ಇದು ಶಿವಮೊಗ್ಗ ಸ್ಮಾರ್ಟ್ ಸಿಟಿನಾ? ನೋಡಿ.. ರಾತ್ರಿ ಕೇವಲ 2 ಗಂಟೆ ಅವಧಿ ಮಳೆಗೆ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ನೀರು:ಸ್ಮಾರ್ಟ್ ಅಧಿಕಾರಿಗಳೇ ಕಣ್ತೆರೆದು ನೋಡಿ..
ಶಿವಮೊಗ್ಗ: ನಗರದಲ್ಲಿ ನಿನ್ನೆ ರಾತ್ರಿ ಧಾರಾಕಾರ ಮಳೆಯಾಗಿದ್ದು, ಅಣ್ಣಾನಗರದ ತಗ್ಗು ಪ್ರದೇಶಗಳಾದ ಮೂರನೇ ತಿರುವಿನಲ್ಲಿ ಹಲವು ಮನೆಗಳಿಗೆ ರಾತ್ರಿ 3 ಗಂಟೆ ಸಮಯದಲ್ಲಿ ನೀರು ನುಗ್ಗಿ ನಿವಾಸಿಗಳು ಮತ್ತು ಮನೆಯವರು ಪರದಾಡುವಂತಾಗಿತ್ತು.
ಅಲ್ಲಿನ ನಿವಾಸಿಗಳ ಪ್ರಕಾರ, ಇತ್ತೀಚಿನ ನಾಲ್ಕೈದು ವರ್ಷಗಳಿಂದ ಸಣ್ಣ ಮಳೆಗೂ ಮನೆಗಳಿಗೆ ನೀರು ನುಗ್ಗುತ್ತಿದ್ದು, ಅವೈಜ್ಞಾನಿಕ ಕಾಮಗಾರಿಗಳೇ ಇದಕ್ಕೆ ಕಾರಣವಾಗಿದೆ. ಕಳೆದ ವರ್ಷ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟವಾಗಿತ್ತು. ಎಲೆಕ್ಟ್ರಾನಿಕ್ ಉಪಕರಣಗಳು, ಮಕ್ಕಳ ಶಾಲಾ ಪುಸ್ತಕಗಳು ಸೇರಿದಂತೆ, ದಿನಸಿ ಅಗತ್ಯವಸ್ತುಗಳು ಸಂಪೂರ್ಣ ಹಾನಿಗೊಳಗಾಗಿದ್ದು, ಆಗ ಕೇವಲ 10 ಸಾವಿರ ರೂ. ಕೆಲವರಿಗೆ ನೀಡಿದ್ದು ಬಿಟ್ಟರೆ ಬೇರೆ ಯಾವ ಪರಿಹಾರವೂ ಸಿಕ್ಕಿಲ್ಲ. ಮೇ ತಿಂಗಳಲ್ಲಿ ಸುರಿದ ಭಾರಿ ಮಳೆಗೂ ನೀರು ನುಗ್ಗಿತ್ತು. ರಾತ್ರಿಯಿಡಿ ನಿದ್ದೆಯಿಲ್ಲದೇ ಕಾಲ ಕಳೆದಿದ್ದೆವು. ಪಾಲಿಕೆಯ ಕಂದಾಯ ಅಧಿಕಾರಿಗಳು ಹಾನಿಯ ಅಂದಾಜು ಪಟ್ಟಿ ಸಿದ್ಧಪಡಿಸಿಕೊಂಡು ಹೋಗಿದ್ದು ಬಿಟ್ಟರೆ ಯಾವುದೇ ಪರಿಹಾರ ಬಂದಿಲ್ಲ ಎಂದು ದೂರಿದರು.
ನಿನ್ನೆ ರಾತ್ರಿ ಮತ್ತೆ ಧಾರಾಕಾರ ಮಳೆಯಾದ ಕಾರಣ ಎಲ್ಲರ ಮನೆಗಳಿಗೂ ನಾಲ್ಕು ಅಡಿಗಳಷ್ಟು ನೀರು ಬಂದಿದೆ. ಮಕ್ಕಳು, ವೃದ್ಧರು, ಮಹಿಳೆಯರು, ರೋಗಿಗಳು ತೊಂದರೆ ಅನುಭವಿಸುವಂತಾಗಿದೆ. ನಿವಾಸಿಗಳು ಮನೆಯಿಂದ ನೀರು ಹೊರಹಾಕುವಲ್ಲಿ ಹೈರಾಣಾಗಿದ್ದಾರೆ.
