನ ಸಿಕ್ಕಿಲ್ಲ.ಕೆಲವರು ನಿವೇಶನ ಕೊಡಿ ನಿಮಗೆ ಸಾದ್ಯವಾಗದೇ ಇದ್ದರೇ ನಮ್ಮ ದುಡ್ಡು ನಮಗೆ ವಾಪಾಸು ಕೊಡಿ ಎಂದು ಒತ್ತಾಯ ಮಾಡುತ್ತಿದ್ದರು.
 *200 ಜನರಿಂದ ನಿವೇಶನಕ್ಕೆ ಅರ್ಜಿ. ಆದರೇ ಅಲ್ಲಿರುವುದು ಕೇವಲ 94 ನಿವೇಶನ ಎಂದು ವಸತಿ ಸಂಘದಿಂದ ಸ್ಪಷ್ಟತೆ;* 
https://youtu.be/vZ-BoSI8m4k ವಿಡಿಯೋ ನೋಡಿ

ಇದೀಗ ದುಮ್ಮಳ್ಳಿಯಲ್ಲಿ  ಕೇವಲ 94 ನಿವೇಶನವಿದೆ. ಅದನ್ನು ಬೇಕಾದರೆ ಅಲಾಟ್ ಮಾಡಬಹುದು ಎಂದು ಸಂಘದ ನಿರ್ದೇಶಕರು ಮತ್ತು ಬಿಲ್ಡರ್ ಗಳು ಹೇಳುತ್ತಿದ್ದಾರೆ.ನಿವೇಶನಕ್ಕಾಗಿ ಮುಂಗಡ ಹಣ ಕಟ್ಟಿದ 200 ಜನಕ್ಕೂ ನಮಗೆ ಸೈಟ್ ಕೊಡಿ ಎಂದು ಗಲಾಟೆ ನಡೆಯುತ್ತಿತ್ತು. ಕೆಲವು ನಿವೇಶನಗಳನ್ನು ಇಬ್ಬರೂ ಬಿಲ್ಡರ್ ಗಳು ಮತ್ತು ಜಮೀನು ಕೊಟ್ಟ ರೈತರು ಹೆಚ್ಚಿಗೆ ಹಣಕ್ಕಾಗಿ ಮಾರಾಟ ಮಾಡಿದ್ದಾರೆ ಎಂದು ಕೆಲವರ ಆರೋಪವಾಗಿದೆ‌.ಇಲ್ಲಿ ನಿವೇಶನ ನಿರ್ಮಾಣದಲ್ಲಿ ಏನೋ ಗೋಲ್ಮಾಲ್ ಆಗಿದೆ ಎಂಬ ವಾಸನೆ ಕೇಳಿ ಬರುತ್ತಿದೆ. ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಈ ಬಗ್ಗೆ ತನಿಖೆ ಮಾಡಿದರೇ ಸತ್ಯಾಂಶ ಹೊರಬರುತ್ತದೆ ಎಂದು ನೊಂದ ನಿವೇಶನ ಆಕಾಂಕ್ಷಿಗಳ ಅಳಲಾಗಿರುತ್ತದೆ.

 ಶಿವಮೊಗ್ಗ ಹೊರವಲಯದ ಮಾಚೇನಹಳ್ಳಿ ಪೊಲೀಸ್ ವಸತಿ ಸಂಘದ ನಿವೇಶನ ಹಂಚಿಕೆ ಸಹ ಗೊಂದಲಮಯ! ಕೆಲವರು ನಿವೇಶನ ಒತ್ತುವರಿಗೆ ಪ್ರಯತ್ನ!
ಪೊಲೀಸ್ ಇಲಾಖೆಯಿಂದ ವಸತಿ ಸಂಘದಿಂದ ಹಲವು ವರ್ಷಗಳ ಹಿಂದ ಮಾಚೇನಹಳ್ಳಿಯಲ್ಲಿ ನಿವೇಶನ ಮಾಡಿ ಹಂಚಿಕೆ ಮಾಡಿದ್ದರು. ಇದೀಗ ಕೆಲವರು ಈಗಾಗಲೆ ಮೃತಪಟ್ಟಿದ್ದಾರೆ.ನಿವೇಶನ ಖಾಲಿ ಇದೆ. ಕೆಲವರು ನಮ್ಮ ಜಾಗ ಅಂತಾ ಹೇಳುತ್ತಿದ್ದಾರೆ. ಗ್ರಾಮಪಂಚಾಯಿತಿಯವರು ನಮ್ಮ ಜಾಗ ಅಂತಾ ಒತ್ತುವರಿ ಮಾಡಲು ಪ್ರಯತ್ನ ಮಾಡುತ್ತಿದ್ದಾರೆಂದು ಪೊಲೀಸರ ಆರೋಪವಾಗಿದೆ. ಮಾಚೇನಹಳ್ಳಿಯಲ್ಲಿ ಸಹ ನಿವೇಶನ ಹಂಚಿಕೆ ಸರಿಮಾಡಿಲ್ಲ. ಗೊಂದಲ ಗದ್ದಲ ಇದೆ ಸರಿಪಡಿಸಲು ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳಿಗೆ ಗಮನಕ್ಕೆ ತಂದರೂ ಇನ್ನು ಸಮಸ್ಯೆ ಬಗೆಹರಿದಿಲ್ಲ.ಪೊಲೀಸ್ ವಸತಿ ನಿವೇಶನ ದ ಜಾಗ ಒತ್ತುವಾರಿಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಕೆಲವು ಪೊಲೀಸರು ಎರಡು ಮೂರು ನಿವೇಶನಕ್ಕೆ ತಾವೇ ಬೇಲಿ ಹಾಕಿಕೊಂಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಈ ಬಗ್ಗೆ ಶಿವಮೊಗ್ಗ ಇಲಾಖೆಯ ಜಿಲ್ಲಾ ರಕ್ಷಣಾಧಿಕಾರಿಗಳಾದ ಲಕ್ಷ್ಮಿ ಪ್ರಸಾದ್ ರವರು ಸಭೆ ಕರೆದು ವಿಚಾರಣೆ ಮಾಡಿ ತನಿಖೆ ಮಾಡಿದರೇ ನಿವೇಶನ ದಾರರಿಗೆ ನ್ಯಾಯಸಿಗಬಹುದು ಎಂಬುದು ಆಶಯವಾಗಿರುತ್ತದೆ‌.

ನಮ್ಮ ಶಿವಮೊಗ್ಗ ಜಿಲ್ಲೆಯವರೇ ಆದ  ಗೃಹ ಸಚಿವರಾದ ಅರಗಜ್ಞಾನೇಂದ್ರ ರವರು ಹಣ ಕಟ್ಟಿದ ನಿವೇಶನದಾರರ ಸಭೆಯನ್ನು ಕರೆದು, ಈ ಬಗ್ಗೆ ಗಮನಹರಿಸಿ ಸಮಸ್ಯೆ ಬಗೆಹರಿಸಲು ಮತ್ತು ನೊಂದ ಪೊಲೀಸ್ ಸಿಬ್ಬಂದಿಗಳಿಗೆ ನ್ಯಾಯಯುತವಾಗಿ ನಿವೇಶನ ದೊರೆಯುವುದಕ್ಕೆ ಸೂಕ್ತ ಕ್ರಮಕೈಗೊಳ್ಳಲಿ ಎಂಬುದು ಒತ್ತಾಸೆಯಾಗಿದೆ. ಮುಂದೇನಾಗುವುದು ಕಾದು ನೋಡುವ...

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.