ದೆಹಲಿಯ ಜಂತರ್ ಮಂತರ್ ನಲ್ಲಿ ಆಗಸ್ಟ್ 16 ರಿಂದ ನಿರುದ್ಯೋಗದ ವಿರುದ್ಧ ಉದ್ಯೋಗ ಚಳುವಳಿ
ಶಿವಮೊಗ್ಗ : ದೆಹಲಿಯ ಜಂತರ್ ಮಂತರ್ ನಲ್ಲಿ ಆಗಸ್ಟ್ 16 ರಿಂದ ನಿರುದ್ಯೋಗದ ವಿರುದ್ಧ ಉದ್ಯೋಗ ಚಳುವಳಿಯನ್ನು ಆರಂಭಿಸಲಾಗುತ್ತಿದೆ ಎಂದು ದೇಶ್ ಕಿ ಬಾತ್ ಫೌಂಡೇಶನ್ ರಾಜ್ಯ ಸಂಯೋಜಕ ಮಹಮ್ಮದ್ ರಫೀ ತಿಳಿಸಿದರು.
ಪ್ರೆಸ್ ಟ್ರಸ್ಟ್ ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂಯುಕ್ತ ರೋಜ್‌ಗಾರ್ ಆಂದೋಲನ ಸಮಿತಿ (SRAS)ಯು ಆಗಸ್ಟ್ 16 ರಿಂದ ಉದ್ಯೋಗ ಚಳವಳಿಯನ್ನು ನಡೆಸಲಿದೆ. ದೇಶಾದ್ಯಂತ ಸಾವಿರಾರು ಸಂಸ್ಥೆಗಳು ಮತ್ತು ಅವರ ಸದಸ್ಯರು, ಈ ಉದ್ಯೋಗ ಚಳವಳಿಯಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.
ಈ ಉದ್ಯೋಗ ಚಳುವಳಿಯ ಮೂಲಕ ಸಂಯುಕ್ತ ರೋಜ್‌ಗಾರ್ ಆಂದೋಲನ ಸಮಿತಿಯು ದೇಶದ ಪ್ರತಿಯೊಬ್ಬ ನಾಗರಿಕರಿಗೂ ಗೌರವಾನ್ವಿತ ಉದ್ಯೋಗವನ್ನು ಖಾತರಿಪಡಿಸಲು, ರಾಷ್ಟ್ರೀಯ ಉದ್ಯೋಗ ನೀತಿಯನ್ನು ರೂಪಿಸಲು ಮತ್ತು ಕಾನೂನುಬದ್ದಗೊಳಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ಹೇಳಿದರು.
ದೇಶ್ ಕಿ ಬಾತ್ ಡಿಸೆಂಬರ್ 20, 2021 ರಂದು ರಾಷ್ಟ್ರೀಯ ಉದ್ಯೋಗ ನೀತಿಯ ಕರಡನ್ನು ಜ್ಞಾಪನಾ ಪತ್ರದ ಮೂಲಕ ಪ್ರಧಾನ ಮಂತ್ರಿಗೆ ಹಸ್ತಾಂತರಿಸಿ ಮತ್ತು ಸುಮಾರು 500 ಜಿಲ್ಲೆಗಳಿಂದ ಜಿಲ್ಲಾಧಿಕಾರಿಗಳ ಮೂಲಕ
ಮುಖ್ಯಮಂತ್ರಿಗಳಿಗೆ ಜ್ಞಾಪಕ ಪತ್ರವನ್ನು ಸಲ್ಲಿಸಿರುತ್ತಾರೆ. ಆದರೆ ಇನ್ನೂ ಯಾವುದೇ ಪ್ರತಿಕ್ರಿಯೆ ಕೇಂದ್ರ ಸರ್ಕಾರದಿಂದ ಬರಿದಿರುವುದಿಲ್ಲ. ಆದ್ದರಿಂದ ದೇಶ್ ಕಿ ಬಾತ್ ಫೌಂಡೇಷನ್ ಮತ್ತು ಎಸ್ಆರ್ ಎಎಸ್ ವತಿಯಿಂದ ಚಳುವಳಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಎಸ್ಆರ್ ಎಎಸ್ ನಲ್ಲಿ ಯುವಕರು, ವಿದ್ಯಾರ್ಥಿಗಳು, ಶಿಕ್ಷಕರು, ವ್ಯಾಪಾರಸ್ಥರು, ರೈತರು, ಮಹಿಳೆಯರು, ಪತ್ರಕರ್ಕರು, ದಲಿತರು, ಬುಡಕಟ್ಟುಗಳು, ಎನ್ ಜಿಓ ಗಳು ಸೇರಿದಂತೆ ಸುಮಾರು ಒಂದು ಸಾವಿರ ಸಂಘಟನಗಳದ ಮತ್ತು ಎಲ್ಲಾ ಸಂಘಟನೆಗಳಿವೆ. ಅವೆಲ್ಲವೂ ಎಸ್ಆರ್ಎಎಸ್ ಗೆ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದಾರೆ ಎಂದರು.
ಗೋಷ್ಠಿಯಲ್ಲಿ ಶಹರಾಜ್ ಮುಜಾಹಿದ್ ಸಿದ್ದಕಿ, ಸೈಯದ್ ಅಹಮದ್, ಅಮ್ಜದ್ ಖಾನ್ ಉಪಸ್ಥಿತರಿದ್ದರು.
Leave a Comment