ಮಳೆ ನೀರು ಮನೆಗಳಿಗೆ ನುಗ್ಗಿದ್ದರಿಂದ ಲಕ್ಷಾಂತರ ರೂ. ಹಾನಿಯಾಗಿದೆ. ದುರಂತವೆಂದರೆ ಅಣ್ಣಾನಗರದ ಮೂರನೇ ಕ್ರಾಸ್ ನ ಬಲಭಾಗ ಬಿಜೆಪಿ ಪಾಲಿಕೆ ಸದಸ್ಯ ವಿಶ್ವನಾಥ್ ಅವರಿಗೆ ಸೇರಿದರೆ, ಎಡಭಾಗದಲ್ಲಿ ಕಾಂಗ್ರೆಸ್ ನ ಮಂಜುಳಾ ಶಿವಣ್ಣ ಪಾಲಿಕೆ ಸದಸ್ಯರಾಗಿದ್ದಾರೆ. ಇಬ್ಬರೂ ಸ್ಥಳಕ್ಕೆ ಬಂದಿಲ್ಲ. ಪಾಲಿಕೆ ಅಧಿಕಾರಿಗಳ ಸುಳಿವೇ ಇಲ್ಲ ಎಂದು ದೂರಿದರು.
ನಮಗೆ 10 ಸಾವಿರ ರೂ. ಪರಿಹಾರ ಬೇಡ. ಮೆಗ್ಗಾನ್ ಆಸ್ಪತ್ರೆಯ ತ್ಯಾಜ್ಯದಿಂದ ಹಿಡಿದು ಪೊಲೀಸ್ ಕ್ವಾಟ್ರಸ್ ಹೆಲಿಪ್ಯಾಡ್ ವೃತ್ತದಿಂದ ಎಲ್ಲಾ ತ್ಯಾಜ್ಯವೂ ದೊಡ್ಡ ಚಾನಲ್ ನಿಂದ ಸಣ್ಣ ಮೋರಿಗೆ ಹರಿಯುತ್ತಿರುವುದರಿಂದ ೀ ರೀತಿಯ ಸಮಸ್ಯೆ ತಲೆದೋರಿದೆ. ನಮಗೆ ಶಾಶ್ವತ ಪರಿಹಾರ ಒದಗಿಸಿಕೊಡಬೇಕೆಂದು ಆಗ್ರಹಿಸಿದರು.
ಅದೇ ರೀತಿ ಬೆಂಕಿನಗರದ ಕೆಲವು ಭಾಗಗಳಲ್ಲಿ ಯುಜಿಡಿ ನೀರು ಮನೆಗಳಿಗೆ ನುಗ್ಗಿದ್ದು, ಒಳಚರಂಡಿ ಮಂಡಳಿಯ ಅವೈಜ್ಞಾನಿಕ ಕಾಮಗಾರಿಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಮತ್ತು ಸ್ಮಾರ್ಟ್ ಸಿಟಿ ಅವೈಜ್ಞಾನಿಕ ಕಾಮಗಾರಿಯಿಂದ ಪದೇ ಪದೇ ಈ ರೀತಿಯ ತೊಂದರೆಗಳಾಗುತ್ತಿದ್ದು, ಮಹಾನಗರ ಪಾಲಿಕೆ ಆಯುಕ್ತರು ಮತ್ತು ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂತ್ರಸ್ಥರು ಆಗ್ರಹಿಸಿದ್ದಾರೆ.,
ಮತ್ತೆ ಗೋಪಾಳ ಗೌಡ ಬಡಾವಣೆಯ ಎ ಬ್ಲಾಕ್ ಮತ್ತು ಸಿ ಬ್ಲಾಕ್ ಬಡಾವಣೆಯ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಅಲ್ಲಿಯ ಜನರು ಮನೆಯಲ್ಲಿ ತುಂಬಿದ ನೀರನ್ನುಬಹೊರಗೆ ಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಗಮನಕ್ಕೆ ತಂದರೂ ಉಪಯೋಗ ವಾಗಿಲ್ಲ ಎಂದು ಆರೋಪಿಸಿದರು.
