*ಅಲ್ಪಸಂಖ್ಯಾತರಿಗೆ ಸೌಲಭ್ಯ ನೀಡಲು ಅರ್ಜಿ ಆಹ್ವಾನ*
ಶಿವಮೊಗ್ಗ ಜೂನ್ 06 : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮ ಶಿವಮೊಗ್ಗದ ವತಿಯಿಂದ 2022-23 ನೇ ಸಾಲಿಗೆ ಅಲ್ಪಸಂಖ್ಯಾತ ಸಮುದಾಯಗಳಾದ ಕ್ರೈಸ್ತರು, ಮುಸಲ್ಮಾನರು, ಜೈನರು, ಆಂಗ್ಲೋ ಇಂಡಿಯನ್ಸ್, ಬೌದ್ದರು, ಸಿಖ್ಖರು ಮತ್ತು ಪಾರ್ಸಿ ಜನಾಂಗದವರಿಗೆ ವಿವಿಧ ಯೋಜನೆಯಡಿ ಸೌಲಭ್ಯ ನೀಡಲು ಆನ್‍ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ಶ್ರಮ ಶಕ್ತಿ ಸಾಲ ಯೋಜನೆಯಡಿ ರೂ.50,000 ಗಳ ಒಳಗೆ ಶೇ.4 ರ ಬಡ್ಡಿದರದಲ್ಲಿ ಶೇ.50 ರಷ್ಟು ಸಾಲ ಮತ್ತು ಶೇ.50 ರಷ್ಟು ಸಹಾಯಧನ ನೀಡಲಾಗುವುದು. ಸ್ವಯಂ ಉದ್ಯೋಗ ಯೋಜನೆಯಡಿ ರಾಷ್ಟ್ರೀಕೃತ ಬ್ಯಾಂಕುಗಳ ಸಹಯೋಗದೊಂದಿಗೆ ಘಟಕ ವೆಚ್ಚದ ಶೇ.33 ಅಥವಾ ಗರಿಷ್ಟ ಮಿತಿ ರೂ.1,00,000 ಗಳವರೆಗೆ ಸಹಾಯಧನ ನೀಡಲಾಗುವುದು. ಆಟೊ ರಿಕ್ಷಾ/ಟ್ಯಾಕ್ಸಿ/ಸರಕು ವಾಹನಗಳ ಖರೀದಿಗೆ ಸಹಾಯಧನ ಯೋಜನೆಯಡಿ ಆಟೋ ರಿಕ್ಷಾ ಖರೀದಿಗಾಗಿ ರೂ.75,000 ಸಹಾಯಧನ ಮತ್ತು ಟ್ಯಾಕ್ಸಿ/ಸರಕು ವಾಹನ ಮೌಲ್ಯದ ಶೇ.33 ರಷ್ಟು ಗರಿಷ್ಟ ರೂ.2,50,000 ವರೆಗೆ ಸಹಾಯಧನ ನೀಡಲಾಗುವುದು.
ಅಭ್ಯರ್ಥಿಯ ವಯಸ್ಸು 18 ರಿಂದ 55 ವರ್ಷದೊಳಗಿದ್ದು, ಶ್ರಮಶಕ್ತಿ ಸಾಲ ಯೋಜನೆಗೆ ಕುಟುಂಬದ ವಾರ್ಷಿಕ ಆದಾಯ ರೂ.3,50,000 ದೊಳಗೆ ಇರಬೇಕು. ಸ್ವಯಂ ಉದ್ಯೋಗ ಯೋಜನೆಗೆ ಗ್ರಾಮೀಣ ಪ್ರದೇಶದವರಿಗೆ ವಾರ್ಷಿಕ ಆದಾಯ ರೂ.81,000, ನಗರ ಪ್ರದೇಶದವರಿಗೆ ರೂ.1,03,000 ಕ್ಕಿಂತ ಕಡಿಮೆ ಇರಬೇಕು.
ಅರ್ಜಿದಾರರು ಆನ್‍ಲೈನ್ ಅರ್ಜಿಯ ಹಾರ್ಡ್‍ಕಾಪಿಯನ್ನು www.kmdconline.karnataka.gov.in ಇಲ್ಲಿ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಜೂನ್ 15 ರೊಳಗಾಗಿ ಜಿಲ್ಲಾ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ (ನಿ), ನಂಜಪ್ಪ ಆಸ್ಪತ್ರೆ ಮುಂಭಾಗ ರಸ್ತೆ, ಅಚ್ಯುತರಾವ್ ಲೇಔಟ್, 4ನೇ ತಿರುವು, ಶಿವಮೊಗ್ಗ ದೂ.ಸಂ: 08182-228262 ಸಂಪರ್ಕಿಸಬಹುದು ಹಾಗೂ ವೆಬ್‍ಸೈಟ್‍ನ್ನು ವೀಕ್ಷಿಸಬಹುದೆಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
==========
Leave a Comment