ಹಿರಿಯ ಪತ್ರಕರ್ತ ಕೆ.ಬಿ.ರಾಮಪ್ಪ ನಿಧನ: ಪ್ರೆಸ್ ಟ್ರಸ್ಟ್ ನಿಂದ ಸಂತಾಪ- ಶ್ರದ್ಧಾಂಜಲಿ

ಶಿವಮೊಗ್ಗ: ನಿನ್ನೆ ನಿಧನರಾದ ಶಿವಮೊಗ್ಗ ಟೈಮ್ಸ್ ಸಂಸ್ಥಾಪಕ ಸಂಪಾದಕ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವಾಲ್ಮಿಕಿ ಸಮಾಜದ ಮುಖಂಡ ಕೆ.ಬಿ.ರಾಮಪ್ಪ ಅವರಿಗೆ ಪ್ರೆಸ್‌ಟ್ರಸ್ಟ್ ವತಿಯಿಂದ ಇಂದು ಬೆಳಿಗ್ಗೆ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಮಾತನಾಡಿ, ಕೆ.ಬಿ. ರಾಮಪ್ಪ ಅವರದು ಸಜ್ಜನಿಕೆಯ ವ್ಯಕ್ತಿತ್ವ. ನಲವತ್ತು ವರ್ಷಗಳಿಂದ ಅವರ ಒಡನಾಟ ಇತ್ತು. ಅವರ ಎಲ್ಲ ಕಷ್ಟ ಸುಖದಲ್ಲಿ ಭಾಗಿಯಾದ್ದ ನನಗೆ ಅವರೊಬ್ಬ ಮಾರ್ಗದರ್ಶಕದಂತಿದ್ದರು. 
ಮಾರಿಕಾಂಬ ದೇವಾಲಯದಲ್ಲಿ ಅವರು ದೇವಿ ಅಲಂಕಾರದಲ್ಲಿ ಸಿದ್ದಹಸ್ತರಾಗಿದ್ದರು. ಪತ್ರಿಕೋದ್ಯಮದಲ್ಲಿ ಅವರು ಅಗಾಧ ಅನುಭವ ಹೊಂದಿದ್ದರು. ರಾಮಪ್ಪ ಅವರ ನಿಧನ ಮನೆಯ ಸದಸ್ಯರನ್ನು ಕಳೆದುಕೊಂಡAತಾಗಿದೆ ಎಂದರು.
ಹಿರಿಯ ಪತ್ರಕರ್ತರಾದ ಶೃಂಗೇಶ್ ಮಾತನಾಡಿ, ರಾಮಪ್ಪ ಅವರು ಪ್ರೀತಿಯ ಮನುಷ್ಯ. ಅವರಿಗೆ ಸಜ್ಜನಿಕೆ ಇತ್ತು. ನಿಷ್ಕಲ್ಮಶ ಹೃದಯದವರು. ಸದಾ ಕ್ರಿಯಾಶೀಲರಾಗಿದ್ದ ರಾಮಪ್ಪ ಅವರು ಎಲ್ಲರೊಂದಿಗೆ ಸಹಜವಾಗಿ ಬೆರೆಯುತ್ತಿದ್ದರು ಅವರ ಅಗಲಿಕೆ ನೋವು ತಂದಿದೆ ಎಂದರು.
ವೈ.ಕೆ. ಸೂರ್ಯನಾರಾಯಣ್ ಮಾತನಾಡಿ, ಕೆ.ಬಿ.ರಾಮಪ್ಪ ಅವರು ಕಷ್ಟಕಾಲದಲ್ಲಿ ಪತ್ರಿಕೆ ನಡೆಸುತ್ತಿದ್ದರು. ಅವರು ಸರಳಸಜ್ಜನಿಕೆ ಎಲ್ಲರಿಗೂ ಮಾದರಿಯಾಗಿತ್ತು. ಅವರು ದೈವ ಭಕ್ತರು ಆಗಿದ್ದರು. ದೇವಿಯ ಅಲಂಕಾರ ಮಾಡುವುದರಲ್ಲಿ 
ನಿಪುಣರಾಗಿದ್ದರು ಎಂದರು.