ಒಂದೆರಡು ಗಂಟೆ ಮಳೆ ಬಂದರೇ ಸಾಕು ರಾಜಕಾಲುವೆ ತುಂಬಿ ರಸ್ತೆಯಲ್ಲಿ 4 ಅಡಿ ನೀರು, ಮನೆಗೆ ನೀರು ನುಗ್ಗಿ ಬರುತ್ತದೆ.ಸಂಪಿನಲ್ಲಿ ಚರಂಡಿ ನೀರು ಹೋಗುತ್ತದೆ ಎಂದು ಪಾಲಿಕೆ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಗೋಪಾಲಗೌಡ ಬಡಾವಣೆಯ ತಗ್ಗು ಪ್ರದೇಶಗಳಲ್ಲಿ ಮನೆಗೆ ನೀರು ನುಗ್ಗಿರುವ ಬಗ್ಗೆ ಪಾಲಿಕೆ ಇಂಜಿನಿಯರ್ ಜಯಶೀಲರವರ ಗಮನಕ್ಕೆ ತಂದಾಗ ಅವರು ಎಇಇ ಶಾಂತಯ್ಯ, ಮತ್ತು Pwd ಬೊಮ್ಮಣ್ಣ ರವರೋಂಧಿಗೆ ಸ್ಥಳಕ್ಕೆ ಆಗಮಿಸಿ . ರಾಜಕಾಲುವೆ ಹಾದುಹೋಗುವ ಜಾಗವನ್ನು ಪರಿಶೀಲಿಸಿದರು. ಶಾಶ್ವತವಾಗಿ ಈ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.
ಹಾಗೇಯೇ ಶಿವಮೊಗ್ಗ ನಗರದ ನ್ಯೂ ಮಂಡ್ಲಿಯಲ್ಲಿ ದಿಗಂತ ಮುದ್ರಣ ಇದೆ. ಇಲ್ಲಿ ಹಲವಾರು ದಿನಪತ್ರಿಕೆಗಳು ಪ್ರತಿದಿನ ಮುದ್ರಣ ವಾಗುತ್ತದೆ. ಹೊಸ ದಿಗಂತ ದಿನಪತ್ರಿಕೆ ಸಹ ಅಲ್ಲಿಯೇ ಪ್ರಿಂಟಿಂಗ್ ಆಗುತ್ತದೆ. ಈ ಹಿಂದೆ ಪ್ರಿಂಟಿಂಗ್ ಯೂನಿಟ್ ಜಾಗಕ್ಕೆ ನೀರು ನುಗ್ಗಿತ್ತು. ಈ ಬಗ್ಗೆ ಪಾಲಿಕೆ ಅಧಿಕಾರಿಗಳ ಗಮನಕ್ಕೆ ಮತ್ತು ಮೇಯರ್ ಗಮನಕ್ಕೆ ತಂದರೂ ಸಹ ಸಮಸ್ಯೆ ಬಗೆಹರಿದಿಲ್ಲ.ಪ್ರಿಂಟಿಂಗ್ ಪ್ರೆಸ್ ಗೆ ಚರಂಡಿ ಮತ್ತು ಮಳೆ ನೀರು ನುಗ್ಗಿದೆ ನೋಡಿ. ಪೇಪರ್ ನವರ ಪರಿಸ್ಥಿತಿ ಈಗಾದರೇ ಹೇಗೆ..ಸಾಮಾನ್ಯ ಜನರ ಪಾಡೇನು?
ದಿನಪತ್ರಿಕೆಗಳನ್ನು ಮುದ್ರಣ ಮಾಡುವ ದಿಗಂತ ಮುದ್ರಣಕ್ಕೆ ಕಳೆದ ಮೂರು ದಿನಗಳಲ್ಲಿ ಎರಡನೇ ಬಾರಿ ಮುದ್ರಣಾಲಯಕ್ಕೆ ನೀರು ನುಗ್ಗಿ ಬಹಳ ಅನಾಹುತವಾಗಿದೆ.
ಮಹಾನಗರ ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ಮೊದಲನೇ ಬಾರಿ ನೀರು ನುಗ್ಗಿದಾಗ ತಿಳಿಸಲಾಗಿತ್ತು .
ಮಂಡಳಿ ಭಾಗದಲ್ಲಿ ಹರಿಯುವ ನೀರು ಚರಂಡಿಗಳು ಹಾಳಾಗಿದ್ದು ಕೆಲವು ಚರಂಡಿಗಳು ಮುಚ್ಚು ಹೋಗಿದ್ದು ಇಷ್ಟೆಲ್ಲ ಅನಾಹುತಕ್ಕೆ ಕಾರಣ.
ಈ ಬಗ್ಗೆ ಪಾಲಿಕೆ ಅಧಿಕಾರಿಗಳೊಂದಿಗೆ ಕಳೆದು 48 ಗಂಟೆಗಳಿಂದ ಸತತವಾಗಿ ತಿಳಿಸಲಾಗಿದ್ದರು ತೆಗೆದುಕೊಳ್ಳಬಹುದಾದ ಕ್ರಮ ಕೈಗೊಳ್ಳದೆ ಈ ರೀತಿಯ ಅನಾಹುತಗಳಿಗೆ ಕಾರಣವಾಗಿದೆ.
ಪಾಲಿಕೆ ಅಧಿಕಾರಿಗಳ ನಿರ್ಲಕ್ಷತೆಯಿಂದಾಗಿ ಪ್ರಿಂಟಿಂಗ್ ಪ್ರೆಸ್ ಗೆ ಅಪಾರ ಪ್ರಮಾಣದ ಹಾನಿಯಾಗಿದೆ . ನೋಡಿದರೆ ಬಹಳ ಬೇಸರ ತರಿಸುತ್ತೆ.ಇದು ಸ್ಮಾರ್ಟ್ ಸಿಟಿನಾ?
ಈ ಬಗ್ಗೆ ನಾನು ನಮ್ಮ ಹಲೋ ಶಿವಮೊಗ್ಗ ದಿನಪತ್ರಿಕೆ ವತಿಯಿಂದ ನೀರು ನುಗ್ಗಿರುವ ಬಗ್ಗೆ ನಮ್ಮ ಜಿಲ್ಲಾಧಿಕಾರಿಗಳ ಗಮನ ಸೆಳೆದಾಗ ತಕ್ಷಣ ಸ್ಪಂದಿಸಿ ಪಾಲಿಕೆ ಅಧಿಕಾರಿಗಳಿಗೆ ಸಮಸ್ಯೆ ಬಗಹರಿಸಲು ತಿಳಸಿರುವುವುದಾಗಿ ಹೇಳಿದರು.
ಪಾಲಿಕೆ ಮೇಯರ್ ಮತ್ತು ಕಮೀಷನರ್ ಶಿವಮೊಗ್ಗದಲ್ಲಿ ಇದ್ದಾರಾ? ಅವರು ಏನಿದ್ದರೂ ಕಾರ್ಯಕ್ರಮ ಗಳಲ್ಲಿ ಬ್ಯೂಸಿ!!