ಅಂಕಣಕಾರ ಎಂ.ಎನ್.ಸುಂದರಾಜ್ ಮಾತನಾಡಿ, ಪತ್ರಕರ್ತರಿಗೆ ಮಾದರಿಯಾದ ವ್ಯಕ್ತಿತ್ವವನ್ನು ಕೆ.ಬಿ.ರಾಮಪ್ಪ ಅವರು ಹೊಂದಿದ್ದರು. ಮುದ್ರಣ ಕೆಲಸದ ಮೂಲಕ ಮಾಧ್ಯಮ ಕ್ಷೇತ್ರಕ್ಕೆ ಬಂದಿದ್ದ ಅವರಿಗೆ ಯು.ಆರ್.ಅನಂತಮೂರ್ತಿ, ಜೆ.ಹೆಚ್.ಪಟೇಲ್, ಅವರ ಒಡನಾಟ ಇತ್ತು. ಸಮಾಜವಾದಿ ಸಿದ್ಧಾಂತದ ಒಲವು ಹೊಂದಿದ್ದ ರಾಮಪ್ಪ ಅವರು ಕೊನೇ ತನಕ ಸರಳ ಸಜ್ಜನಿಕೆಯ ವ್ಯಕ್ತಿತ್ವ ರೂಪಿಸಿಕೊಂಡಿದ್ದರು. 
ನಾಲ್ಕುದಶಕಗಳ ಕಾಲ ಶಿವಮೊಗ್ಗದ ಎಲ್ಲ ಆಗುಹೋಗುಗಳಿಗೆ ಸಾಕ್ಷಿಪ್ರಜ್ಞೆಯಂತೆ ರಾಮಪ್ಪ ಅವರು ಬದುಕಿದ್ದರು ಎಂದರು.
ಕಾರ್ಯದರ್ಶಿ ನಾಗರಾಜ್ ನೇರಿಗೆ, ಮಾತನಾಡಿ, ರಾಮಣ್ಣ ಅವರಲ್ಲಿ ಸಮಾಜವಾದದ ನಡೆ ಇತ್ತು. ಅನೇಕ ರಾಜಕಾರಣಿಗಳು ಅವರ ಒಡನಾಡಿಯಾಗಿದ್ದರು ಎಂದರು.
ಹಿರಿಯ ಪತ್ರಕರ್ತ ವಿವೇಕ್ ಮಹಾಲೆ ಮಾತನಾಡಿ, ಹಿರಿಯ ಪತ್ರಕರ್ತರ ಅನುಭನಗಳು ಕಿರಿಯರಿಗೆ ಮಾರ್ಗದರ್ಶನವಾಗುತ್ತವೆ. ರಾಮಪ್ಪನವರ ಅನೇಕ ನೆನಪುಗಳನ್ನು ಬಿಟ್ಟು ಹೋಗಿದ್ದಾರೆ ಎಂದರು.
ಶ್ರದ್ಧಾಂಜಲಿ ಸಭೆಯಲ್ಲಿ ಪತ್ರಕರ್ತರಾದ ಜೇಸುದಾಸ್, ಪಿ.ಸಿ.ನಾಗರಾಜ್, ಜೋಸೆಫ್ ಟೆಲ್ಲಿಸ್, ಲಕ್ಷ್ಮಿಪ್ರಸಾದ್, ಶಿವಮೊಗ್ಗ ನಾಗರಾಜ್, ಕಿರಣ್ ಕಂಕಾರಿ, ಹಾಲಸ್ವಾಮಿ, ವಿಜಯ್‌ಕುಮಾರ್, ಅಲೀಂ, ನಾಗರಾಜ್ ಚಟ್ನಹಳ್ಳಿ ಮತ್ತಿತರರು ಭಾಗವಹಿಸಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.