ಮೇಯರ್ ಸುನೀತಾ ಅಣ್ಣಪ್ಪ ರವರೇ, ಮತ್ತು ಕಮೀಷನವರೇ, ಇದು ಶಿವಮೊಗ್ಗ ಸ್ಮಾರ್ಟ್ ಸಿಟಿನಾ? ತಮ್ಮ ಕಣ್ತೆರದು ನೋಡಿ .. ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ವಾರ್ಡ್ ಗಳಲ್ಲಿ ಸುತ್ತಾಡಿ ಮನೆಗಳಿಗೆ ಮಳೆನೀರು ನುಗ್ಗಿರುವ ಜನರ ಸಮಸ್ಯೆಗಳನ್ನು ಕಷ್ಟ ನಷ್ಟಗಳನ್ನು ಆಲಿಸುವ ಬದಲು ಸ್ಟೇಜ್ ಕಾರ್ಯಕ್ರಮಕ್ಕೆ ಸೀಮಿತವಾದಂತೆ ಕಂಡು ಬರುತ್ತದೆ. ಶಿವಮೊಗ್ಗ ನಗರ ಸ್ಮಾರ್ಟ್ ಸಿಟಿ ಆಗಲೇ ಇಲ್ಲ. ಕೇವಲ 12 ವಾರ್ಡ್ ಗಳಲ್ಲಿ ಮಾತ್ರ ಕಾಮಗಾರಿ ಅದು ಕಳಪೆಯಾದ ಕಾಮಗಾರಿ ನಡೆಯುತ್ತಿದೆ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಜಕಾಲವೆ
ರಾತ್ರಿ ಕೇವಲ 2 ಗಂಟೆ ಅವಧಿ ಮಳೆಗೆ ತಗ್ಗು ಪ್ರದೇಶದ ಮನೆಗಳಿಗೆ ನೀರು..ನುಗ್ಗಿದೆ...ಇನ್ನೇನಾದರೂ ದಿನವಿಡಿ ಶಿವಮೊಗ್ಗ ದಲ್ಲಿ ಮಳೆಯಾದರೇ ಏನಾಗಬಹುದು ಯೋಚನೆ ಮಾಡಿ ನೋಡಿ.....ಸ್ಮಾರ್ಟ್ ಸಿಟಿ ಅಧಿಕಾರಿಗಳೇ ಪಾಲಿಕೆ ಇಂಜಿನಿಯರ್ ಗಳೇ,ಸದಸ್ಯರು ಗಳೇ ನಿಮ್ಮಗಳ ಎರಡು ಕಣ್ತೆರೆದು ನೋಡಿ..
ಇದು ಶಿವಮೊಗ್ಗ ಸ್ಮಾರ್ಟ್ ಸಿಟಿನಾ? ಒಂದು ಬಾರಿ ಈ ರೀತಿಯ ಘಟನೆಗಳು ಆದರೆ ಏನು ಮಾಡುವುದಕ್ಕೆ ಆಗುವುದಿಲ್ಲ.ಅದು ನಮಗೂ ಗೊತ್ತಾಗುತ್ತದೆ. ಆದರೇ ಪದೇ ಪದೇ ಇದೇ ರೀತಿಯಲ್ಲಿ ಮನೆಗೆ ನೀರು ನುಗ್ಗಿ ಅವಘಡ ಸಂಭವಿಸಿದಾಗ ಕಷ್ಟ ನಷ್ಟ ಗಳು ಆದಾಗ ಯಾರನ್ನು ಕೇಳುವುದು... ತಗ್ಗು ಪ್ರದೇಶಗಳಲ್ಲಿನ ಜನರು ಮೇಯರ್, ಕಮೀಷನರ್ ರವರಿಗೆ, ಪಾಲಿಕೆ ಸದಸ್ಯ ರಿಗೆ ಮತ್ತು ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತ ಇದ್ದಾರೆ, ಆಕ್ರೋಶ ವ್ಯಕ್ತಪಡಿಸುತ್ತಾ ಇದ್ದಾರೆ.
ಶಿವಮೊಗ್ಗ ನಗರದ ಸ್ಮಾರ್ಟ್ ಸಿಟಿ ಅಧಿಕಾರಿಗಳು ಮತ್ತು ಇಂಜಿನಿಯರ್ ಗಳು ನಾಪತ್ತೆಯಾಗಿದ್ದಾರೆ. ಅವರನ್ನು ಹುಡುಕಿಕೊಡಿ ಎಂದು ಹಲವಾರು ಬಡಾವಣೆಯ ನಿವಾಸಿಗಳು ಕೇಳುತ್ತಿದ್ದಾರೆ.ಇವರಿಗೆ ನಾಚಿಕೆ ಮರ್ಯಾದೆ ಏನಾದರೂ ಇದ್ದರೆ ಇನ್ನು ಮುಂದೆ ಇಂತಹ ಘಟನೆಗಳು ಮರುಕಳುಹಿಸದಂತೆ ಎಚ್ಚತ್ತುಕೊಳ್ಳಬೇಕು. ಸಮಸ್ಯೆ ಬಗೆಹರಿಸಲು ಶ್ರಮಿಸಬೇಕು. ಪದೇ ಪದೇ ಸ್ವಲ್ಪ ಮಳೆಯಾದರೇ ಮನೆಗಳಿಗೆ ನೀರು ನುಗ್ಗುತ್ತಿದ್ದರೇ, ತಗ್ಗು ಪ್ರದೇಶದ ಜನರು ಓಡಾಡಿಸಿಕೊಂಡು ಹೊಡೆಯುವ ಕಾಲ ಬರುತ್ತದೆ .
ಶಿವಮೊಗ್ಗ ಕಮಲಾ ನೆಹರು ಮಹಿಳಾ ಕಾಲೇಜಿನ ಹಿಂಭಾಗದ ರಾಜಾ ಕಾಲುವೆ ನಿನ್ನೆ ಬಿದ್ದ ಭಾರೀ ಮಳೆಗೆ ಬ್ಲಾಕ್ ಆಗಿದ್ದರ ಪರಿಣಾಮ ಕೊಳಚೆ ನೀರು ಕಾಲೇಜಿನ ಆವರಣದೊಳಗೆ ನುಗ್ಗಿ ರಾದ್ದಾಂತ ಎಬ್ಬಿಸಿದೆ.
ಈ ಹಿನ್ನೆಲೆಯಲ್ಲಿ ಪಾಲಿಕೆ ಸದಸ್ಯ ಚೆನ್ನಿ, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಟಿ ಪರಿಶೀಲಿಸಿದರು. ಸ್ಮಾರ್ಟ ಸಿಟಿ ಅಡಿಯಲ್ಲಿ ಈ ಸ್ಥಳದಲ್ಲಿ ಫುಟ್ ಪಾತ್ ಕೆಲಸ ಮುಗಿದಿದೆ. ಈಗ ದುರಸ್ತಿಗಾಗಿ ಅಗೆಯುವ ಕೆಲಸ ಆರಂಭವಾಗಿದೆ.ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಬಹುಮಾನ ಸದ್ಯದಲ್ಲಿಯೇ ಘೋಷಣೆ ಯಾಗಲಿದೆ.
ನಾಗರೀಕ ಹಿತರಕ್ಷಣೆ ವೇದಿಕೆ ವಸಂತ್ ಕುಮಾರ್ ಮತ್ತು ಅವರ ಕಾರ್ಯಕರ್ತರು ಸಾಕಷ್ಟು ಬಾರಿ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳಿಗೆ ಸ್ಮಾರ್ಟ್ ಸಿಟಿ ಕಳಪೆ ಕಾಮಗಾರಿಯ ಬಗ್ಗೆ ದೂರು ಮತ್ತು ಮನವಿ ನೀಡಿದರೂ ಪ್ರಯೋಜನವಾಗಲಿಲ್ಲ...
ನಮ್ನ ಉಸ್ತುವಾರಿ ಸಚಿವರು ನಾರಾಯಗೌಡರವರು ಶಿವಮೊಗ್ಗ ದಲ್ಲಿ ಕೆಡಿಪಿ ಮೀಟಿಂಗ್ ಅಟೆಂಡ್ ಮತ್ತು ಬಾಗಿನಾ ಬಿಡುವುದಕ್ಕೆ ಸೀಮಿತ... ಜನರ ಗೋಳು ಕೇಳುವುದಕ್ಕೆ ಸಮಯವಿಲ್ಲ. ಮನೆಗಳಿಗೆ ನೀರು ನುಗ್ಗಿದ ಪ್ರದೇಶದಲ್ಲಿ ಯಾದರೂ ಅಧಿಕಾರಿಗಳೋಂದಿಗೆ ಬೇಟಿ ನೀಡುವುದು ಬೇಡವಾ? ಇದೆಲ್ಲ ಮುಖ್ಯ ಅಲ್ಲ.. ನಮ್ಮ ಸಚಿವರಿಗೆ.... ಮುಂದೇನಾಗುವುದು ಕಾದು ನೋಡಬೇಕು....
Leave a Comment